ಮಡಿಕೇರಿ, ಜು. ೨೮: ಸಾಮಾಜಿಕ ನ್ಯಾಯ, ಸಮಪಾಲು- ಸಮಬಾಳು ಸರಕಾರದ ಗುರಿಯಾಗಿದ್ದು, ಎ.ಎಸ್.ಪೊನ್ನಣ್ಣ ಭರವಸೆಯ ಐದು ಗ್ಯಾರೆಂಟಿಗಳನ್ನು ಪೂರೈಸಿ ನುಡಿದಂತೆ ನಡೆದ ಸರಕಾರವಿದ್ದರೆ ಅದು ಕರ್ನಾಟಕದ ಕಾಂಗ್ರೆಸ್ ಸರಕಾರವಾಗಿದೆ. ಸಮಪಾಲು- ಸಮಬಾಳು ಎಂಬAತೆ ಸಾಮಾಜಿಕ ನ್ಯಾಯದಡಿಯಲ್ಲಿ ಜನರಿಂದ ತೆರಿಗೆರೂಪದಲ್ಲಿ ಸಂಗ್ರಹವಾದ ಹಣವನ್ನು ಜನರಿಗೆ ನಾನಾರೂಪದ ಯೋಜನೆಗಳ ಮೂಲಕ ತಲುಪಿಸುವ ಕೆಲಸ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರಕಾರದ ಮೂಲಕ ಆಗುತ್ತಿದೆ ಎಂದು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು.
ಪೆರಾಜೆ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಪೆರಾಜೆ ಕಾಂಗ್ರೆಸ್ ಸಮಿತಿ ಮತ್ತು ಸಾರ್ವಜನಿಕರಿಂದ ಗೌರವ ಸ್ವೀಕರಿಸಿ, ಸಾರ್ವಜನಿಕ ಅಹವಾಲು ಆಲಿಸಿ ಮಾತನಾಡಿದರು.
ಪೆರಾಜೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಯರಾಮ ಪೆರುಮುಂಡ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆAಕಪ್ಪ ಗೌಡ, ಜಿಲ್ಲಾ ಕಾಂಗ್ರೆಸ್ ಕೊಡಗು ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಸೂರಜ್ ಹೊಸೂರು, ಮಹಿಳಾ ಬ್ಲಾಕ್ ಸಮಿತಿಯ ರಾಜೇಶ್ವರಿ, ಮುಖಂಡ ತೆನ್ನೀರಾ ಮೈನಾ, ಉಮೇಶ ಕುಂಬಳಚೇರಿ, ಸಂಪಾಜೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪಿ.ಎಲ್ ವೇದಿಕೆಯಲ್ಲಿ ಇದ್ದರು.
ಪೆರಾಜೆ ಗ್ರಾ.ಪಂ. ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸುರೇಶ್ ಪೆರುಮುಂಡ ಸ್ವಾಗತಿಸಿದರು. ನಿರಾಜ್ ಪಾಲಡ್ಕ ಮತ್ತು ಲಿಮಿತ ಪೆರುಮುಂಡ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿಯ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆ ಗೊಂಡರು.