ವೀರಾಜಪೇಟೆ, ಜು. ೨೫: ಸಮಾ ಜದಲ್ಲಿ ಗೌರವಯುತವಾದ ಜವಾ ಬ್ದಾರಿ ಶಿಕ್ಷಕರ ಮೇಲಿದ್ದು, ಪೋಷಕರು ಶಿಕ್ಷಕರನ್ನೆ ದೇವರು ಎಂದು ಭಾವಿ ಸಿರುತ್ತಾರೆ. ಶಿಕ್ಷಕರು ಸಮಾಜಮುಖಿ ಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಭೋಜೇ ಗೌಡ ಅಭಿಪ್ರಾಯಪಟ್ಟರು.
ಶಾಲಾ ಶಿಕ್ಷಣಾ ಇಲಾಖೆ, ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಕಛೇರಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಅನುದಾನಿತ ನೌಕರರ ಸಂಘದ ವತಿಯಿಂದ ವೀರಾಜಪೇಟೆಯ ಸಂತ ಅನ್ನಮ್ಮ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ, ೨೦೨೨-೨೩ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶೇಕಡ ೧೦೦ರಷ್ಟು ಫಲಿತಾಂಶ ಪಡೆದ ಶಾಲೆಯ ಮುಖ್ಯ ಶಿಕ್ಷಕರಿಗೆ, ವಿಷಯ ಬೋಧನಾ ಶಿಕ್ಷಕರಿಗೆ, ದೈಹಿಕ ಶಿಕ್ಷಕರಿಗೆ ಅಭಿನಂದನಾ ಸಮಾರಂಭವನ್ನು ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಉದ್ಘಾಟಿಸಿ ಮಾತನಾಡಿದರು. ನಾವೆ ಲ್ಲರೂ ಸಂಬAಧಗಳ ಮರೆತಿದ್ದೇವೆ. ಹಿರಿಯರು ಜಾನ ಪದದ ನೆಲೆಯಲ್ಲಿ ಈ ನಾಡನ್ನು ಕಟ್ಟಿದ್ದಾರೆ. ಭಾರತ ಭಾವೈಕ್ಯತೆಯನ್ನು ಸಾರಿದ ದೇಶ. ಎಲ್ಲಾ ಧರ್ಮದ ಸಾರವೊಂದೇ ಎಂಬುವು ದನ್ನು ಸಾರಿದ ದೇಶ, ಸಂವಿಧಾನ ನಮ್ಮದು, ಜಗದ ಕವಿಯ ಆಶಯ ದಂತೆ ಈ ನಾಡನ್ನು ಕಟ್ಟಬೇಕು, ನಮ್ಮ ಧರ್ಮವನ್ನು ಪ್ರೀತಿಸುವಷ್ಟೇ ಅನ್ಯ ಧರ್ಮವನ್ನು ಪ್ರೀತಿಸಬೇಕು ಎಂದರು.
ಜಾನಪದ, ತತ್ವಪದದ ಸಾರ ವನ್ನು ಅರಿಯಬೇಕು, ಮಕ್ಕಳಿಗೆ ಸಂಸ್ಕಾ ರವನ್ನು ಕಲಿಸಬೇಕು, ನಮ್ಮ ತಾಯಂ ದಿರು ಬೆಳಗೆದ್ದು ಭೂಮಿತಾ ಯನ್ನು ನೆನೆಸಿ ಪೂಜಿಸುತ್ತಿದ್ದರು. ಇಂದಿನ ಮಕ್ಕಳು ಬೆಳಗೆದ್ದು ಮೊಬೈಲ್ ನೋಡುತ್ತಾರೆ. ಮಕ್ಕಳಿಂದ ವಿದ್ಯೆ ಯೊಂದಿಗೆ ಸಂಸ್ಕಾರ ಮುಖ್ಯ, ವಿದ್ಯಾವಂತ ಭ್ರಷ್ಟನಾಗಬ ಹುದು, ಆದರೆ ಸಂಸ್ಕಾರವAತ ಎಂದಿಗೂ ಭ್ರಷ್ಟನಾಗ ಲಾರ. ಕೃಷಿ ಬದುಕು ಏನು ಎಂಬುವು ದನ್ನು ತಿಳಿಸಿಕೊಡಬೇಕು. ಅನ್ನಕ್ಕೆ ಕಷ್ಟಪಡುವ ಪರಿಸ್ಥಿತಿ ಎದುರಿಸುವ ಕಾಲ ದೂರವಿಲ್ಲ. ಹಾಗಾಗಿ ಶಾಲೆಯ ಶಿಕ್ಷಣದೊಂದಿಗೆ ಜೀವನ ಪಾಠವೂ ಮುಖ್ಯವಾಗಿದೆ. ಅದನ್ನು ಶಿಕ್ಷಕರು, ಪೋಷಕರು ಕಲಿಸಬೇಕಾಗಿದೆ. ಶಿಕ್ಷಕರ ಸಮಸ್ಯೆಗಳಿಗೆ ಸರಕಾರದ ಮಟ್ಟದಲ್ಲಿ ಪರಿಹಾರ ಮಾಡುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಸನ್ಮಾನಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳ ಸಾಧನೆ ಮೆಚ್ಚುವಂತದ್ದು. ವಿದ್ಯಾರ್ಥಿ ಗಳಿಗೆ ಎಸ್ಎಸ್ಎಲ್ಸಿ ಪ್ರಮುಖ ಘಟ್ಟ. ಈ ವೇಳೆ ಕಷ್ಟಪಟ್ಟು ಓದಿ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗ ಬೇಕು. ಶಿಕ್ಷಕರು, ವೈದ್ಯರು, ರೈತರು ಹಾಗೂ ಯೋಧರು ದೇಶದ ಆಸ್ತಿಯಾ ಗಿದ್ದಾರೆ. ವಿದ್ಯಾರ್ಥಿಗಳ ಓದಿನ ಜೊತೆಗೆ ಭವಿಷ್ಯ ರೂಪಿಸಿ ಕೊಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಶಾಲೆಗೆ ಮತ್ತು ಪಾಲಕರಿಗೆ ಕೀರ್ತಿ ತರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳ ಯಶಸ್ವಿಗೆ ಶ್ರಮಿಸಿದ ಶಿಕ್ಷಕ ವೃಂದ ಹಾಗೂ ಪಾಲಕರ ಕಾರ್ಯ ಶ್ಲಾಘನೀಯ. ಜೀವನದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳ ಬೇಕು ಎಂದು ಅವರು ನುಡಿದರು.
ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆ ಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದರ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸ ಬೇಕು. ಒಂದು ಶಾಲೆಯಲ್ಲಿ ಕಲಿತ ವಿದ್ಯಾರ್ಥಿ ಮುಂದೆ ತಾನು ಯಾವ ಕ್ಷೇತ್ರ ದಲ್ಲಿ ಮುಂದುವರೆದು ಸಾಧನೆ ಮಾಡಿ ದ್ದಾನೆ ಅನ್ನುವುದು ಮುಖ್ಯವಾಗಬೇಕು, ಆ ನಿಟ್ಟಿನಲ್ಲಿ ಶಿಕ್ಷಣ ಸಾಗಬೇಕು ಎಂದು ಹಿತನುಡಿಗಳನ್ನಾಡಿದರು.
ಶೈಕ್ಷಣಿಕ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಶಿಕ್ಷಣ ಉಪ ನಿರ್ದೇಶಕರಾದ ಪೆರಿಗ್ರೀನ್ ಮಚ್ಚಾಡೋ ಭಾಗವಹಿಸಿ ಶಿಕ್ಷಕರೊಂ ದಿಗೆ ಸಂವಾದ ನಡೆಸಿದರು.
ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿ ಕಾರಿ ಎಂ. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ಫಲಿತಾಂಶದಲ್ಲಿ ೧೮ನೇ ಸ್ಥಾನದಲ್ಲಿದ್ದ ಕೊಡಗು ಈ ಬಾರಿ ೯ನೇ ಸ್ಥಾನಕ್ಕೇರಿದೆ. ಉತ್ತಮ ಸಾಧನೆಗೆ ಪ್ರೇರಣೆ ನೀಡುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.
ಇದೇ ಸಂದರ್ಭ ೨೦೨೨-೨೩ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ೧೦ ನೇ ತರಗತಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ೧೩ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶೇ.೧೦೦ ಫಲಿತಾಂಶ ಪಡೆದ ಶಾಲೆಯ ಮುಖ್ಯ ಶಿಕ್ಷಕರು, ವಿಷಯ ಬೋಧನಾ ಶಿಕ್ಷಕರು ಸೇರಿದಂತೆ ೨೨೯ ಶಿಕ್ಷಕರನ್ನು ಸನ್ಮಾನಿಸ ಲಾಯಿತು. ವಿಧಾನ ಪರಿಷತ್ತ್ ಸದಸ್ಯ ಭೋಜೇಗೌಡ ಹಾಗೂ ಶಾಸಕ ಪೊನ್ನಣ್ಣ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂತ ಅನ್ನಮ್ಮ ದೇವಾಲಯದ ಧರ್ಮಗುರುಗಳಾದ ಡಾ.ದಯಾನಂದ ಪ್ರಭು, ಸಂತ ಅನ್ನಮ್ಮ ಕಾಲೇಜು ವ್ಯವಸ್ಥಾಪಕರಾದ ರೆ.ಫಾ.ಐಸಾಕ್ ರತ್ನಾಕರ್, ಕ್ಷೇತ್ರ ಸಮನ್ವಯಾಧಿಕಾರಿ ವನಜಾಕ್ಷಿ, ಜಿಲ್ಲಾ ಶಿಕ್ಷಣ ಉಪನಿರ್ದೇಶಕರಾದ ರಂಗಧಾಮಯ್ಯ, ನಿವೃತ್ತ ಉಪನಿರ್ದೇ ಶಕ ಪೆರಿಗ್ರಿನ್ ಮಚ್ಚಾಡೋ, ಶಿಕ್ಷಣ ಇಲಾಖೆಯ ಶೋಭಾ, ಗಾಯತ್ರಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಲಾಲ್ ಕುಮಾರ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಪಿ.ಉತ್ತಪ್ಪ, ಅನುದಾನಿತ ನೌಕರರ ಸಂಘದ ಅಧ್ಯಕ್ಷ ಗಿಡ್ಡಯ್ಯ, ಗ್ರೇಡ್-೧ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ. ಸೋಮಯ್ಯ ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕರ ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾ ರಿಗಳು ಸೇರಿದಂತೆ ಶಾಲೆ ಗಳ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಜರಿದ್ದರು. ಶಿಕ್ಷಕರಾದ ಎನ್.ಡಿ. ತಮ್ಮಯ್ಯ, ಚಂದನ ಡಿ. ನಿರೂಪಿಸಿದರೆ, ಲೋಕೇಶ್ ಸ್ವಾಗ ತಿಸಿ, ಕೃಷ್ಣ ಚೈತನ್ಯ ವಂದಿಸಿದರು.