ಮಡಿಕೇರಿ, ಜು. ೨೮ : ಆಗಸ್ಟ್ ೧೮ ರಿಂದ ೨೨ರವರೆಗೆ ಜರ್ಮನಿಯಲ್ಲಿ ನಡೆಯಲಿರುವ ಚತುಷ್ಕೋನ ಹಾಕಿ ಸರಣಿಗೆ ಭಾರತ ಜೂನಿಯರ್ ಹಾಕಿ ತಂಡವನ್ನು ಪ್ರಕಟಿಸಲಾಗಿದ್ದು, ತಂಡದಲ್ಲಿ ಕೊಡಗಿನ ಯುವ ಆಟಗಾರ ಚಂದುರ ಪೂವಣ್ಣ ಸ್ಥಾನ ಪಡೆದಿದ್ದಾರೆ. ರಾಜ್ಯದಿಂದ ಪೂವಣ್ಣ ಹಾಗೂ ಗೋಲ್‌ಕೀಪರ್ ಆಗಿ ಹೆಚ್.ಎಸ್. ಮೋಹಿತ್ ತಂಡದಲ್ಲಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಜರುಗಲಿರುವ ಜೂನಿಯರ್ ಹಾಕಿ ವಿಶ್ವಕಪ್‌ಗೆ ಪೂರ್ವ ಸಿದ್ಧತೆಯಾಗಿ ಈ ಪಂದ್ಯಾವಳಿ ಮಹತ್ವದ್ದಾಗಿದೆ. ಭಾರತ, ಜರ್ಮನಿ, ಸ್ಪೇನ್, ಇಂಗ್ಲೆAಡ್ ತಂಡಗಳು ಈ ಪಂದ್ಯಾವಳಿಯಲ್ಲಿ ಸೆಣಸಲಿದೆ. ಪೂವಣ್ಣ ಕಂಡAಗಾಲ ನಿವಾಸಿ ಚಂದುರ ಎಸ್. ಬಾಬಿ ಹಾಗೂ ಅನಿಲ ದಂಪತಿ ಪುತ್ರ.