ಕುಶಾಲನಗರ, ಜು. ೩೦: ಇತ್ತೀಚೆಗೆ ನಿರಂತರವಾಗಿ ಸುರಿದ ಮಳೆ ಹಿನ್ನೆಲೆಯಲ್ಲಿ ಕಾವೇರಿ ನದಿ ಪ್ರವಾಹಕ್ಕೆ ಒಳಗಾಗಿ ಕುಶಾಲನಗರ ಸಮೀಪದ ಮುತ್ತಿನ ಮುಳ್ಳುಸೋಗೆ ಗ್ರಾಮದ ಎಕರೆಗಟ್ಟಲೆ ಕಾಫಿ ತೋಟ ಜಲಾವೃತಗೊಂಡು ಗಿಡಗಳು ಸಂಪೂರ್ಣ ನಾಶಗೊಂಡಿವೆ.

ಕುಶಾಲನಗರ ಸಮೀಪದ ವಾಲ್ನೂರು ಬಳಿಯ ಕಾಫಿ ಬೆಳೆಗಾರ ಚೇಂದAಡ ಜೆಮ್ಸಿ ಪೊನ್ನಪ್ಪ ಅವರಿಗೆ ಸೇರಿದ ಪ್ರದೇಶದ ಕಾಫಿ, ಕಾಳುಮೆಣಸು, ತೆಂಗು ಮತ್ತಿತರ ತರಕಾರಿ ಬೆಳೆಗಳು ಮೂರು ದಿನಗಳ ಕಾಲ ನದಿಯ ನೀರು ನಿಂತು ಸಂಪೂರ್ಣ ಹಾನಿಗೆ ಒಳಗಾಗಿವೆ.

ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ಜೆಮ್ಸಿ ಪೊನ್ನಪ್ಪ ಮಾಹಿತಿ ನೀಡಿದ್ದಾರೆ. ಇದೇ ರೀತಿ ಸಮೀಪದ ತೋಟಗಳು ಹೊಲ-ಗದ್ದೆಗಳು ಕೂಡ ಜಲಾವೃತಗೊಂಡು ನಷ್ಟ ಸಂಭವಿಸಿದೆ.