ಚೆಟ್ಟಳ್ಳಿ, ಜು. ೩೦: ಚೆಟ್ಟಳ್ಳಿ ನಿವಾಸಿ ಬಟ್ಟಿರ ವೇಣುಗೋಪಾಲ್ ಎಂಬವರ ತೋಟ ಮತ್ತು ಮನೆಯ ಅಂಗಳಕ್ಕೆ ನುಗ್ಗಿದ ಎರಡು ಕಾಡಾನೆಗಳು ದಾಂಧÀಲೆ ನಡೆಸಿ ಐವತ್ತಕ್ಕೂ ಹೆಚ್ಚು ಬಾಳೆ ಗಿಡಗಳು ಹಾಗೂ ಇನ್ನಿತರ ಸಸ್ಯಗಳನ್ನು ಮುರಿದು ನಷ್ಟ ಉಂಟುಮಾಡಿದೆ. ಮನೆಯ ಕಿಟಕಿಯ ಬಳಿ ಏನೋ ಜೋರಾಗಿ ಸದ್ದು ಬರುತ್ತಿದ್ದ ಕಾರಣ ಎದ್ದು ಕಿಟಕಿಯಿಂದ ನೋಡುವಾಗ ಆನೆಗಳನ್ನು ಕಂಡಿದ್ದರಿAದ ಸದ್ದು ಮಾಡಿ ಓಡಿಸಲಾಯಿತು. ಆದುದರಿಂದ ಇನ್ನು ಹೆಚ್ಚು ನಷ್ಟ ಸಂಭವಿಸುವುದು ತಪ್ಪಿತೆಂದು ವೇಣುಗೋಪಾಲ್ ಹೇಳಿದ್ದಾರೆ.