ಶನಿವಾರಸಂತೆ, ಜು. ೩೦: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ಮದ್ಯ ಮುಕ್ತರಾದ ಶಿಬಿರಾರ್ಥಿಗಳಿಗಾಗಿ ರಚಿಸಲ್ಪಟ್ಟ ನವಜೀವನ ಸಮಿತಿ ಸಭೆಯನ್ನು ಪಟ್ಟಣದ ವಿಜಯ ವಿನಾಯಕ ದೇವಾಲಯದಲ್ಲಿ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಶಿಬಿರಾರ್ಥಿಗಳು ಹಾಗೂ ಅವರ ಕುಟುಂಬದವರು ಪರಸ್ಪರ ಅನಿಸಿಕೆಗಳನ್ನು ಹಂಚಿಕೊAಡು ಮುಂದೆ ಮದ್ಯಪಾನ ಮಾಡುವುದೇ ಇಲ್ಲವೆಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಸಮಿತಿಯ ಸದಸ್ಯರಾಗಿ ಹೊಸ ಜೀವನ ಆರಂಭಿಸುವ ಭರವಸೆ ವ್ಯಕ್ತಪಡಿಸಿದರು. ಯೋಜನೆಯ ಶನಿವಾರಸಂತೆ ವಲಯ ಮೇಲ್ವಿಚಾರಕ ನಾಗರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೇವಾ ಪ್ರತಿನಿಧಿಗಳಾದ ಶೋಭಾವತಿ, ವನಿತಾ, ನವಜೀವನ ಸಮಿತಿ ಸದಸ್ಯರಾದ ರಮೇಶ್, ರುದ್ರಮೂರ್ತಿ, ವೆಂಕಟೇಶ್, ಮಧು, ನಾಗರಾಜ್, ಮಹೇಶ್, ಹೇಮಂತ್, ಪ್ರೇಮಕುಮಾರ್, ವೀರೇಶ್ ಇತರರು ಹಾಜರಿದ್ದರು.