ಮಡಿಕೇರಿ, ಜು. ೨೬: ಚೆನ್ನಯ್ಯನ ಕೋಟೆ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಆದಿವಾಸಿಗಳಿಬ್ಬರ ಎರಡು ಮನೆಗಳು ಕುಸಿದು ಬಿದ್ದಿದ್ದು ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾದ ಘಟನೆ ಚೆನ್ನಯ್ಯನಕೋಟೆ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಚಿಕ್ಕ ರೇಷ್ಮೆ ಹಾಗೂ ಕೋಟೆ ಮಚ್ಚಿ ಹಾಡಿಯಲ್ಲಿ ನಡೆದಿದೆ.

ಚಿಕ್ಕರೇಷ್ಮೆ ಹಾಡಿಯ ರಾಜಪ್ಪ ಎಂಬವರ ಮನೆಯಲ್ಲಿ ಮಕ್ಕಳೊಂ ದಿಗೆ ಇದ್ದ ಸಂದರ್ಭ ಗೋಡೆ ಕುಸಿದು ಸಂಪೂರ್ಣ ಹಾನಿಯಾಗಿದೆ.

ಹೆಂಚು ಬಿದ್ದ ಸಂದರ್ಭ ಮನೆಯಲ್ಲಿದ್ದವರು ಓಡಿ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಕೊಟೆಮಚ್ಚಿ ನಿವಾಸಿ ವಿಠಲ ಎ.ಜೆ ಎಂಬವರ ವಾಸದ ಮನೆಯಲ್ಲಿ ಕುಟುಂಬದೊAದಿಗೆ ಇದ್ದ ಸಂದರ್ಭ ಮನೆಯ ಗೋಡೆ ಹೆಂಚುಗಳು ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ.

ಸ್ಥಳಕ್ಕೆ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆದಿವಾಸಿ ಮುಖಂಡ ಸಿದ್ದಪ್ಪ ಮಾತನಾಡಿ, ಆದಿವಾಸಿ ಜನಾಂಗದ ಎರಡು ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಕೂಡಲೇ ಪರಿಹಾರ ನೀಡುವುದರ ಮೂಲಕ ಮನೆ ಕಟ್ಟಿಕೊಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. -ಮುಬಾರಕ್