ಮಡಿಕೇರಿ, ಜು. ೨೬: ಮುಂಬರುವ (ಕೆ.ಪಿ.ಎಲ್.) ಮಹಾರಾಜ ಟ್ರೋಫಿ- ಕೆ.ಎಸ್.ಸಿ.ಎ. ೨೦೨೩ಕ್ಕಾಗಿ ಮೈಸೂರು ವಾರಿ ಯರ್ಸ್ ತಂಡದಿAದ ತಾ.೨೯ ರಂದು ಮೈಸೂರಿನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ತಾ. ೨೯ ರಂದು ಮೈಸೂರು ನಗರದ ಎಸ್‌ಎನ್‌ಡಿಆರ್ ಕ್ರೀಡಾಂ ಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ರಾಜ್ಯದ ಎಲ್ಲಾ ಉದಯೋ ನ್ಮುಖ ಪ್ರತಿಭೆಗಳನ್ನು ಈ ಕಾರ್ಯ ಕ್ರಮಕ್ಕೆ ಆಹ್ವಾನಿಸಲಾಗಿದ್ದು, ಈ ವರ್ಷದ ಮಹಾರಾಜ ಟ್ರೋಫಿ ಪಂದ್ಯಾವಳಿಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಪಡೆದುಕೊಳ್ಳ ಬಹುದು.

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಅಡಿಯಲ್ಲಿ ನೋಂದಾಯಿತ ಕ್ಲಬ್‌ಗಳನ್ನು ಪ್ರತಿನಿಧಿಸುವ ಅತ್ಯುತ್ತಮ ಆಟಗಾರರ ಆಯ್ಕೆಗಾಗಿ ಈ ಬಹುನಿರೀಕ್ಷಿತ ಆಯ್ಕೆ ಪ್ರಕ್ರಿಯೆ ತಾ.೨೯ ರಂದು ಬೆಳಿಗ್ಗೆ ೮ ಗಂಟೆಗೆ ಆರಂಭವಾಗಲಿದೆ.

ಭಾಗವಹಿಸುವ ಕ್ರೀಡಾಪಟುಗಳು ಕಳೆದ ಎರಡು ವರ್ಷಗಳಿಂದ ತಮ್ಮ ಕೆಎಸ್‌ಸಿಎ ಅಂಕಿಅAಶಗಳು ಮತ್ತು ಸುಸಜ್ಜಿತ ಕ್ರಿಕೆಟ್ ಕಿಟ್‌ಗಳೊಂದಿಗೆ ಬರಬೇಕು. ಆಯ್ಕೆ ಸುಗಮಗೊಳಿಸಲು ಅಗತ್ಯ ಕ್ರಿಕೆಟ್ ಚೆಂಡುಗಳನ್ನು ಒದಗಿಸಲಾಗುವುದು.

ತಾ. ೨೯ ರಂದು ಬೆಳಿಗ್ಗೆ ೮ ಗಂಟೆಯಿAದ ಮೈಸೂರಿನ ಎಸ್‌ಡಿಎನ್‌ಆರ್ ಕ್ರೀಡಾಂಗಣದಲ್ಲಿ ಪ್ರತಿಭಾನ್ವೇಷಣೆಯ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ ಮಧುಸೂಧನ್ ೯೯೮೬೦೨೪೭೧೭ ಹಾಗೂ ಅರುಣ್ ೯೬೩೨೯೭೬೬೯೬ ಅನ್ನು ಸಂಪರ್ಕಿಸಬಹುದಾಗಿದೆ.