ಮಡಿಕೇರಿ, ಜು. ೩೧: ಓಂ ಯುವಕ ಸಂಘದ ಆಶ್ರಯದಲ್ಲಿ ಎರಡನೇ ವರ್ಷದ ಹಿಂದೂ ಕಪ್ ಕೆಸರುಗದ್ದೆ ಅರ್ವತೋಕ್ಲುವಿನ ಶ್ರೀಪತಿ ಹೆಬ್ಬಾರ್ ಅವರ ಗದ್ದೆಯಲ್ಲಿ ವಿಜೃಂಭಣೆಯಿAದ ನಡೆಯಿತು.
ಸ್ಥಳ ದಾನಿಗಳಾದ ಶ್ರೀಪತಿ ಹೆಬ್ಬಾರ್ ಹಾಗೂ ಬೆಪ್ಪುರನ ಭವಾನಿ ಸುಬ್ರಾಯ ಅವರುಗಳನ್ನು ಗೌರವಿಸಲಾಯಿತು. ಕ್ರೀಡಾಕೂಟದ ಅಧ್ಯಕ್ಷತೆಯನ್ನು ಪೌಡಂಡ ಭೀಮಯ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಂಕರ್ನಾರಾಯಣ ಭಟ್, ಚರುಮಾಡಂಡ ಸತೀಶ್, ದಿನೇಶ್ ಕರುಂಬಯ್ಯ ನೆಯ್ಯಣಿರ ಹೇಮಕುಮಾರ್, ಮೊಟ್ಟೆರ ಪಳಂಗಪ್ಪ ಭಾಗವಹಿಸಿದ್ದರು.
ಕ್ರಿಕೆಟ್, ಹಗ್ಗಜಗ್ಗಾಟ, ರಿಲೆ ಓಟದ ಸ್ಪರ್ಧೆಗಳು ನಡೆದವು. ಕ್ರಿಕೆಟ್ನಲ್ಲಿ ಪ್ರಥಮ- ಎಂಸಿಬಿ ಮದೇನಾಡ್, ದ್ವಿತೀಯ-ಭಗವತಿ ತಂಡ ಬಿ ಪಡೆದುಕೊಂಡವು. ಹಗ್ಗಜಗ್ಗಾಟದಲ್ಲಿ ಕಗ್ಗೊಡ್ಲು ಬಿ ಪ್ರಥಮ, ಆದರ್ಶ ಸಂಪಾಜೆ ದ್ವಿತೀಯ ಸ್ಥಾನ ಪಡೆದುಕೊಂಡವು.
ಸಮಾರೋಪ ಸಮಾರಂಭದಲ್ಲಿ ಭೀಮಯ್ಯ, ಸ್ಥಳ ದಾನಿಗಳು ಭವಾನಿ ಸುಬ್ರಾಯ, ಶಂಕರ್ ನಾರಾಯಣ ಹೆಬ್ಬಾರ್, ಬೆಟ್ಟಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ರ್ಯಾಲಿ ಮಾದಯ್ಯ, ಕೆದಂಬಾಡಿ ಪುಟ್ಟಯ್ಯ, ತೋರೇರ ಲೀಲಾವತಿ, ಚರುಮಾಡಂಡ ಸತೀಶ್, ಚಳಿಯಂಡ ಯತೀಶ್, ವಕೀಲೆ ಜ್ಯೋತಿ ಶಂಕರ್, ಮಾಜಿ ಸೈನಿಕ ಸುದೀಪ್ ಹಾಗೂ ಓಮ್ ಯುವಕ ಸಂಘದ ಸದಸ್ಯರು ಇದ್ದರು.