ಗೋಣಿಕೊಪ್ಪ ವರದಿ, ಜು. ೩೦: ಮಡಿಕೇರಿ ಆಕಾಶವಾಣಿ ಉದ್ಘೋಶಕಿ ಕೂಪದೀರ ಶಾರದಾ ನಂಜಪ್ಪ ಅವರನ್ನು ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ವತಿಯಿಂದ ಭಾರ ತೀಯ ವಿದ್ಯಾ ಭವನ ಸಭಾಂ ಗಣದಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಸನ್ಮಾನಿಸಿ, ರೇಡಿಯೋ ಕೊಡುಗೆಯಾಗಿ ನೀಡಲಾಯಿತು.

ವೇದಿಕೆ ಗೌರವಾಧ್ಯಕ್ಷ ಕಾಟಿ ಮಾಡ ಜಿಮ್ಮಿ ಅಣ್ಣಯ್ಯ ಶಾರದಾ ನಂಜಪ್ಪ ಅವರ ಸೇವೆಯ ಬಗ್ಗೆ ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾರದಾ ನಂಜಪ್ಪ, ೩೦ ವರ್ಷಗಳಿಂದ ಸಾಂಸ್ಕೃತಿಕ, ಪದ್ಧತಿ ಪರಂಪರೆ, ನಾವಿನ್ಯತೆ ಕಾರ್ಯಕ್ರಮ ನೀಡಿರುವುದು ತೃಪ್ತಿ ತಂದಿದೆ ಎಂದರು.

ಈ ಸಂದರ್ಭ ವೇದಿಕೆ ಅಧ್ಯಕ್ಷ ಕೊಟ್ಟ್ಕತ್ತೀರ ಪಿ. ಸೋಮಣ್ಣ, ಸ್ಥಾಪಕ ಅಧ್ಯಕ್ಷ ಚೆಕ್ಕೇರ ಸನ್ನಿ ಸುಬ್ಬಯ್ಯ, ಕಾರ್ಯದರ್ಶಿ ಚೇಂದೀರ ಬೋಪಣ್ಣ, ಖಜಾಂಚಿ ಐನಂಡ ಮಂದಣ್ಣ, ಜಂಟಿ ಕಾರ್ಯದರ್ಶಿ ದೇಯಂಡ ಕಾವೇರಮ್ಮ, ಸಲಹೆಗಾರ ದಾದು ಪೂವಯ್ಯ, ಬೋಜಮ್ಮ, ಕೇಚೆಟ್ಟೀರ ಕಾಮುಣಿ ಪೂಣಚ್ಚ, ಮಾಣಿಪಂಡ ಪಾರ್ವತಿ, ಚಿರಿಯಪಂಡ ರುಕ್ಮಿಣಿ, ಕಾಟಿಮಾಡ ಡಿಕ್ಕಿ ಅಣ್ಣಯ್ಯ, ಲೀಲಾ ಸುಬ್ಬಯ್ಯ, ಪಾರುವಂಗಡ ಸನ್ನಿ ಮೊಣ್ಣಪ್ಪ, ಸುಬ್ರಮಣಿ, ರಾಮಕೃಷ್ಣ, ಚಿಪ್ಪಿ ಕಾರ್ಯಪ್ಪ, ಇಟ್ಟೀರ ಸುಬ್ರಮಣಿ, ಮಲ್ಲಂಡ ರಾಜಾ ಸುಬ್ಬಯ್ಯ, ಮುದ್ದಿಯಂಡ ಸುಬ್ರಮಣಿ ಸುಬ್ಬಯ್ಯ, ಲೌಲಿ ಸೋಮಯ್ಯ, ಉದ್ಘೋಶಕ ಸುಬ್ರಾಯ ಸಂಪಾಜೆ, ಮಡಿಕೇರಿ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಕೊಂಗAಡ ತಿಮ್ಮಯ್ಯ ಹಾಜರಿದ್ದು ಮಾತನಾಡಿದರು.