ಚಂದ್ರಯಾನ ೩ ನೌಕೆ-ನಿಗದಿತ ಗರಿಷ್ಠ ಕಕ್ಷೆಗೆ ಏರಿಕೆ

ಬೆಂಗಳೂರು, ಜು. ೨೫: ತಾ. ೧೪ ರಂದು ಶ್ರೀಹರಿಕೋಟಾದ ಸತೀಶ್ ಧವಾನ್ ಬಾಹ್ಯಾಕಾಶ ಕೇಂದ್ರದಿAದ ಉಡಾವಣೆಗೊಂಡ ಚಂದ್ರಯಾನ-೩ ನೌಕೆಯು ಇದೀಗ ಭೂಮಿಯ ಸುತ್ತದ ಕಕ್ಷೆ ಪ್ರದಕ್ಷಿಣೆಯ ಕೊನೆಯ ಹಂತ ತಲುಪಿದೆ. ಉಡಾವಣೆಗೊಂಡು ೧೧ ದಿನಗಳು ಕಳೆದ ಬಳಿಕ ೫ನೆ ಕಕ್ಷಾ ಬದಲಾವಣೆ ಪ್ರಕ್ರಿಯೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿದೆ. ಇದೀಗ ಭೂಮಿಯ ಸುತ್ತದ ಹೊಸ ಕಕ್ಷೆಯಲ್ಲಿ ನೌಕೆಯು ಭೂಮಿಗಿಂತ ಗರಿಷ್ಠ ೧,೨೭,೬೦೯ ಕಿ.ಮೀ. ದೂರ ಹಾಗೂ ಕನಿಷ್ಟ ೨೩೬ ಕಿ.ಮೀ. ದೂರದಲ್ಲಿ ವೇಗ ಹೆಚ್ಚಿಸಿಕೊಂಡು ಪ್ರದಕ್ಷಿಸುತ್ತಿದೆ. ಈ ಕಕ್ಷೆಯಲ್ಲಿ ಇನ್ನು ೭ ದಿನಗಳ ಕಾಲ ಇರಲಿದ್ದು, ಆಗಸ್ಟ್ ೧ ರ ಮಧ್ಯರಾತ್ರಿ ಸುಮಾರು ೧೨ ಗಂಟೆಗೆ ‘ಲೂನಾರ್ ಟ್ರಾನ್ಸ್ಫರ್ ಟ್ರೆಜೆಕ್ಟರಿ’ ಬಳಿಕ ಚಂದ್ರನೆಡೆಗೆ ನೌಕೆಯು ಮುಖಮಾಡಲಿದೆ. ಬಳಿಕ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಾ ಆಗಸ್ಟ್ ೨೩ ಅಥವಾ ೨೪ ರಂದು ಚಂದ್ರನೆಲೆಯಲ್ಲಿ ಕಾಲಿಡಲಿದೆ.

ಕರ್ನಾಟಕದಲ್ಲಿ ಭಾರಿ ಮಳೆ : ೫ ಸಾವು

ಬೆಂಗಳೂರು, ಜು. ೨೫: ಕರ್ನಾಟಕದಲ್ಲಿ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಂಭವಿಸಿದ ವಿವಿಧ ದುರಂತಗಳಲ್ಲಿ ಈವರೆಗೂ ೫ ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಮಳೆ ಸಂಬAಧಿತ ದುರಂತಗಳಿAದ ಐದು ಜನರು ಸಾವನ್ನಪ್ಪಿದ್ದಾರೆ. ಭಾರೀ ಮಳೆಗೆ ರಾಜ್ಯದ ೧೦ಕ್ಕೂ ಹೆಚ್ಚು ಜಿಲ್ಲೆಗಳು ತತ್ತರಿಸಿದ್ದು, ಅಂತೆಯೇ ವಿವಿಧ ಮಳೆ ಸಂಬAಧಿತ ದುರಂತಗಳಲ್ಲಿ ೫ ಮಂದಿ ಸಾವಿಗೀಡಾಗಿದ್ದಾರೆ. ಮಲ್ಲಪ್ಪ ಶರಣಪ್ಪ ಕರೆಪನೋರ್ (೨೫) ಹೊಳೆ ದಾಟುವಾಗ ಕೊಚ್ಚಿಕೊಂಡು ಹೋಗಿದ್ದಾರೆ. ಈತ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧನ್ನೂರ (ಆರ್) ಗ್ರಾಮದ ನಿವಾಸಿಯಾಗಿದ್ದು, ಆತನಿಗಾಗಿ ಶೋಧ ಮುಂದುವರಿದಿದೆ. ಅಂತೆಯೇ ಮಂಜುನಾಥ ಬಸವರಾಜ ಆನಂದಿ (೨೭) ಎಂಬಾತ ತುಂಗಭದ್ರಾ ನದಿಯಲ್ಲಿ ದಡದಲ್ಲಿ ಕೈಸ್ವಚ್ಛಗೊಳಿಸಲು ಮುಂದಾದಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮಾಕನೂರು ಗ್ರಾಮದ ಬಳಿ ಈ ಘಟನೆ ನಡೆದಿದೆ. ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಬೀರಾಳ್ (ಬಿ) ಗ್ರಾಮದ ನಿವಾಸಿ ಬಸಮ್ಮ (೪೦) ಎಡೆಬಿಡದೆ ಸುರಿದ ಮಳೆಗೆ ಮನೆ ಕುಸಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಳಿಯ ರಾಮತೀರ್ಥ ನದಿಯಲ್ಲಿ ಈಜಲು ಯತ್ನಿಸಿದ ಮಣಿಕಂಠ ಮಂಜುನಾಥ ನಾಯ್ಕ್ (೧೭) ಕೊಚ್ಚಿಕೊಂಡು ಹೋಗಿದ್ದಾರೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಜಲಮೂಲಗಳ ಬಳಿ ಹೋಗದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಉಡುಪಿ ಜಿಲ್ಲೆಯ ಅರಸಿನಗುಂಡಿ ಜಲಪಾತ ವೀಕ್ಷಣೆ ವೇಳೆ ಶರತ್ ಕುಮಾರ್ (೨೩) ಮೃತಪಟ್ಟಿದ್ದು, ಶರತ್ ನದಿಯ ದಡದಲ್ಲಿ ನಿಂತಿದ್ದಾಗ ಆಯತಪ್ಪಿ ಬಿದ್ದು ಕೊಚ್ಚಿಕೊಂಡು ಹೋಗಿರುವ ವೀಡಿಯೋ ವೈರಲ್ ಆಗಿದೆ. ಅವರ ಮೃತದೇಹಕ್ಕಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಈ ಎಲ್ಲಾ ಘಟನೆಗಳು ಕಳೆದ ೨೪ ಗಂಟೆಗಳಲ್ಲಿ ನಡೆದಿವೆ.

ಪರಿಸ್ಥಿತಿ ಆಧಾರಿಸಿ ನಿರ್ಧಾರ - ದೇವೇಗೌಡ

ಬೆಂಗಳೂರು, ಜು. ೨೫: ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಮಾತುಗಳ ಕುರಿತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಹೋರಾಟ ನಡೆಸಲಿದೆ. ಆದಾಗ್ಯೂ, ಪರಿಸ್ಥಿತಿ ಆಧಾರಿಸಿ ಪಕ್ಷ ಮುಂದೆ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು. ವಿರೋಧ ಪಕ್ಷಗಳ ಸಭೆಗೆ ತಮ್ಮ ಉಪಸ್ಥಿತಿ ಇರಬೇಕೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಯಸಿದ್ದರೂ ಕರ್ನಾಟಕದ ಕಾಂಗ್ರೆಸ್‌ನ ಒಂದು ವರ್ಗ ಅಂತಹ ಕ್ರಮವನ್ನು ವಿರೋಧಿಸಿದ್ದರಿಂದ ಆಹ್ವಾನ ನೀಡಿರಲಿಲ್ಲ ಎಂದು ಅವರು ಹೇಳಿದರು.

ಮಣಿಪುರದಲ್ಲಿ ಭಾರತದ ಕಲ್ಪನೆಯ ಮರುನಿರ್ಮಾಣ-ರಾಹುಲ್

ನವದೆಹಲಿ, ಜು. ೨೫: ‘ನಮ್ಮನ್ನು ನೀವು ಹೇಗೆ ಬೇಕಾದರೂ ಕರೆಯಿರಿ ಆದರೆ ‘ನಾವು ಇಂಡಿಯಾ' ಮತ್ತು ಮಣಿಪುರದಲ್ಲಿ ಭಾರತದ ಕಲ್ಪನೆಯನ್ನು ಮರುನಿರ್ಮಾಣ ಮಾಡುತ್ತೇವೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿಗೆ ತಿರುಗೇಟು ನೀಡಿ ಟ್ವೀಟ್ ಮಾಡಿದ ರಾಹುಲ್ ಗಾಂಧಿ, ಮೋದಿ, ನಿಮಗೆ ಬೇಕಾದ ಹಾಗೆ ನಮ್ಮನ್ನು ಕರೆಯಿರಿ. ನಾವು ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಸಹಾಯ ಮಾಡುತ್ತೇವೆ ಮತ್ತು ಪ್ರತಿ ಮಹಿಳೆ ಮತ್ತು ಮಗುವಿನ ಕಣ್ಣೀರು ಒರೆಸುತ್ತೇವೆ ಎಂದು ಹೇಳಿದ್ದಾರೆ.

ವಿಜಯಪುರದಲ್ಲಿ ಭೂಕಂಪನ

ವಿಜಯಪುರ, ಜು. ೨೫: ನಿರಂತರ ಮಳೆ ಮಧ್ಯೆಯೂ ವಿಜಯಪುರದಲ್ಲಿ ಭೂಕಂಪನದ ಅನುಭವವಾಗಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಮಂಗಳವಾರ ಭೂಮಿ ನಡುಗಿದ ಅನುಭವವಾಗಿದೆ. ಬೆಳಿಗ್ಗೆ ೯.೫೫ಕ್ಕೆ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ೪ರ ತೀವ್ರತೆಯ ಭೂಕಂಪನ ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಾಧ್ಯತೆ

ನವದೆಹಲಿ, ಜು. ೨೫: ಮಣಿಪುರ ಹಿಂಸಾಚಾರದ ಕುರಿತು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಆಗ್ರಹಿಸುತ್ತಿರುವ ಪ್ರತಿಪಕ್ಷಗಳ ಮೈತ್ರಿಕೂಟ IಓಆIಂ, ಈಗ ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ. ಭಾರತೀಯ ರಾಷ್ಟಿçÃಯ ಅಭಿವೃದ್ಧಿ ಒಳಗೊಂಡ ಮೈತ್ರಿಕೂಟ (ಇಂಡಿಯಾ)ದ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ಚರ್ಚಿಸ ಲಾಗಿದೆ. ಮಣಿಪುರ ವಿಷಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಪ್ರಾರಂಭಿಸುವAತೆ ಸರ್ಕಾರವನ್ನು ಒತ್ತಾಯಿಸಲು ಇದು ಪರಿಣಾಮಕಾರಿ ಮಾರ್ಗವಾಗಿದೆ ಎಂದು ವಿವಿಧ ಪಕ್ಷಗಳು ಹೇಳಿದ ನಂತರ ಅವಿಶ್ವಾಸ ನಿರ್ಣಯ ಮಂಡಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.