ಕುಶಾಲನಗರ, ಜು. ೩೦: ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಸ್ಥಾನಿಯ ಸಮಿತಿಯ ಆಶ್ರಯದಲ್ಲಿ ಕುಶಾಲನಗರದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಮೂಲಕ ವರ್ತಕರು ತಮ್ಮ ಉದ್ಯೋಗಿಗಳ ಮಾಹಿತಿ ನೋಂದಣಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಕುಶಾಲನಗರ ಚೇಂಬರ್ ಆಶ್ರಯದಲ್ಲಿ ಕುಶಾಲನಗರ ಪಟ್ಟಣದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ನೋಂದಣಿ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ನಿಯಮದಂತೆ ವರ್ತಕರು ತಮ್ಮ ಉದ್ದಿಮೆಯಲ್ಲಿ ಕೆಲಸ ನಿರ್ವಹಿಸುವವರಿಗೆ ಸಂಬಳ, ಪಿಎಫ್ ಇತ್ಯಾದಿ ಕಡತಗಳನ್ನು ನಿರ್ವಹಿಸುವ ಅಧಿಕಾರಿಗಳು ಮಾಹಿತಿ ಒದಗಿಸಿದರು. ಸಿಬ್ಬಂದಿಗಳಿಗೆ ನೀಡುವ ಸಂಬಳ ಮತ್ತಿತರ ವೇತನಗಳ ದಾಖಲೆಯನ್ನು ಸಮರ್ಪಕವಾಗಿ ಇಟ್ಟುಕೊಳ್ಳುವ ಬಗ್ಗೆ ಕಾರ್ಮಿಕ ಇಲಾಖೆಯ ಅಧಿಕಾರಿ ಲೀನಾ ವಿವರ ಒದಗಿಸಿದರು.
ಕುಶಾಲನಗರ ಪಟ್ಟಣ ಚೇಂಬರ್ ಅಧ್ಯಕ್ಷ ಬಿ.ಅಮೃತ್ ರಾಜ್ ಮಾತನಾಡಿ, ಕುಶಾಲನಗರ ಭಾಗದಲ್ಲಿ ಇತ್ತೀಚೆಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಂದ ಕೆಲವು ದಾಖಲೆಗಳ ನ್ಯೂನತೆ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದ ದಂಡ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ತಕ್ಷಣ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಅಧಿಕಾರಿಗಳು ಮತ್ತು ಉದ್ಯಮಿಗಳ ಕಾರ್ಯಗಾರ ನಡೆಸುವ ಬಗ್ಗೆ ಚಿಂತನೆ ಹರಿಸಲಾಗಿದೆ. ಈ ಮೂಲಕ ವರ್ತಕರಲ್ಲಿ ಜಾಗೃತಿ ಮೂಡಿಸಿ ಒಂದೇ ವೇದಿಕೆಯಲ್ಲಿ ಎಲ್ಲಾ ವರ್ತಕರಿಗೆ ಅನುಕೂಲವಾಗುವ ರೀತಿಯಲ್ಲಿ ನೋಂದಣಿ ಕಾರ್ಯಾಗಾರ ನಡೆಸಿದ್ದೇವೆ. ನಿರೀಕ್ಷೆಗೂ ಮೀರಿ ೧೦೦ಕ್ಕೂ ಅಧಿಕ ವರ್ತಕರು ಸ್ಪಂದಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಚೇಂಬರ್ ನ ಕಾರ್ಯದರ್ಶಿ ರವೀಂದ್ರ.ವಿ.ರೈ, ಬಿ ಆರ್ ನಾಗೇಂದ್ರ ಪ್ರಸಾದ್, ಎಂ.ಡಿ.ರAಗಸ್ವಾಮಿ, ಎಸ್.ಕೆ.ಸತೀಶ್, ಎನ್.ವಿ.ಬಾಬು ಇಲಾಖೆಯ ನೌಕರರು ವರ್ತಕರು ಇದ್ದರು.