ಮಡಿಕೇರಿ, ಜು. ೨೭: ಕಳೆದ ಕೆಲ ದಿನಗಳಿಂದ ಸುರಿದ ಧಾರಾಕಾರ ಮಳೆ-ಗಾಳಿಯಿಂದಾಗಿ ಮಡಿಕೇರಿ ಸನಿಹದ ಬೆಟ್ಟತ್ತೂರಿನ ನಿವಾಸಿ ಕೆ.ಎಂ. ಕಾಳಪ್ಪ ಅವರ ಮನೆ ಹಾನಿಗೀಡಾಗಿದೆ.

ತೀವ್ರ ಗಾಳಿ-ಮಳೆಯ ಪರಿಣಾಮ ಕಾಳಪ್ಪ ಅವರ ಮನೆಯ ಮಾಡು ಮತ್ತು ಗೋಡೆ ಕುಸಿತವಾಗಿದ್ದು, ಅಪಾಯಕಾರಿಯಾಗಿರುವುದರಿಂದ ವಾಸಕ್ಕೆ ಅನಾನುಕೂಲವಾಗಿದೆ.