ವೀರಾಜಪೇಟೆ, ಜು. ೩೧: ಐತಿಹಾಸಿಕ ನಾಡಹಬ್ಬ ಗೌರಿ ಗಣೇಶ ಉತ್ಸವ ಸಮಿತಿಗಳ ಒಕ್ಕೂಟದ ವತಿಯಿಂದ ಇತಿಹಾಸ ಪ್ರಸಿದ್ಧ ವೀರಾಜಪೇಟೆ ಗೌರಿ ಗಣೇಶ ಉತ್ಸವದ ಸಿದ್ದತೆ ಬಗ್ಗೆ ನಗರದ ಮೀನುಪೇಟೆ ಮುತ್ತಪ್ಪ ದೇವಸ್ಥಾನದ ಸಭಾಂಗಣದಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ವೀರಾಜಪೇಟೆ ಇತಿಹಾಸದ ಪ್ರಸಿದ್ಧ ಗೌರಿ ಗಣೇಶ ಉತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡುವಂತೆ, ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ವೀರಾಜಪೇಟೆ ನೂತನ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಉತ್ಸವ ಸಂದರ್ಭ ಸನ್ಮಾನಿಸಲು ತೀರ್ಮಾನಿಸಲಾಯಿತು.
ಈ ಸಂದರ್ಭ ಗೌರಿ ಗಣೇಶ ಉತ್ಸವ ಸಮಿತಿಗಳ ಒಕ್ಕೂಟದ ಅಧ್ಯಕ್ಷ ಬಿ.ಜಿ. ಸಾಯಿನಾಥ್ ನಾಯ್ಕ, ಕಾನೂನು ಸಲಹೆಗಾರ ಟಿ.ಪಿ. ಕೃಷ್ಣ, ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯ ರಜನಿಕಾಂತ್, ಕಾರ್ಯದರ್ಶಿ ಪ್ರದೀಪ್ ರೈ ಸೇರಿದಂತೆ ೨೨ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.