ಸಿದ್ದಾಪುರ, ಜು. ೨೭: ಕಾಡಾ ನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಕೃಷಿ ಫಸಲುಗಳನ್ನು ನಾಶಗೊಳಿಸಿದಲ್ಲದೆ ತೋಟದ ಕಬ್ಬಿಣದ ಗೇಟ್‌ಗಳನ್ನು ಹಾನಿ ಗೊಳಿಸಿದ ಘಟನೆ ಅಭ್ಯತ್ ಮಂಗಲ ಗ್ರಾಮದಲ್ಲಿ ನಡೆದಿದೆ.

ವಾಲ್ನೂರು ಗ್ರಾ.ಪಂ ವ್ಯಾಪ್ತಿಯ ಅಭ್ಯತ್ ಮಂಗಲ ಗ್ರಾಮದ ಹೊಟ್ಟೆಂಗಡ ಭರತ್ ಬೋಪಣ್ಣ ಎಂಬವರ ಕಾಫಿ ತೋಟದೊಳಗೆ ಕಳೆದೆರಡು ದಿನಗಳಿಂದ ಕಾಡಾನೆಗಳ ಹಿಂಡು ಬೀಡು ಬಿಟ್ಟು ತೋಟ ದೊಳಗೆ ದಾಂಧಲೆ ನಡೆಸಿದೆ.

ಅಲ್ಲದೆ ಫಸಲಿರುವ ಕಾಫಿ ಗಿಡಗಳನ್ನು ಹಾಗೂ ಕರಿಮೆಣಸು ಬಳ್ಳಿಗಳನ್ನು ಎಳೆದು ಹಾಕಿ ನಾಶ ಪಡಿಸಿದ್ದು ಅಪಾರ ನಷ್ಟ ಸಂಭ ವಿಸಿದೆಂದು ಭರತ್ ಬೋಪಣ್ಣ ತಿಳಿಸಿದ್ದಾರೆ. ಅಭ್ಯತ್ ಮಂಗಲ ವ್ಯಾಪ್ತಿಯ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು ಕೃಷಿ ಬೆಳೆಗಳನ್ನು ನಾಶಪಡಿಸುತ್ತಿದ್ದು ಕಾಡಾನೆ ಹಾವಳಿ ಯಿಂದ ಜೀವನ ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡರು.

ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಗಳನ್ನು ಕಾಟಾಚಾರಕ್ಕೆ ನಡೆಸುತ್ತಿದ್ದು ಕಾಡಾನೆಗಳು ಕಾಡಿಗೆ ತೆರಳದೇ ಕಾಫಿ ತೋಟಗಳಲ್ಲೇ ಸುತ್ತಾಡುತ್ತಾ ಬೆಳೆಗಳನ್ನು ನಾಶಪಡಿಸುತ್ತಿದೆ ಎಂದು ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕಾಡಾನೆಗಳು ಬೆಳೆಗಳನ್ನು ಹಾನಿಗೊಳಿಸಿದ್ದು ಕೂಡಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ದೇವರ ಕಲ್ಲು ಧ್ವಂಸ

ಭರತ್ ಬೋಪಣ್ಣರ ಕಾಫಿ ತೋಟದೊಳಗೆ ದಾಂಧಲೆ ನಡೆಸಿ ರುವ ಕಾಡಾನೆಗಳು ಅವರ ತೋಟ ದೊಳಗೆ ಪೂಜೆ ಮಾಡುತ್ತಿರುವ ಗುಳಿಗ ದೇವರ ಕಲ್ಲುಗಳನ್ನು ಕಾಡಾನೆಗಳು ತುಳಿದು ಧ್ವಂಸಗೊಳಿ ಸಿದೆ. ಕಾಡಾನೆಗಳ ಹಾವಳಿಯಿಂದ ಈ ಭಾಗದ ಬೆಳೆಗಾರರಿಗೆ ನೆಮ್ಮದಿ ಇಲ್ಲದಂತಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು. -ವಾಸು