ಮಡಿಕೇರಿ, ಜು. ೨೭: ಮಾರ್ಚ್ನಲ್ಲಿ ನಡೆದ ಅಪ್ಪಚೆ ಟ್ಟೋಳಂಡ ಕೊಡವ ಕೌಟುಂಬಿಕ ಹಾಕಿ ನಮ್ಮೆಗೆ ಸರ್ಕಾರದಿಂದ ಘೋಷಿಸಲಾಗಿದ್ದ ೧ ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಅಪ್ಪಚೆಟ್ಟೋಳಂಡ ಹಾಕಿ ನಮ್ಮೆ ಸಂಚಾಲಕ ಮನುಮುತ್ತಪ್ಪ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಪ್ಪಚೆಟ್ಟೋಳಂಡ ಹಾಕಿ ನಮ್ಮೆಯ ಸಂದರ್ಭ ಆಗಿನ ಶಾಸಕರಾಗಿದ್ದ ಕೆ.ಜಿ. ಬೋಪಯ್ಯ ಅವರ ಮೂಲಕ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸರ್ಕಾರದಿಂದ ಅನುದಾನಕ್ಕೆ ಬೇಡಿಕೆ ಇಡಲಾಗಿತ್ತು. ಆ ಸಂದರ್ಭ ಹಾಕಿ ನಮ್ಮೆಯ ಲಾಂಛನ ಬಿಡುಗಡೆಗೊಳಿಸಿ ಹಾಕಿ ನಮ್ಮೆಗೆ ೧ ಕೋಟಿ ಅನುದಾನ ಒದಗಿಸುವುದಾಗಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದರು. ಪಂದ್ಯಾಟದ ಬಳಿಕ ೧ ಕೋಟಿ ೪೦ ಲಕ್ಷದ ಖರ್ಚು ವೆಚ್ಚದ ವಿವರವನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರ ವಿಶೇಷ ಪ್ರಯತ್ನದ ಫಲವಾಗಿ ಸರ್ಕಾರದ ೧ ಕೋಟಿ ಅನುದಾನ ಯುವಜನ ಸಬಲೀಕರಣ ಇಲಾಖೆ ಯಿಂದ ನಮ್ಮ ಬ್ಯಾಂಕ್ ಖಾತೆಗೆ ಬಂದಿದೆ ಎಂದು ಮನುಮುತ್ತಪ್ಪ ಮಾಹಿತಿಯಿತ್ತರು.
ಹಾಕಿ ನಮ್ಮೆಗೆ ಪ್ರಾಯೋಜಕರಿಂದ ಸುಮಾರು
(ಮೊದಲ ಪುಟದಿಂದ) ೩೦ ಲಕ್ಷ ಸಂಗ್ರಹವಾಗಿದ್ದು, ಅದರಲ್ಲಿ ಜಿಎಸ್‌ಟಿ ಕಳೆದು ಉಳಿಯುವ ಹಣದಲ್ಲಿ ಶೇ.೨ರಷ್ಟು ಹಣವನ್ನು ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೆ ನೀಡಲಾಗುವುದು ಎಂದು ತಿಳಿಸಿದ ಮನುಮುತ್ತಪ್ಪ, ಹಾಕಿ ನಮ್ಮೆಗೆ ಪ್ರಸ್ತುತ ಇರುವ ಸರ್ಕಾರ ಕನಿಷ್ಟ ೧ ಕೋಟಿ ಅನುದಾನವನ್ನು ನಿರಂತರವಾಗಿ ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದರು. ನಾಪೋಕ್ಲುವಿನಲ್ಲಿ ಕ್ರೀಡಾ ವಸತಿ ನಿಲಯ ಹಾಗೂ ಆಸ್ಟೊçà ಟರ್ಫ್ ನಿರ್ಮಾಣಕ್ಕೆ ಸರ್ಕಾರ ಮುಂದಾಗ ಬೇಕು ಎಂದು ಮನು ಮುತ್ತಪ್ಪ ಒತ್ತಾಯಿಸಿದರು. ಸರ್ಕಾರದಿಂದ ಅನುದಾನ ಲಭಿಸಿದ್ದು, ಇದಕ್ಕೆ ಕಾರಣರಾದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅಭಿನಂದ ನಾರ್ಹರು. ಈ ಹಿನ್ನೆಲೆಯಲ್ಲಿ ಕೆ.ಜಿ. ಬೋಪಯ್ಯ ಅವರನ್ನು ಅಪ್ಪಚೆಟ್ಟೋಳಂಡ ಕುಟುಂಬದ ವತಿಯಿಂದ ಸನ್ಮಾನಿಸಿ ಗೌರವಿಸಿರು ವುದಾಗಿ ಎಂದು ಮನುಮುತ್ತಪ್ಪ ತಿಳಿಸಿದರು. ಗೋಷ್ಠಿಯಲ್ಲಿ ಅಪ್ಪಚೆಟ್ಟೋಳಂಡ ಕುಟುಂಬದ ಪ್ರಮುಖರಾದ ಭೀಮಯ್ಯ, ಪೂದೇವಯ್ಯ, ಡಾಲಿ ಬೋಪಯ್ಯ, ಶ್ಯಾಂ ಕಾಳಯ್ಯ, ರವಿಮೊಣ್ಣಪ್ಪ ಉಪಸ್ಥಿತರಿದ್ದರು.