ಸಿದ್ದಾಪುರ, ಜು. ೨೯: ಒಂಟಿ ಸಲಗವೊಂದು ವಾಹನದ ಮೇಲೆ ದಾಳಿ ನಡೆಸಿದ ಘಟನೆ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದಲ್ಲಿ ನಡೆದಿದೆ. ಗುಹ್ಯ ಗ್ರಾಮದ ಪುಷ್ಪಾ ಮೋಹನ್ ಎಂಬವರ ಮನೆ ಎದುರು ನಿಲ್ಲಿಸಿದ್ದ ಕಾರಿನ ಮೇಲೆ ತಡರಾತ್ರಿ ಒಂಟಿ ಸಲಗ ದಾಳಿ ನಡೆಸಿ ಹಾನಿಗೊಳಿಸಿದೆ.
ಪುಷ್ಪ ಅವರ ಮನೆಯ ಸುತ್ತಲೂ ದಾಂಧÀಲೆ ನಡೆಸಿದ್ದಲ್ಲದೆ ಕೊಳವೆ ಬಾವಿಗೂ ಹಾನಿ ಮಾಡಿದೆ. ಈ ಭಾಗದಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ವಾಹನಗಳು ಕೂಡ ಓಡಾಡಲು ಸಮಸ್ಯೆ ಉಂಟಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿಗಟ್ಟಿದರೂ ಕೂಡ ಕಾಡಾನೆಗಳು ಮರಳಿ ಕಾಫಿ ತೋಟ ದೊಳಗೆ ಬೀಡುಬಿಟ್ಟು, ಕೃಷಿ ಫಸಲು ಗಳನ್ನು ನಾಶಗೊಳಿಸುತ್ತಿವೆ. -ವಾಸು