ಗೋಣಿಕೊಪ್ಪ ವರದಿ, ಜು. ೨೬: ಅಮ್ಮತ್ತಿ ಹೋಬಳಿ ಕೊಳ್ತೋಡು-ಬೈಗೋಡು ಗ್ರಾಮದ ಬೆಳೆಗಾರ ಮುಕ್ಕಾಟಿರ ರನ್ನ ಚಿಣ್ಣಪ್ಪ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಬುಧವಾರ ರಾತ್ರಿ ಮನೆಯ ಸಮೀಪವಿದ್ದ ಮರ ಬೇರು ಸಮೇತ ಬಿದ್ದ ಕಾರಣ, ಮನೆಯ ಭಾಗಶಃ ಹಾನಿಯಾಗಿದ್ದು, ಜನರಿಗೆ ತೊಂದರೆಯಾಗಿಲ್ಲ. ಸ್ಥಳಕ್ಕೆ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಭೇಟಿ ನೀಡಿ ಸಾಂತ್ವನ ಹೇಳಿದರು. ಪರಿಹಾರ ನೀಡುವ ಭರವಸೆ ನೀಡಿದರು.

ಮರವೊಂದು ಬೇರು ಸಮೇತ ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ವೀರಾಜಪೇಟೆ ವಿಭಾಗ ವ್ಯಾಪ್ತಿಯ ಐಮಂಗಲ, ಮಗ್ಗುಲ ಪ್ರದೇಶಗಳಲ್ಲೂ ಭಾರೀ ಮಳೆಯಿಂದ ಗದ್ದೆ ಗಳು ನೀರಿನಿಂದ ತುಂಬಿ ಇದೀಗ ಇಳಿಮುಖಗೊಂಡಿದೆ.