ಮಡಿಕೇರಿ, ಜು. ೨೪: ಸೋಮ ವಾರಪೇಟೆ ಕಲ್ಕಂದೂರು ಗ್ರಾಮದ ಅಬ್ದುಲ್ ರಜಾಕ್ ಅವರ ಪುತ್ರಿ ಫಾತಿಮ (೩೩) ಅವರು ಕಾಣೆ ಯಾಗಿರುವುದಾಗಿ ರಜಾಕ್ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಫಾತಿಮ ಅವರು ಹಾಸನದ ಬೇಲೂರಿನ ಅಬ್ದುಲ್ ರಜಾಕ್ ಎಂಬವರನ್ನು ವಿವಾಹವಾಗಿದ್ದು, ತಾ.೧೬ ರಂದು ಕಲ್ಕಂದೂರಿನ ತನ್ನ ತವರು ಮನೆಗೆ ಬಂದಿದ್ದಾರೆ. ಇಲ್ಲಿಂದ ವಾಪಸ್ ಬೇಲೂರಿಗೆ ತೆರಳಿದ್ದು, ನಾಪತ್ತೆಯಾಗಿದ್ದಾರೆಂದು ಫಾತಿಮಾಳ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಹಿಳೆಯ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಸೋಮವಾರಪೇಟೆ ಠಾಣೆ ದೂ. ೦೮೨೭೨-೨೨೯೦೦೦ ಅನ್ನು ಸಂಪರ್ಕಿಸುವAತೆ ಕೋರಿದೆ.