ಗೋಣಿಕೊಪ್ಪ ವರದಿ, ಜು. ೨೭: ಹಿತ್ತಲ ಕೈತೋಟದ ಕುರಿತಾಗಿ ವಿಸ್ತರಣಾ ಶಿಕ್ಷಣ ಘಟಕ ಮತ್ತು ಕೆಎಸ್‌ಡಿಎ ಸಹಯೋಗದಲ್ಲಿ ಕಾರ್ಯಾಗಾರ ನಡೆಯಿತು. ತರಕಾರಿ ಬೀಜವನ್ನು ರೈತರಿಗೆ ವಿತರಿಸಲಾಯಿತು.
ಡಿಡಿಎ ಡಾ. ಬಾಲರಾಜ್ ಬಿರದರ್ ಉದ್ಘಾಟಿಸಿ ಕೃಷಿ ಇಲಾಖೆಯಲ್ಲಿ ರೈತರಿಗೆ ಲಭ್ಯವಿರುವ ವಿವಿಧ ಸವಲತ್ತುಗಳ ಬಗ್ಗೆ ತಿಳಿಸಿದರು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಭಾರ ಡೀನ್ ಡಾ. ಜಿ.ಎಂ ದೇವಗಿರಿ ಹಿತ್ತಲು ಕೈತೋಟದ ಮಹತ್ವದ ಬಗ್ಗೆ ತಿಳಿಸಿ, ಸಮಗ್ರ ಕೃಷಿ ವ್ಯವಸ್ಥೆ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದರು.
ಕೃಷಿ ವಿಮಾ ಕಂಪನಿ ಸಂಯೋಜಕಿ ಸ್ಮಿತ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮ ಯೋಜನೆ ಬಗ್ಗೆ ತಿಳಿಸಿಕೊಟ್ಟರು. ವಿಸ್ತರಣಾ ಶಿಕ್ಷಣ ಘಟಕದ ಮುಂದಾಳು, ಡಾ. ಆರ್. ಎನ್ ಕೆಂಚರೆಡ್ಡಿ, ಸಹಪ್ರಾಧ್ಯಾಪಕ ಡಾ. ಎಸ್.ವೈ ಚಂದ್ರಶೇಖರ್, ವ್ಯವಸ್ಥಾಪಕ ಡಾ. ಚೆಂಗರಾಯಪ್ಪ ಇದ್ದರು.