ಮಡಿಕೇರಿ, ಜು. ೨೫: ೨೦೨೩ನೇ ಸಾಲಿನ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಗೆ ಕತೆಗಳನ್ನು ಆಹ್ವಾನಿಸಲಾಗಿದೆ.
ಅಖಿಲ ಭಾರತ ಮಟ್ಟದಲ್ಲಿ ಸ್ಪರ್ಧೆ ನಡೆಯಲಿದ್ದು, ಹವ್ಯಕ ಮಹಿಳೆಯರು ಯಾವುದೇ ವಯೋಮಿತಿ ಇಲ್ಲದೆ ಭಾಗವಹಿಸಬಹುದಾಗಿದೆ. ಕಾಲೇಜು, ಪ್ರೌಢಶಾಲಾ ವಿದ್ಯಾರ್ಥಿನಿಯರೂ ಭಾಗವಹಿಸಬಹುದಾಗಿದೆ. ಯಾವುದೇ ಸೀಮೆಯ ಹವ್ಯಕ ಭಾಷೆಯಲ್ಲಿ ಕಥೆ ಬರೆಯಬಹುದು. ಈವರೆಗಿನ ಪ್ರಥಮ ವಿಜೇತೆಯರಿಗೆ ಅವಕಾಶ ಇರುವುದಿಲ್ಲ. ಈವರೆಗೆ ಎಲ್ಲೂ ಪ್ರಕಟವಾಗದ, ಭಾಷಾಂತರ ಅಲ್ಲದ ಸಾಮಾಜಿಕ ಕತೆಯಾಗಿರಬೇಕು. ಎಂಟು ಪುಟಗಳಿಗೆ ಮೀರದೆ, ಕಾಗದದ ಒಂದೇ ಬದಿಗೆ ಸ್ಪುಟವಾಗಿ, ಟೈಪ್ ಕೂಡ ಮಾಡಬಹುದಾಗಿದೆ. (ಸಾಧಾರಣ ಎರಡು ಸಾವಿರ ಪದಗಳು) ಹೆಸರು, ವಿಳಾಸ ಬೇರೆ ಕಾಗದದಲ್ಲಿ ಬರೆದು ಲಗತ್ತಿಸಿರಬೇಕು. ಅನ್ಯಥಾ ಕತೆ ಬರೆದ ಕಾಗದದಲ್ಲಿ ಹೆಸರೂ ಇರಬಾರದು. ಇಮೇಲ್ ಅಥವಾ ಕೊರಿಯರ್ ಮುಖಾಂತರ ಕಳುಹಿಸಿದರೆ ಸ್ವೀಕೃತವಾಗುವುದಿಲ್ಲ.
ಪ್ರಥಮ ಬಹುಮಾನ ನಾಲ್ಕು ಸಾವಿರ, ದ್ವಿತೀಯ ಬಹುಮಾನ ಮೂರುಸಾವಿರ, ತೃತೀಯ ಬಹುಮಾನ ಎರಡು ಸಾವಿರ ರೂಪಾಯಿಗಳು ನಗದು ನೀಡಲಾಗುವುದು. ಆಸಕ್ತರು ಸೆಪ್ಟೆಂಬರ್ ೩೦ರೊಳಗೆ ಕತೆಗಳನ್ನು ಕಳುಹಿಸಬೇಕಿದೆ.
ವಿಳಾಸ:- ವಿಜಯಾಸುಬ್ರಹ್ಮಣ್ಯ ಕುಂಬಳೆ, ಸಂಚಾಲಕಿ, ಕೊಡಗಿನ ಗೌರಮ್ಮ ಕಥಾ ಸ್ಪರ್ಧೆ, ಕಾರ್ತಿಕೇಯ, ನಾರಾಯಣಮಂಗಲ ಪೋಸ್ಟ್, ಕುಂಬಳೆ -೬೭೧೩೨೧, ಕಾಸರಗೋಡು ಜಿಲ್ಲೆ. ಮೊ.: ೮೫೪೭೨೧೪೧೨೫, ೬೨೩೮೫೩೭೨೬೭.