ಮಡಿಕೇರಿ, ಜು. ೨೯ : ಕೊಡಗು ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯೂತ್ ಹಾಸ್ಟೇಲ್ ಅಸೋಸಿಯೇಶನ್ ಆಫ್ ಇಂಡಿಯಾ (ಮಡಿಕೇರಿ ಘಟಕ), ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ ಹಾಗೂ ಕಗ್ಗೋಡ್ಲು ಕಾವೇರಿ ಯುವ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಆಗಸ್ಟ್ ೧೨ ರಂದು ಕಗ್ಗೋಡ್ಲು ಗ್ರಾಮದ
(ಮೊದಲ ಪುಟದಿಂದ) ದಿ. ಸಿ.ಡಿ.ದೇವಯ್ಯ ಅವರ ಗದ್ದೆಯಲ್ಲಿ ೨೦೨೩-೨೪ನೇ ಸಾಲಿನ ರಾಜ್ಯಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ.
ಕ್ರೀಡಾಕೂಟ ಮತ್ತು ಆಟೋಟ ಸ್ಪರ್ಧೆಯ ಉದ್ಘಾಟನಾ ಸಮಾರಂಭವು ಆಗಸ್ಟ್ ೧೨ ರಂದು ಬೆಳಿಗ್ಗೆ ೯ ಗಂಟೆಗೆ ನಡೆಯಲಿದೆ.
ಸ್ಪರ್ಧೆಗಳ ವಿವರ
ಬೆಳಿಗ್ಗೆ ೯.೩೦ ರಿಂದ ಹಗ್ಗಜಗ್ಗಾಟ ಸಾರ್ವಜನಿಕ ಪುರುಷರ ವಿಭಾಗ
(೯ ಜನರ ತಂಡ), ಹಗ್ಗಜಗ್ಗಾಟ ಸಾರ್ವಜನಿಕ ಮಹಿಳೆಯರ ವಿಭಾಗ (೯ ಜನರ ತಂಡ), ವಾಲಿಬಾಲ್ ಸಾರ್ವಜನಿಕ ಪುರುಷರ ವಿಭಾಗ (೪ ಜನರ ತಂಡ), ಥ್ರೋಬಾಲ್ ಸಾರ್ವಜನಿಕ ಮಹಿಳೆಯರ ವಿಭಾಗ (೬ ಜನರ ತಂಡ), ಪ್ರೌಢಶಾಲಾ ಬಾಲಕಿಯರಿಗೆ ಥ್ರೋಬಾಲ್ ಪಂದ್ಯಾಟ (೮ ರಿಂದ ೧೦ನೇ ತರಗತಿವರೆಗೆ) (೬ ಜನರ ತಂಡ), ಪ್ರೌಢಶಾಲಾ ಬಾಲಕರ ಹಗ್ಗಜಗ್ಗಾಟ ಪಂದ್ಯಾಟ (೮ ರಿಂದ ೧೦ನೇ ತರಗತಿವರೆಗೆ) (೯ ಜನರ ತಂಡ).
ಕೆಸರುಗದ್ದೆ ಓಟದ ಸ್ಪರ್ಧೆಗಳು
ಕಿರಿಯ ಪ್ರಾಥಮಿಕ ಶಾಲಾ ಬಾಲಕರಿಗೆ (೫೦ ಮೀ, ಓಟ), ಕಿರಿಯ ಪ್ರಾಥಮಿಕ ಶಾಲಾ ಬಾಲಕಿಯರಿಗೆ (೫೦ ಮೀ. ಓಟ), ಹಿರಿಯ ಪ್ರಾಥಮಿಕ ಶಾಲಾ ಬಾಲಕರಿಗೆ (೧೦೦ ಮೀ. ಓಟ), ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರಿಗೆ (೧೦೦ ಮೀ. ಓಟ), ಪ್ರೌಢಶಾಲಾ ಬಾಲಕರಿಗೆ (೨೦೦ ಮೀ. ಓಟ), ಪ್ರೌಢಶಾಲಾ ಬಾಲಕಿಯರಿಗೆ (೨೦೦ ಮೀ. ಓಟ), ಪದವಿಪೂರ್ವ ಕಾಲೇಜು ಬಾಲಕರಿಗೆ (೪೦೦ ಮೀ. ಓಟ), ಪದವಿಪೂರ್ವ ಕಾಲೇಜು ಬಾಲಕಿಯರಿಗೆ (೪೦೦ ಮೀ. ಓಟ), ಪದವಿ ಕಾಲೇಜು ಬಾಲಕರಿಗೆೆ (೪೦೦ ಮೀ. ಓಟ), ಪದವಿ ಕಾಲೇಜು ಬಾಲಕಿಯರಿಗೆÉ (೪೦೦ ಮೀ. ಓಟ), ಸಾರ್ವಜನಿಕ ಪುರುಷರ ಮುಕ್ತ ಓಟ (೩೦೦ ಮೀ.), ಸಾರ್ವಜನಿಕ ಮಹಿಳೆಯರ ಮುಕ್ತ ಓಟ (೩೦೦ ಮೀ.) ಹಾಗೂ ಕಗ್ಗೋಡ್ಲು ಗ್ರಾಮಸ್ಥರಿಗೆ ಸಾಂಪ್ರದಾಯಿಕ ನಾಟಿ ಓಟ ಏರ್ಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಪಿ.ಪಿ.ಸುಕುಮಾರ್ ೯೪೮೧೨೧೩೯೨೦, ಬಾಳಾಡಿ ದಿಲೀಪ್ ಕುಮಾರ್ ೮೬೧೮೫೬೮೧೭೩, ಕುಂಜಿಲನ ಎಂ. ಮೋಹನ್ ೯೪೮೦೬೪೬೩೮೨ ಇವರುಗಳನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯಿ ತಿಳಿಸಿದ್ದಾರೆ.