ಸಿದ್ದಾಪುರ, ಜು. ೨೬: ಸರ್ಕಾರದ ಪಡಿತರ ಯೋಜನೆ ಗ್ರಾಮೀಣ ಭಾಗದ ಜನರಿಗೆ ತಲುಪುತ್ತಿಲ್ಲ ಎಂಬAತೆ ಗುಹ್ಯ ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ ಎರಡು ತಿಂಗಳಿನಿAದ ಪಡಿತರ ಸರಿಯಾಗಿ ವಿತರಣೆಯಾಗದೆ ಸರ್ಕಾರದ ನಿಯಮ ಪಾಲನೆ ಮಾಡದೆ ಪಡಿತರದಾರರನ್ನು ದಿನನಿತ್ಯ ಅಲೆಯುವಂತೆ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ಅನ್ನು ರದ್ದುಪಡಿಸಿ ಇಲಾಖೆ ಮೂಲಕ ಅಕ್ಕಿ ವಿತರಣೆ ಮಾಡಬೇಕೆಂದು ಪಡಿತರದಾರರು ಒತ್ತಾಯಿಸಿದ್ದಾರೆ.

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಹ್ಯ ನ್ಯಾಯಬೆಲೆ ಅಂಗಡಿಯಲ್ಲಿ ೩೦೦ಕ್ಕೂ ಹೆಚ್ಚು ಪಡಿತರ ದಾರರಿದ್ದು, ತಿಂಗಳಿಗೆ ಬರುವ ಅಕ್ಕಿಯಲ್ಲಿ ೧೮೦ ರಿಂದ ೨೦೦ ಮಂದಿಗೆ ಮಾತ್ರ ಸಿಗುತ್ತಿದೆ. ಪಡಿತರದಾರರು ಪ್ರಶ್ನಿಸಿದರೆ ನ್ಯಾಯ ಬೆಲೆ ಅಂಗಡಿ ಯವರು ಆಹಾರ ಇಲಾಖೆಯಿಂದ ವಿತರಣೆ ಆಗುತ್ತಿರುವ ಅಕ್ಕಿ ಕಡಿಮೆ ಬರುತ್ತಿದೆ ಎಂದು ಹೇಳುತ್ತಾರೆ.

ಅಕ್ಕಿ ಸಿಗದವರ ಬೆರಳಚ್ಚು ಮತ್ತು ಒಟಿಪಿಯನ್ನು ಪಡೆದುಕೊಂಡು ಚೀಟಿಯಲ್ಲಿ ಬರೆದು ಕಳುಹಿಸುತ್ತಾರೆ. ಪಡಿತರದಾರರಿಗೆ ಕೆಲವು ತಿಂಗಳು ಗಳಿಂದ ಉಳಿಕೆ, ಬಾಕಿ ಅಕ್ಕಿ ಸಿಗದೇ ಸಮಸ್ಯೆ ಎದುರಿಸುವಂತೆ ಆಗಿದೆ.

ಕೆಲವು ಮಹಿಳೆಯರು ಪ್ರತಿ ಬಾರಿಯೂ ಸಾಲುಗಟ್ಟಿ ನಿಂತರು ೩, ೪ ತಿಂಗಳಿನಿAದ ಅಕ್ಕಿ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕಾಡು ಪ್ರಾಣಿಗಳ ಭಯದ ನಡುವೆ ಬಹುತೇಕ ಕಾರ್ಮಿಕ ಕುಟುಂಬಗಳೇ ಅಧಿಕವಾಗಿದ್ದು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಕುಟುಂಬಗಳು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗೆ ತೆರಳಿ ಅಕ್ಕಿ ಪಡೆದುಕೊಳ್ಳಲು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ.

ಪ್ರತಿ ತಿಂಗಳು ಇಲಾಖೆ ಮೂಲಕ ಸರಬರಾಜಾಗುವ ಅಕ್ಕಿಯನ್ನು ನಿಗದಿತ ಸಮಯ ದಿನಾಂಕದAದು ವಿತರಣೆ ಮಾಡಲು ಸೂಚಿಸಲಾ ಗಿದ್ದರೂ ನ್ಯಾಯಬೆಲೆ ಅಂಗಡಿಯ ವರು ಮಾತ್ರ ಯಾವುದೇ ನಿರ್ದೇ ಶನಗಳನ್ನು ಪಾಲನೆ ಮಾಡದೆ ಸಮ ಯಕ್ಕೆ ಸರಿಯಾಗಿ ಅಕ್ಕಿ ವಿತರಿಸದೆ ದಿನನಿತ್ಯ ಅಲೆಯುವಂತೆ ಮಾಡುತ್ತಿ ದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಕೆಲವು ತಿಂಗಳುಗಳಿAದ ಅಕ್ಕಿ ಸರಿಯಾಗಿ ಸಿಗದೇ, ನಿಯಮ ಪಾಲನೆ ಮಾಡದೆ, ಪಡಿತರದಾರರಿಗೆ ಎರಡು ಮೂರು ತಿಂಗಳಿAದ ತೊಂದರೆ ನೀಡುತ್ತಿರುವ ಬಗ್ಗೆ ಸ್ಥಳೀಯರು ಆಹಾರ ಇಲಾಖೆಗೆ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ವೀರಾಜಪೇಟೆ ತಾಲೂಕಿನ ಆಹಾರ ಪರಿವೀಕ್ಷಕರಾದ ಸೀನಾ ಕುಮಾರಿ ಗುಹ್ಯ ನ್ಯಾಯ ಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿದರು.

ಎಲ್ಲಾ ಪಡಿತರದಾರರಿಗೆ ಇಲಾಖೆ ಮೂಲಕ ನೀಡುತ್ತಿರುವ ಅಕ್ಕಿ ನ್ಯಾಯಬೆಲೆ ಅಂಗಡಿಯಲ್ಲಿ ಕೊರತೆ ಕಂಡು ಬರುತ್ತಿದ್ದು, ಇದಕ್ಕೆ ನ್ಯಾಯಬೆಲೆ ಅಂಗಡಿಯವರೇ ಜವಾಬ್ದಾರರಾ ಗುತ್ತಾರೆ. ಸರ್ಕಾರದ ನಿಯಮಗಳನ್ನು ಪಾಲನೆ ಮಾಡದಿದ್ದಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದರು.

ಸಿದ್ದಾಪುರ ಗ್ರಾ.ಪಂ. ಸದಸ್ಯ ಹಸ್ಸನ್ ಮಾತನಾಡಿ, ಗ್ರಾಮದಲ್ಲಿ ಬಹುತೇಕ ಕೂಲಿ ಕಾರ್ಮಿಕರಿದ್ದು, ೩೦೦ಕ್ಕೂ ಹೆಚ್ಚು ಕಾರ್ಡು ಹೊಂದಿರು ವವರಿದ್ದಾರೆ, ಅಂದಾಜು ೨೦೦ ಮಂದಿಗೆ ಮಾತ್ರ ಅಕ್ಕಿ ಸಿಗುತ್ತಿದೆ. ಬಹುತೇಕ ಕಾರ್ಮಿಕ ಕುಟುಂಬ ಅಕ್ಕಿಗೆ ಅವಲಂಬಿತರಾಗಿದ್ದು, ಅಕ್ಕಿ ಸಿಗದೇ ಸಮಸ್ಯೆ ಎದುರಿಸುವಂತೆ ಆಗಿದೆ. ಸರ್ಕಾರದ ನಿಯಮ ಪಾಲನೆ ಮಾಡದೆ ನಿರ್ಲಕ್ಷö್ಯ ವಹಿಸುತ್ತಿದ್ದಾರೆ. ಸಮಸ್ಯೆ ಬಗೆಹರಿಯದಿದ್ದಲ್ಲಿ ಆಹಾರ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಮಾಡ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಮದ ಸುಮತಿ ಮಾತನಾಡಿ, ಗುಹ್ಯ ನ್ಯಾಯಬೆಲೆ ಅಂಗಡಿಯಿAದ ಎರಡು ಮೂರು ತಿಂಗಳ ಅಕ್ಕಿ ಕೊಡಲು ಬಾಕಿ ಇದ್ದು, ಅದು ಸಿಗುತ್ತಿಲ್ಲ. ೩೦೦ಕ್ಕೂ ಹೆಚ್ಚು ಪಡಿತರದಾರರಿದ್ದು ೧೮೦ ರಿಂದ ೨೦೦ ಮಂದಿಗೆ ಮಾತ್ರ ಸಿಗುತ್ತಿದೆ. ಆಹಾರ ಇಲಾಖೆಯಿಂದ ಬರುವ ಅಕ್ಕಿ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದ ಅವರು ಸರ್ಕಾರದ ನಿಯಮ ಪಾಲನೆ ಮಾಡದೆ ಸಮಯಕ್ಕೆ ಸರಿಯಾಗಿ ವಿತರಣೆ ಮಾಡುತ್ತಿಲ್ಲ. ಬಹುತೇಕ ಕಾರ್ಮಿಕ ಕುಟುಂಬಗಳೇ ಅಧಿಕವಾಗಿದ್ದು ಅಕ್ಕಿ ಪಡೆದುಕೊಳ್ಳಲು ಕೆಲಸ ಬಿಟ್ಟು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜನರ ಸಮಸ್ಯೆಗೆ ಸ್ಪಂದಿಸದೆ ಇರುವ ಕಾರಣದಿಂದ ಲೈಸನ್ಸ್ ಅನ್ನು ರದ್ದುಪಡಿಸಿ ಅಕ್ಕಿ ಸರಿಯಾಗಿ ವಿತರಣೆ ಮಾಡಲಿ ಎಂದರು. ಈ ಸಂದರ್ಭ ಅಕ್ಕಿಗಾಗಿ ನೂರಾರು ಮಂದಿ ನ್ಯಾಯಬೆಲೆ ಅಂಗಡಿ ಮುಂದೆ ಕಾದು ಕುಳಿತಿದ್ದರು.