ಕಳತ್ಮಾಡು ಕಾಯರ ತೋಡಿ ಕುಟುಂಬಸ್ಥರ ಐನ್‌ಮನೆಯು ಮಳೆಯಿಂದಾಗಿ ಭಾಗಶಃ ಹಾನಿ ಬಿಳುಗುಂದ ಗ್ರಾಮದ ನಿವಾಸಿ ನಂಜಪ್ಪ ಅವರ ಧನದ
ಕೊಟ್ಟಿಗೆಯ ಗೋಡೆಯು ಮಳೆಯಿಂದ ಬಿದ್ದು ಹಾನಿಸಿದ್ದಾಪುರ, ಜು. ೨೬: ಅಮ್ಮತ್ತಿ ಹೋಬಳಿಯ ವ್ಯಾಪ್ತಿಗೆ ಒಳಪಡುವ ವಿವಿಧ ಗ್ರಾಮಗಳಲ್ಲಿ ಗಾಳಿ ಮಳೆಗೆ ಮನೆಗಳು ಹಾನಿಯಾಗಿವೆ.
ಸ್ಥಳಕ್ಕೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಮಾರ್ಗದರ್ಶನದಲ್ಲಿ ಕಂದಾಯ ಪರೀಕ್ಷಕರಾದ ಅನಿಲ್ ಕುಮಾರ್ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.