ಸುAಟಿಕೊಪ್ಪ, ಜು. ೨೬: ಕಂಬಿಬಾಣೆ ಅತ್ತೂರು ನಲ್ಲೂರು ಗ್ರಾಮದ ಟಿ.ಸಿಎಲ್. ತೋಟದ ಕಾರ್ಮಿಕನ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ್ದು ಕಾರ್ಮಿಕ ವಿಜಯಕುಮಾರ್ (೫೯) ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ.
ಅತ್ತೂರು ನಲ್ಲೂರು ಗ್ರಾಮದ ಟಿ.ಸಿಎಲ್. ತೋಟಕ್ಕೆ ಎಂದಿನAತೆ ಬೆಳಿಗ್ಗೆ ೭ ಗಂಟೆಗೆ ಕೂಲಿ ಕೆಲಸಕ್ಕೆಂದು ಈರ್ವರು ಕಾರ್ಮಿಕರು ತೆರಳುತ್ತಿದ್ದ ಸಂದರ್ಭ ಬೀಡುಬಿಟ್ಟಿದ್ದ ಕಾಡಾನೆಯೊಂದು ಕಾರ್ಮಿಕರಿಗೆ ಎದುರಾಗಿದೆ. ಇದರಿಂದ ಭಯಭೀತರಾದ ಕಾರ್ಮಿಕರು ಓಡಲು ಪ್ರಯತ್ನಿಸಿದ್ದಾಗ ಕಾರ್ಮಿಕ ವಿಜಯಕುಮಾರ್ ಮೇಲೆ ಎರಗಿದ ಕಾಡಾನೆ ದಾಳಿ ನಡೆಸಿದೆ. ದಾಳಿಯಿಂದ ವಿಜಯಕುಮಾರ್ ಅವರಿಗೆ ಎದೆಯ ಭಾಗದಲ್ಲಿ ಘಾಸಿಗೊಂಡಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೊಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.