ಚೆಯ್ಯಂಡಾಣೆ, ಜು. ೨೮: ನಾಪೋಕ್ಲು - ವೀರಾಜಪೇಟೆ ಮುಖ್ಯ ರಸ್ತೆಯ (ರಾಜ್ಯ ಹೆದ್ದಾರಿ) ಚೆಯ್ಯಂಡಾಣೆಯಿAದ ಕಡಂಗವರೆಗೆ ರಸ್ತೆ ತೀವ್ರ ಹದಗೆಟ್ಟು ವಾಹನ ಚಲಾಯಿಸಲು ಹರಸಾಹಸ ಪಡುತ್ತಿರುವ ವಾಹನ ಸವಾರರ ಗೋಳು ಒಂದೆಡೆಯಾದರೆ ರಸ್ತೆಯ ಉಭಯ ಬದಿಗಳಲ್ಲಿ ಸೇತುವೆ ಸಮೀಪ ಕಾಡುಗಳು ಬೆಳೆದು ವಾಹನ ಅಪಘಾತಕ್ಕೆ ಕಾರಣವಾಗುತ್ತಿದೆ.

ಕಳೆದ ಬಾರಿ ರಸ್ತೆಯಲ್ಲಿ ಜಲಸ್ಫೋಟಗೊಂಡು ಬಸ್ ಮತ್ತಿತರ ವಾಹನಗಳು ರಸ್ತೆಯಲ್ಲಿ ಸಿಲುಕಿ ತೊಂದರೆ ಅನುಭವಿಸಿದ ಸ್ಥಳಗಳಲ್ಲಿ ಈ ಬಾರಿ ಕೂಡ ನೀರು ರಸ್ತೆಯ ಮಧ್ಯಭಾಗದಲ್ಲಿ ನಿಂತು ಸಮಸ್ಯೆ ಸೃಷ್ಟಿಯಾಗುವ ಆತಂಕ ಮೂಡಿದೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಲೋಕೋಪಯೋಗಿ ಇಲಾಖೆ ಯಾವುದಕ್ಕೂ ತಲೆ ಕೆಡಿಸದೆ ನಿದ್ರೆಯಲ್ಲಿದೆ ಎಂದು ಗ್ರಾಮಸ್ಥರು ಹಾಗೂ ವಾಹನ ಸವಾರರು ತಮ್ಮ ಆಕ್ರೋಶವನ್ನು ಮಾಧ್ಯಮದ ಮೂಲಕ ಹೊರಗೆಡವಿದ್ದಾರೆ.

ಕರಡ ಸೇತುವೆ ಸಮೀಪ ಕಳೆದ ಬಾರಿ ರಸ್ತೆಯ ಮಧ್ಯದಲ್ಲಿ ಜಲ ಉದ್ಭವಗೊಂಡು ಬೃಹತ್ ಗುಂಡಿಯಾಗಿತ್ತು ಹಾಗೂ ಖಾಸಗಿ ಬಸ್ಸೊಂದು ಇದೇ ಗುಂಡಿಯಲ್ಲಿ ಸಿಲುಕಿಕೊಂಡಿತು. ಕರಡ ಸೇತುವೆಯ ಮೇಲೆ ನೀರು ನಿಂತು ವಾಹನ ಸಂಚರಿಸಲು ತೊಡಕಾಗಿದ್ದು ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಬೇಕು. ಕರಡದಿಂದ ಸ್ವಲ್ಪ ಮುಂದೆ ಸಂಚರಿಸಿದರೆ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಜಾಗದಲ್ಲಿ ಕೆರೆ ನಿರ್ಮಿಸಿ ಅದರ ಮಣ್ಣನ್ನು ರಸ್ತೆಯ ಬದಿಯಲ್ಲಿ ಹಾಕಿರುವುದರಿಂದ ರಸ್ತೆಯಲ್ಲಿ ನೀರು ಶೇಖರಣೆಯಾಗಿ ವಾಹನ ಸವಾರರು ತೆರಳುವ ಸಂದರ್ಭ ಅಪಘಾತವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇದಕ್ಕೂ ಕೂಡಲೇ ಕ್ರಮ ಕೈಗೊಳ್ಳಬೇಕು. ಪೊದ್ದಮಾನಿ ಕೆರೆ ಸಮೀಪ ರಸ್ತೆಯಲ್ಲಿ ನೀರು ಹರಿದು ರಸ್ತೆಯಲ್ಲಿ ಬೃಹತ್ ಗುಂಡಿ ನಿರ್ಮಾಣವಾಗಿದೆ.

ವಾಹನಗಳಿಗೆ ಸೈಡ್ ನೀಡಿದರೆ ಇನ್ನೊಂದು ಬದಿಯಿಂದ ಬರುವ ವಾಹನ ಚರಂಡಿಗೆ ಬೀಳುವುದರಲ್ಲಿ ಸಂದೇಹವಿಲ್ಲ. ರಸ್ತೆಯ ಬದಿಯ ತೋಟದ ಕಾಡುಗಳು ರಸ್ತೆಗೆ ಆವರಿಸಿದ್ದು ರಸ್ತೆ ಕಾಣದ ಸ್ಥಿತಿಗೆ ತಲುಪಿದೆ ಕೂಡಲೇ ರಸ್ತೆ ಬದಿಯ ಕಾಡುಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯರ ಒತ್ತಾಯ.

ರಸ್ತೆಯ ಎರಡು ಬದಿಗಳಲ್ಲಿ ಚರಂಡಿ ನಿರ್ಮಿಸಿದರೆ ನೀರು ಸುಗಮವಾಗಿ ಚರಂಡಿಯಲ್ಲಿ ಹರಿದರೆ ರಸ್ತೆಯಲ್ಲಿ ನೀರು ನಿಲ್ಲುವುದಿಲ್ಲ ಹಾಗೂ ರಸ್ತೆ ಹಾಳಾಗುವುದಿಲ್ಲ. ಕರಡ ಪಟ್ಟಣದ ಬ್ಯಾಂಕ್ ಆಫ್ ಬರೋಡ ಮುಂಭಾಗದಲ್ಲಿ ನೀರು ಶೇಖರಣೆಗೊಂಡು ಶಾಲಾ ವಿದ್ಯಾರ್ಥಿಗಳು ಶಾಲೆಗೆ ತೆರಳುವ ಸಂದರ್ಭ ವಾಹನ ಸಂಚರಿಸಿದರೆ ನೀರು ವಿದ್ಯಾರ್ಥಿಗಳ ಮೇಲೆ ಹಾರುತ್ತದೆ ಹಾಗೂ ಕ್ರಮ ಕೈಗೊಳ್ಳಬೇಕು. ಕರಡದಿಂದ ಸ್ವಲ್ಪ ಮುಂದೆ ಸಂಚರಿಸಿದರೆ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಜಾಗದಲ್ಲಿ ಕೆರೆ ನಿರ್ಮಿಸಿ ಅದರ ಮಣ್ಣನ್ನು ರಸ್ತೆಯ ಬದಿಯಲ್ಲಿ ಹಾಕಿರುವುದರಿಂದ ರಸ್ತೆಯಲ್ಲಿ ನೀರು ಶೇಖರಣೆಯಾಗಿ ವಾಹನ ಸವಾರರು ತೆರಳುವ ಸಂದರ್ಭ ಅಪಘಾತವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇದಕ್ಕೂ ಕೂಡಲೇ ಕ್ರಮ ಕೈಗೊಳ್ಳಬೇಕು. ಪೊದ್ದಮಾನಿ ಕೆರೆ ಸಮೀಪ ರಸ್ತೆಯಲ್ಲಿ ನೀರು ಹರಿದು ರಸ್ತೆಯಲ್ಲಿ ಬೃಹತ್ ಗುಂಡಿ ನಿರ್ಮಾಣವಾಗಿದೆ.

ವಾಹನಗಳಿಗೆ ಸೈಡ್ ನೀಡಿದರೆ ಇನ್ನೊಂದು ಬದಿಯಿಂದ ಬರುವ ವಾಹನ ಚರಂಡಿಗೆ ಬೀಳುವುದರಲ್ಲಿ ಸಂದೇಹವಿಲ್ಲ. ರಸ್ತೆಯ ಬದಿಯ ತೋಟದ ಕಾಡುಗಳು ರಸ್ತೆಗೆ ಆವರಿಸಿದ್ದು ರಸ್ತೆ ಕಾಣದ ಸ್ಥಿತಿಗೆ ತಲುಪಿದೆ ಕೂಡಲೇ ರಸ್ತೆ ಬದಿಯ ಕಾಡುಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯರ ಒತ್ತಾಯ.

ರಸ್ತೆಯ ಎರಡು ಬದಿಗಳಲ್ಲಿ ಚರಂಡಿ ನಿರ್ಮಿಸಿದರೆ ನೀರು ಸುಗಮವಾಗಿ ಚರಂಡಿಯಲ್ಲಿ ಹರಿದರೆ ರಸ್ತೆಯಲ್ಲಿ ನೀರು ನಿಲ್ಲುವುದಿಲ್ಲ ಹಾಗೂ ರಸ್ತೆ ಹಾಳಾಗುವುದಿಲ್ಲ. ಕರಡ ಪಟ್ಟಣದ ಬ್ಯಾಂಕ್ ಆಫ್ ಬರೋಡ ಮುಂಭಾಗದಲ್ಲಿ ನೀರು ಶೇಖರಣೆಗೊಂಡು ಶಾಲಾ ವಿದ್ಯಾರ್ಥಿಗಳು ಶಾಲೆಗೆ ತೆರಳುವ ಸಂದರ್ಭ ವಾಹನ ಸಂಚರಿಸಿದರೆ ನೀರು ವಿದ್ಯಾರ್ಥಿಗಳ ಮೇಲೆ ಹಾರುತ್ತದೆ ಹಾಗೂ ಬ್ಯಾಂಕ್‌ಗೆ ಆಗಮಿಸುವ ಗ್ರಾಹಕರ ಮೈಮೇಲೆ ಕೂಡಲೇ ಸಂಬAಧಪಟ್ಟ ಲೋಕೋಪಯೋಗಿ ಇಲಾಖೆ, ಶಾಸಕರು, ಸಂಸದರು ಕ್ರಮ ಕೈಗೊಂಡು ಗ್ರಾಮಸ್ಥರು ಹಾಗೂ ವಾಹನ ಸವಾರರು ಅನುಭವಿಸುವ ತೊಂದರೆಯನ್ನು ನೀಗಿಸುವಂತೆ ಮಾಧ್ಯಮದ ಮೂಲಕ ನಾಗರಿಕರು ಆಗ್ರಹಿಸಿದ್ದಾರೆ.