ಮಡಿಕೇರಿ, ಜು. ೨೭:ಶಾಲಾ-ಕಾಲೇಜುಗಳಿಗೆ ಗುರುವಾರ ರಜೆ ನೀಡಲಾಗಿದೆ ಎಂಬ ಸುಳ್ಳು ಸುದ್ದಿಯನ್ನು ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಿನ್ನೆ ಹರಿಬಿಟ್ಟಿದ್ದರು. ಇದನ್ನು ಗಮನಿಸಿದ ಪೋಷಕರಲ್ಲಿ ಗೊಂದಲ ಮೂಡಿತ್ತು. ಜಿಲ್ಲಾಧಿಕಾರಿ ಕಚೇರಿಯ ಮೊಹರು, ಅವರ ಸಹಿಯನ್ನು ನಕಲು ಮಾಡಿ ಪ್ರಕಟಣೆ ಎಂದು ಸಂಶಯ ಬಾರದಂತೆ ನಮೂದಿಸಲಾಗಿತ್ತು.

ಆದರೆ, ಈ ಕುರಿತು ಕೊಡಗು ಡಿಡಿಪಿಐ ಸಿ. ರಂಗಧಾಮಯ್ಯ ರಾತ್ರಿ ಸುಮಾರು ೮ ಗಂಟೆ ವೇಳೆ ಸ್ಪಷ್ಟನೆ ನೀಡಿದ್ದರು. ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಮಾಹಿತಿ ನೀಡಿದ್ದರು. ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆ ಆಗಿರುವ ಹಿನ್ನೆಲೆ ಗುರುವಾರದಿಂದ ಶಾಲಾ ಕಾಲೇಜುಗಳು ಎಂದಿನAತೆ ಆರಂಭವಾಗಲಿದೆ. ಹೆಚ್ಚಿನ ಮಳೆಯಿಂದ

(ಮೊದಲ ಪುಟದಿಂದ) ಸಮಸ್ಯೆ ಇರುವ ಶಾಲೆಗಳಿಗೆ ಆಯಾಯ ವ್ಯಾಪ್ತಿಯ ಕ್ಷೇತ್ರ ಶಿಕ್ಷಣ ಅಧಿಕಾರಿಗಳೇ ರಜೆ ಘೋಷಣೆ ಮಾಡಲು ಆದೇಶ ಹೊರಡಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ ಎಂದು ಡಿಡಿಪಿಐ ಸಿ. ರಂಗಧಾಮಯ್ಯ ಅವರು ವಿವರಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರನ್ನು ಪ್ರಶ್ನಿಸಿದಾಗ ಕಿಡಿಗೇಡಿಗಳ ಪತ್ತೆಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಖಚಿತಪಡಿಸಿದ್ದಾರೆ. ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಸಂತ್ರಸ್ತರಿಗೆ ಸೂಕ್ತ ಪರಿಹಾರ

ಮಳೆ ಮತ್ತು ಅತಿವೃಷ್ಟಿ ಸಂತ್ರಸ್ತರಿಗೆÀ ಪರಿಹಾರ ನೀಡಿಕೆ ಕುರಿತು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರನ್ನು “ಶಕ್ತಿ” ಪ್ರಶ್ನಿಸಿದಾಗ ಮನೆಗಳು ಭಾಗಶಃ ಕುಸಿದಾಗ ಅಂತಹ ಸಂತ್ರಸ್ತರಿಗೆ ತಕ್ಷಣವೇ ರೂ. ೫೦,೦೦೦ ನೀಡಲಾಗುವುದು. ಮನೆ ಸಂಪೂರ್ಣ ಕುಸಿದಾಗ ಅವರಿಗೆ ರಾಜೀವ್‌ಗಾಂಧಿ ವಸತಿ ನಿಗಮದ ಮೂಲಕ ಸ್ಥಳೀಯ ಅಧಿಕಾರಿಗಳು ಸಲ್ಲಿಸುವ ವರದಿಯನ್ನು ಆಧರಿಸಿ ಹಂತ ಹಂತವಾಗಿ ಹೊಸ ಮನೆಗಳ ನಿರ್ಮಾಣಕ್ಕೆ ರೂ. ೫ ಲಕ್ಷದವರೆಗೂ ನೀಡುವ ಅವಕಾಶವಿದೆ ಎಂದು ತಿಳಿಸಿದರು. ಜಾನುವಾರು ನಷ್ಟಕ್ಕೆ ತಕ್ಷಣವೇ ಪರಿಹಾರ ಕಲ್ಪಿಸ ಲಾಗುವುದು. ಬೆಳೆ ನಷ್ಟ ಪರಿಹಾರವನ್ನು ಅಧಿಕೃತ ವರದಿ ಬಂದ ಬಳಿಕ ಸರಕಾರ ನಿಗದಿ ಪಡಿಸಿದ ಪ್ರಮಾಣದಲ್ಲಿ ನೀಡ ಲಾಗುವುದು. ಈ ಮಳೆಗಾಲದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಆದರೆ, ಮುಂಗಾರು ಪೂರ್ವದಲ್ಲಿ ಸೋಮವಾರಪೇಟೆಯಲ್ಲಿ ಹಿಂಗಾರು ಮಳೆಯಿಂದಾಗಿ ವ್ಯಕ್ತಿಯೊಬ್ಬರ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಕುಟುಂಬವೊAದಕ್ಕೆ ಪರಿಹಾರ ಮೊತ್ತವನ್ನು ನೀಡಲಾಗಿದೆ ಎಂದು ಅವರು ವಿವರಿಸಿದರು. ಇದೀಗ ಹಳೆಯ ಕ್ರಮದಲ್ಲಿ ಪರಿಹಾರ ನೀಡಲಾಗುವುದಾದರೂ ಈಗಿನ ಸರ್ಕಾರ ಪರಿಹಾರ ವಿತರಣೆಗೆ ಸಂಬAಧಿಸಿದAತೆ ಶೀಘ್ರದಲ್ಲೇ ನೂತನ ಮಾರ್ಗಸೂಚಿಗಳನ್ನು ಕಳುಹಿಸಲಿದೆ. ಆ ಬಳಿಕ ಹೊಸ ಮಾರ್ಗಸೂಚಿಯಂತೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಡಿ.ಸಿ. ತಿಳಿಸಿದರು.