ಮಡಿಕೇರಿ: ರಾಷ್ಟಿçÃಯ ವಿಪತ್ತು ನಿರ್ವಹಣಾ ಪಡೆಯ ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು.
ವಿವಿಧ ಬಗೆಗಳ ಹಣ್ಣುಗಳ ಗಿಡ ಮತ್ತು ಔಷಧಿ ಸಸ್ಯಗಳನ್ನು ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರಾಕೃತಿಕ ವಿಕೋಪ ತಡೆಯಲು ಮರ-ಗಿಡಗಳನ್ನು ಬೆಳಸುವ ಉದ್ದೇಶದಿಂದ ರಾಷ್ಟಿçÃಯ ವಿಪತ್ತು ನಿರ್ವಹಣಾ ಪಡೆಯು ವನಮಹೋತ್ಸವ ಯೋಜನೆಯನ್ನು ಅಭಿಯಾನದ ರೀತಿಯಲ್ಲಿ ಕೈಗೊಂಡಿದೆ.
ವನಮಹೋತ್ಸವ ಅಭಿಯಾನದಲ್ಲಿ ರಾಷ್ಟಿçÃಯ ವಿಪತ್ತು ನಿರ್ವಹಣಾ ಪಡೆಯ ಇನ್ಸ್ಪೆಕ್ಟರ್ ಶಾಂತಿಲಾಲ್, ಹೆಡ್ ಕಾನ್‌ಸ್ಟೇಬಲ್ ಅರ್ಜುನ್, ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ., ಗಣವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ರವಿಶಂಕರ್, ಹಿಂದಿ ವಿಭಾಗದ ಡಾ.ಶ್ರೀಧರ್ ಹೆಗಡೆ, ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕÀ ಪೂಣಚ್ಚ ಇತರರು ಇದ್ದರು. ಕೂಡಿಗೆ: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮದಲ್ಲಿರುವ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಕುಶಾಲನಗರ ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ ಹೆಚ್.ವಿ. ಶಿವಪ್ಪ ಚಾಲನೆ ನೀಡಿದರು. ವನಮಹೋತ್ಸವ ಮಾಡುವುದರ ಜೊತೆಯಲ್ಲಿ ಪರಿಸರ ಸಂರಕ್ಷಣೆ ವಿಚಾರಗಳನ್ನು ಶಾಲಾ ಹಂತದಲ್ಲಿ ಪಾಠದ ಜೊತೆಯಲ್ಲಿ ತಿಳಿದುಕೊಳ್ಳುವ ಮೂಲಕ ಆರೋಗ್ಯವಂತರಾಗಿ ಬಾಳುವಂತಾಗಬೇಕೆAದು ಅವರು ಸಲಹೆ ನೀಡಿದರು. ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಪೋಷಕರಿಗೆ ತಮ್ಮ ತಮ್ಮ ಮನೆಗಳ ಹತ್ತಿರ ಗಿಡಗಳನ್ನು ನೆಡಲು ಗಿಡಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭ ಕೆ.ಇ.ಬಿ. ನಿವೃತ್ತ ಕಾರ್ಯಪಾಲಕ ಅಭಿಯಂತರ ಜಿ.ಎಲ್. ರಾಮಪ್ಪ, ಜಿಲ್ಲಾ ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಜ್ಞಾನ ಕಾವೇರಿ ಕೊಡಗು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಭರಣಿ, ಹೆಬ್ಬಾಲೆ ಕೆನರಾ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಸೂರ್ಯ, ಪ್ರಮುಖರಾದ ಉದಯಕುಮಾರ್, ಶಾಂಭವಮೂರ್ತಿ, ಎಂ.ಎನ್. ಮೂರ್ತಿ, ಉಮೇಶ್, ಮುಖ್ಯ ಶಿಕ್ಷಕಿ ಲೇಖ ಜಾನ್ ಉಪಸ್ಥಿತರಿದ್ದರು. ಶಿಕ್ಷಕಿ ಪ್ರಿಯಾಂಕಾ ಕಾರ್ಯಕ್ರಮ ನಿರೂಪಿಸಿ, ಸಜೀನಿ ಸ್ವಾಗತಿಸಿ, ವಂದಿಸಿದರು.