ವೀರಾಜಪೇಟೆ, ಜು. ೨೮: ದಂಪತಿ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಪುರಸಭೆ ಸದಸ್ಯ ಸೇರಿ ಮೂವರ ವಿರುದ್ಧ ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ್ಯಂಬ್ಯುಲೆನ್ಸ್ ಚಾಲಕ ಶಿಜೋ ಹಾಗೂ ಅವರ ಪತ್ನಿ ನಿಶಾ ಅವರ ಮೇಲೆ ಪುರಸಭೆ ಸದಸ್ಯ ಮೊಹಮ್ಮದ್ ರಾಫಿ ಸೇರಿದಂತೆ ಇರ್ಷಾದ್ ಮತ್ತು ರಿಯಾಜ್ ಎಂಬವರು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶಿಜೋ ನಗರದ ಟ್ರಸ್ಟ್ ಒಂದರ ಆ್ಯಂಬ್ಯುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆÀಗಷ್ಟೆ ಸ್ವಂತ ಆ್ಯಂಬ್ಯುಲೆನ್ಸ್ ಖರೀದಿಸಿದ್ದರು. ಈ ವಿಚಾರ ತಿಳಿದು ಶಿಜೋನನ್ನು ತಾ. ೨೭ ರಂzತಿಳಿಸಿದ್ದಾರೆ. ಕಛೇರಿಗೆ ತೆರಳಿದ ಶಿಜೋ ಮೇಲೆ ಸಂಸ್ಥೆಯ ಸದಸ್ಯರು ಏಕಾಏಕಿ ಹಲ್ಲೆ ನಡೆಸಿ ಮೊಬೈಲ್ ಕಸಿದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಂಜೆಯಾದರು ಪತ್ನಿ ನಿಶಾ ಅವರ ಕರೆಯನ್ನು ಶಿಜೋ ಸ್ವೀಕರಿಸದಿದ್ದಾಗ ಕರ್ತವ್ಯ ಮುಗಿಸಿ ಸನಿಹದಲ್ಲಿದ್ದ ಕಚೇರಿಗೆ ತೆರಳಿ ಪತಿಯ ಬಗ್ಗೆ ವಿಚಾರಿಸಿದ್ದಾರೆ. ಈ ಸಂದರ್ಭವೂ ಪತ್ನಿ ಮುಂದೆ ಅವಾಚ್ಯ ಶಬ್ದಗಳಿಂದ ಶಿಜೋ ಅವರನ್ನು ನಿಂದನೆ ಮಾಡಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಅಲ್ಲದೆ ಇಬ್ಬರಿಗೂ ಜೀವ ಬೆದರಿಕೆ ಹಾಕಿದ್ದಾರೆ ಎಂದು ದಂಪತಿ ದೂರಿನಲ್ಲಿ ವಿವರಿಸಿದ್ದಾರೆ.

ಇಂದು ಬೆಳಿಗ್ಗೆ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ÀÄ ಮಧ್ಯಾಹ್ನ ಸಂಸ್ಥೆಯ ಕಚೇರಿಗೆ ಬರುವಂತೆ ಟ್ರಸ್ಟ್ನವರು ದಂಪತಿ ವೀರಾಜಪೇಟೆ ನಗರ ಠಾಣೆಗೆ ತೆರಳಿ ಕೊಲೆ ಬೆದರಿಕೆ ಮತ್ತು ಹಲ್ಲೆ ಪ್ರಕರಣ ದಾಖಲಿಸಿದ್ದಾರೆ.