ನಾಪೋಕ್ಲು, ಜು. ೨೭: ಸ್ಥಳೀಯ ಗ್ರಾಮದ ಕೂರುಳಿ ನಿವಾಸಿ ಭೀಮಯ್ಯ ಎಂಬವರ ಮನೆಯ ಮೇಲೆ ಭಾರೀ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ.

ಗಾಳಿ ಮಳೆಗೆ ಗುರುವಾರ ನಸುಕಿನಲ್ಲಿ ಮನೆಯ ಸಮೀಪವಿರುವ ಕೊಂಬAಡ ಗೀತಾ ಎಂಬವರ ಕಾಫಿ ತೋಟದಲ್ಲಿದ್ದ ಭಾರಿ ಗಾತ್ರದ ಮರ ಬೀಳುವಾಗ ಜೊತೆಯಲ್ಲಿ ಎರಡು ತೇಲೆ. ಒಂದು ನೇರಳೆ, ೧. ಬೈನೆ ಮರಗಳು ಬಿದ್ದು ಭೀಮಯ್ಯ ಅವರ ವಾಸದ ಮನೆ ಮತ್ತು ಕೋಳಿಗೂಡು ಹಾನಿಯಾಗಿ ನಷ್ಟ ಸಂಭವಿಸಿದೆ.

ಈ ಸಂದರ್ಭ ಭೀಮಯ್ಯ ಮತ್ತು ಪತ್ನಿ ಮಕ್ಕಳು ಮನೆಯೊಳಗಿದ್ದು ಕೂದಲೆಳೆ ಅಂತರದಲ್ಲಿ ಜೀವಾ ಪಾಯದಿಂದ ಪಾರಾಗಿದ್ದಾರೆ. ಈ ದುರಂತದಿAದಾಗಿ ಮನೆಯ ಛಾವ ಣಿಯ ಶೀಟ್‌ಗಳು ಪುಡಿಪುಡಿಯಾಗಿ ಮನೆಯ ಒಳಗಿದ್ದ ಪರಿಕರಗಳು ಹಾನಿಯಾಗಿ ನಷ್ಟ ಸಂಭವಿಸಿದೆ. ಕೋಳಿ ಗೂಡಿನಲ್ಲಿದ್ದ ಮೂರು ಕೋಳಿಗಳು ಸಾವನ್ನಪ್ಪಿವೆ.

ವಿಷಯ ತಿಳಿದ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರತೀಪ ಬಿ.ಎಂ., ಶಿವಚಾಳಿಯಂಡ ಜಗದೀಶ್, ಗ್ರಾಮಸ್ಥರಾದ ಪಾಡಿಯಮ್ಮಂಡ ಮನು ಮಹೇಶ್, ಕಂಗಾAಡ ಜಾಲಿ ಪೂವಪ್ಪ, ಕುಂಬAಡ ತಿಮ್ಮಯ್ಯ, ಕೊಂಬAಡ ಧನಂಜಯ, ಪ್ರಕಾಶ್, ದರ್ಶನ್ ಇನ್ನಿತರರು ಮಳೆಯನ್ನು ಲೆಕ್ಕಿಸದೆ ಮನೆಗೆ ಬಿದ್ದ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸಿ ತೆರವುಗೊಳಿಸಿ ಛಾವಣಿಗೆ ಶೀಟ್ ಅಳವಡಿಸಿ ಮಾನವೀಯತೆ ಮೆರೆದರು.

ಉಪತಹಶೀಲ್ದಾರ್ ಸುನಿಲ್ ಕುಮಾರ್, ಕಂದಾಯ ಪರಿವೀಕ್ಷಕ ರವಿ ಕುಮಾರ್ ಗ್ರಾಮ ಲೆಕ್ಕಿಗೆ ಅಮೃತ ಭೇಟಿ ನೀಡಿ ಪರಿಶೀಲಿಸಿ ದಾಖಲೆಗಳನ್ನು ಸಂಗ್ರಹಿಸಿಕೊAಡರು. -ದುಗ್ಗಳ