ಕುಶಾಲನಗರ, ಜು. ೩೧: ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಗೆ ಜಿಲ್ಲೆಯಲ್ಲಿ ಪರ್ಯಾಯ ವ್ಯವಸ್ಥೆ ಆಗಬೇಕಾಗಿದೆ ಎಂದು ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಹಾಗೂ ಶಕ್ತಿ ಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟಿçÃಸ್ ಕುಶಾಲನಗರ ಸ್ಥಾನೀಯ ಸಮಿತಿ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾ ಡಿದರು. ಪ್ರಸಕ್ತ ಜಿಲ್ಲೆಯಲ್ಲಿ ಉತ್ಪತ್ತಿ ಯಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರು ಬಳಕೆ ಮಾಡುವ ಘಟಕ ಸ್ಥಾಪನೆ ಮಾಡುವಂತೆ ಚಿದ್ವಿಲಾಸ್ ಸಲಹೆ ನೀಡಿದರು.

ರಾಜ್ಯದ ವಿವಿಧ ಜಾಗಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಖಾಸಗಿ ವ್ಯಕ್ತಿಗಳು ಮುಂದೆ ಬಂದಿದ್ದು ಕುಶಾಲನಗರದಲ್ಲಿ ಈ ಉದ್ಯಮವನ್ನು ಆರಂಭಿಸು ವಂತಾಗಲು ಚೇಂಬರ್ ಯೋಜನೆ ರೂಪಿಸಲು ಅವರು ಕರೆ ನೀಡಿದರು. ಮೈಸೂರು - ಕುಶಾಲನಗರ ಹೆದ್ದಾರಿ ನಿರ್ಮಾಣದ ಬಳಿಕ ವರ್ತಕರ ವ್ಯಾಪಾರದ ಮೇಲೆ ಬೀಳುವ ಪರಿಣಾಮ, ಮಳೆಯಿಂದ ಕುಶಾಲನಗರ ತಗ್ಗು ಪ್ರದೇಶಗಳಲ್ಲಿ ಆಗುವ ಅನಾಹುತಕ್ಕೆ ಶಾಶ್ವತ ಪರಿಹಾರ, ಸರ್ಕಾರಕ್ಕೆ ತೆರಿಗೆ ಪಾವತಿಸದೆ ಶೆಡ್ ನಿರ್ಮಾಣ ಮಾಡಿ ವ್ಯಾಪಾರ ಮಾಡುವುದನ್ನು ಹತೋಟಿಗೆ ತರುವುದು. ಕುಶಾಲನಗರ ಪ್ರವೇಶ ದ್ವಾರದಲ್ಲಿ ಪ್ರವಾಸಿಗರಿಗೆ ಜಿಲ್ಲೆಯಲ್ಲಿ ಶುಚಿತ್ವ ಕಾಪಾಡುವ ಬಗ್ಗೆ ನಾಮಫಲಕ ಹಾಗೂ ಗಡಿ ಭಾಗದ ಕುಶಾಲನಗರದಲ್ಲಿ ಅನಧಿಕೃತ ಚಟುವಟಿಕೆಗಳು ನಡೆಯದಂತೆ ಗಮನಹರಿಸಬೇಕೆಂದು ಚಿದ್ವಿಲಾಸ್ ಅವರು ಕರೆ ನೀಡಿದರು.

ಪ್ರವಾಸೋದ್ಯಮದಿಂದ ಕೊಡಗು ಜಿಲ್ಲೆಯಲ್ಲಿ ಟನ್ ಗಟ್ಟಲೆ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದರಿಂದ ಇಂಟರ್ ಲಾಕ್ ಟೈಲ್ಸ್ ಸೇರಿದಂತೆ ಹಲವು ವಿವಿಧ ರೀತಿಯಲ್ಲಿ ಮರು ಉತ್ಪಾದನೆ ಮಾಡುವ ಕೈಗಾರಿಕೆಗಳನ್ನು ಸ್ಥಾಪಿಸಿದರೆ ಭೂಮಿಗೂ, ಪರಿಸರಕ್ಕೂ ಉತ್ತಮ ಎಂದ ಅವರು, ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿ ಬಳಸುವುದನ್ನು ತಕ್ಷಣವೇ ನಿಲ್ಲಿಸುವ ಸಂಕಲ್ಪ ಹೊಂದುವAತೆ ಕರೆ ನೀಡಿದರು. ಕುಶಾಲನಗರದಲ್ಲಿ ಚೇಂಬರ್ ಆಫ್ ಕಾಮರ್ಸ್ ಸ್ವಂತ ನಿವೇಶನ ಹೊಂದಿದೆ. ವರ್ತಕರ ಸ್ವಂತ ಭವನ ನಿರ್ಮಾಣ ಮಾಡಲು ಕರೆ ನೀಡಿ, ಸಭೆಯಲ್ಲಿ ಹಾಜರಿದ್ದ ವರ್ತಕರಿಂದ ಅಂದಾಜು ೧೦ ಲಕ್ಷ ರೂಪಾಯಿ ದೇಣಿಗೆ ನೀಡುವ ಬಗ್ಗೆ ವಾಗ್ದಾನ ಮಾಡಿಸಿದರು.

ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಕುಶಾಲನಗರ ಭಾಗದಲ್ಲಿ ಚೇಂಬರ್ ಆಫ್ ಕಾಮರ್ಸ್ ಮತ್ತಷ್ಟು ಸದೃಢಗೊಳಿಸಬೇಕು. ಸ್ವಯಂ ಪ್ರೇರಿತವಾಗಿ ವರ್ತಕರು ಸದಸ್ಯತ್ವ ಪಡೆಯಬೇಕು ಎಂದರು. ಜಿಲ್ಲೆಯ ಒಟ್ಟು ೧೮ ಸ್ಥಾನಿಯ ಸಮಿತಿಯಲ್ಲಿ ೧೦ ಸಮಿತಿಗಳು ಚಟುವಟಿಕೆ ರಹಿತವಾಗಿವೆ. ಅಂತಹ ಸಮಿತಿಗಳಿಗೆ ಜಿಲ್ಲಾ ಚೇಂಬರ್ ಮೂಲಕ ಶಕ್ತಿ ನೀಡುವ ಉದ್ದೇಶವನ್ನು ಹೊಂದಿ ದ್ದೇವೆ. ಆದಷ್ಟು ಬೇಗ ಆ ಕಾರ್ಯ ವನ್ನು ಜಿಲ್ಲಾ ಸಮಿತಿ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಕುಶಾಲನಗರ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಮತ್ತು ಇತ್ತೀಚೆಗೆ ಡಾಕ್ಟರೇಟ್ ಪದವಿ ಪಡೆದ ಕುಶಾಲನಗರದ ವೈಷ್ಣವಿ ಅವರನ್ನು ಗೌರವಿಸಿ ಸನ್ಮಾನಿಸ ಲಾಯಿತು. ಈ ಸಂದರ್ಭ ಮಾತನಾಡಿದ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ಅವರು ವ್ಯಾಪಾರದಲ್ಲಿ ಆರೋಗ್ಯಕರ ಪೈಪೋಟಿ ಇರಬೇಕು. ಪಟ್ಟಣ ನಗರಗಳ ಅಭಿವೃದ್ಧಿಯಲ್ಲಿ ವರ್ತಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.ಕುಶಾಲನಗರ ಸ್ಥಾನೀಯ ಸಮಿತಿಯ ಅಧ್ಯಕ್ಷ ಬಿ. ಅಮೃತ್‌ರಾಜ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನಿರ್ದೇಶಕರಾದ ಎಸ್.ಕೆ. ಸತೀಶ್, ಎಂ.ಡಿ. ರಂಗಸ್ವಾಮಿ, ಉಪಾಧ್ಯಕ್ಷ ರಾದ ಪಿ.ಕೆ. ಜಗದೀಶ್, ಎಂ.ಕೆ. ದಿನೇಶ್, ಕಾರ್ಯದರ್ಶಿ ರವೀಂದ್ರ ವಿ.ರೈ, ಖಜಾಂಚಿ ಎನ್.ವಿ. ಬಾಬು, ಸಹಕಾರ್ಯದರ್ಶಿ ಕೆ.ಎಸ್. ನಾಗೇಶ್, ನಿರ್ದೇಶಕರಾದ ಜನಾರ್ದನ, ಶರ್ಮ, ಪಿ.ಎಂ. ಮೋಹನ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ವರ್ತಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಹ ಕಾರ್ಯದರ್ಶಿ ಕೆ.ಎಸ್. ನಾಗೇಶ ಹಿಂದಿನ ಮಹಾಸಭೆ ವರದಿ ವಾಚಿಸಿದರು. ಕಾರ್ಯದರ್ಶಿ ರವೀಂದ್ರ ರೈ ಆಡಳಿತ ಮಂಡಳಿ ವರದಿ ವಾಚಿಸಿದರು. ಖಜಾಂಚಿ ಎನ್.ವಿ. ಬಾಬು ಲೆಕ್ಕಪತ್ರ ಮಂಡಿಸಿದರು.

ಉಪಾಧ್ಯಕ್ಷ ಎಂ.ಕೆ. ದಿನೇಶ್ ಸ್ವಾಗತ, ನಿರ್ದೇಶಕ ಎಂ.ಡಿ. ರಂಗಸ್ವಾಮಿ ವಂದಿಸಿದರು.

ನೂತನ ಆಡಳಿತ ಮಂಡಳಿಗೆ ಆಯ್ಕೆ

ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿಯ ನೂತನ ಅಧ್ಯಕ್ಷರಾಗಿ ರವೀಂದ್ರ ವಿ.ರೈ ಮತ್ತು ಕಾರ್ಯದರ್ಶಿಯಾಗಿ ಕೆ.ಎಸ್. ನಾಗೇಶ್ ಅವಿರೋಧವಾಗಿ ಆಯ್ಕೆಯಾದರು. ಉಳಿದ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ನೂತನ ಅಧ್ಯಕ್ಷರಿಗೆ ನೀಡಲಾಯಿತು.