ಮಡಿಕೇರಿ, ಜು. ೨೪: ಜಿಲ್ಲೆಯಾದ್ಯಂತ ಭಾರೀ ಗಾಳಿ - ಮಳೆಯಿಂದಾಗಿ ಹಲವಾರು ರೀತಿಯಲ್ಲಿ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿವೆ. ಮಳೆಯ ಕಾರಣದಿಂದಾಗಿ ಅಲ್ಲಲ್ಲಿ ಎದುರಾಚೆಟ್ಟಳ್ಳಿ : ಮಳೆ ಹೆಚ್ಚುತ್ತಲೇ ಇರುವ ಹಿನ್ನೆಲೆಯಲ್ಲಿ ಮಡಿಕೇರಿ- ಚೆಟ್ಟಳ್ಳಿ ರಸ್ತೆಯಲ್ಲಿನ ಅಬ್ಯಾಲ ಜಲಧಾರೆ ಮೈದುಂಬಿ ಧುಮ್ಮಿಕ್ಕುತ್ತಿದೆ.

ಬೆಟ್ಟದ ಮೇಲಿಂದ ಬೆಳ್ನೊರೆಯಾಗಿ ದುಮ್ಮುಕ್ಕುವ ಅಬ್ಯಾಲ ಜಲ ಧಾರೆ ಗಮನ ಸೆಳೆಯುತ್ತಿದೆ. ಈರಳೆ ಗ್ರಾಮಕ್ಕೆ ಒಳಪಡುವ ಈ ಮಿನಿ ಜಲಪಾತ ಸುಮಾರು ೬೦-೭೦ ಅಡಿಗಳಟ್ಟು ಎತ್ತರದಿಂದ ಬಂಡೆಕಲ್ಲುಗಳ ನಡುವಿಂದ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದೆ. ಬೇಸಿಗೆಯಲ್ಲಿ ಸೊರಗಿ ಹೋಗಿರುವ ಅಬ್ಯಾಲ ಜಲಧಾರೆ ಮುಂಗಾರಿನ ದಿನಗಳಲ್ಲಿ ರಮಣೀಯ ನೋಟದೊಂದಿಗೆ ಕಣ್ಮನ ಸೆಳೆಯುತ್ತಿದೆ.

ಗಿರುವ ವಿವಿಧ ಚಿತ್ರಣಗಳು ಇಲ್ಲಿವೆ.ಮಡಿಕೇರಿ : ನಗರದ ವಿವಿಧ ಬಡಾವಣೆಗಳಲ್ಲಿ ಬರೆ ಕುಸಿತ ಪ್ರದೇಶಕ್ಕೆ ನಗರಸಭಾ ಅಧ್ಯಕ್ಷೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಭೇಟಿ ನೀಡಿ ಪರಿಶೀಲಿಸಿದರು. ವಿವಿಧ ವಾರ್ಡ್ನಲ್ಲಿ ಬರೆ ಕುಸಿತ ಪ್ರದೇಶಕ್ಕೆ ವೀಕ್ಷಣೆ, ಪೀಲ್ಟ್çಹೌಸ್ ನಲ್ಲಿ ಎರಡು ಮೋಟಾರ್, ಕೂಟುಹೊಳೆಯಲ್ಲಿ ಟಿಸಿ ಹಾಳಾಗಿದ್ದನ್ನು ಮನಗಂಡ ಸದಸ್ಯರು ಖುದ್ದು ಸ್ಥಳಕ್ಕೆ ಧಾವಿಸಿ ನೀರಿನ ಸಮಸ್ಯೆ ಆಗಿದ್ದನ್ನು ಸರಿಪಡಿಸಿದರು. ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್, ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ, ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯೆ ಸಭೀತಾ ಸೇರಿದಂತೆ ನಗರಸಭಾ ಸದಸ್ಯರು ಹಾಜರಿದ್ದರು.

ಶವ ಸಂಸ್ಕಾರಕ್ಕೆ ಪರದಾಡಿದ ಕುಟುಂಬಸ್ಥ್ದರು

ಕೂಡಿಗೆ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆ ಹಲವು ಅಮಡಿಕೇರಿ: ಮಡಿಕೇರಿ ತಾಲೂಕು ಮೇಘತ್ತಾಳು ಗ್ರಾಮದ ಐ.ಜಿ ಕಾರ್ಯಪ್ಪ ಅವರ ಜಾಗದಲ್ಲಿ ನಿರ್ಮಿಸಿರುವ ಕೆರೆಯು ಒಡೆದು ಪಕ್ಕದ ಸಿ.ಸಿ. ಸೋಮಯ್ಯ ಅವರ ಕಾಫಿ ತೋಟ ಹಾಗೂ ರಸ್ತೆಗೆ ಹಾನಿಯಾಗಿದೆ. ಹಾಗೆಯೇ ಕಾಫಿ ಒಣ ಹಾಕಲು ನಿರ್ಮಿಸಿರುವ ಕಣದ ಮೇಲೆ ಮಣ್ಣು ತುಂಬಿದೆ. ಈ ಹಿನ್ನೆಲೆ ಮಣ್ಣು ತೆರವುಗೊಳಿಸುವ ಯಂತ್ರದಿAದ ತೋಡಿನಲ್ಲಿ ಬಂದಿರುವ ದೊಡ್ಡ ದೊಡ್ಡ ಮರದ ದಿಮ್ಮಿಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ.

ವಾಂತರ ಸೃಷ್ಟಿಸಿದೆ. ಕಾವೇರಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು ಇದರೊಂದಿಗೆ ಹಾರಂಗಿ ಜಲಾಶಯದಿಂದ ಹೊರಬಿಡುತ್ತಿರುವ ಅಪಾರ ಪ್ರಮಾಣದ ಹೊರಹರಿವು ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟುಮಾಡುವ ಸೂಚನೆ ನೀಡುತ್ತಿದೆ. ನದಿಯ ಉಗ್ರಪ್ರತಾಪ ನದಿಯಂಚಿನ ನಿವಾಸಿಗಳನ್ನು ನಿದ್ದೆ ಕೆಡಿಸಿದೆ.

ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆಯ ರಾಂಪುರ (ಹಕ್ಕೆ) ಗ್ರಾಮದಲ್ಲಿ ಮೃತ ವೃದ್ಧೆ ಮಂಚಮ್ಮ ಅಂತ್ಯಸAಸ್ಕಾರಕ್ಕೆ ಮಳೆ ಅಡ್ಡಿಪಡಿಸಿದ ಘಟನೆ ನಡೆದಿದೆ. ಈ ಭಾಗದಲ್ಲಿ ಸ್ಮಶಾನದ ಜಾಗದ ಕೊರತೆ ಕಾರಣ ಸಾಮಾನ್ಯವಾಗಿ ನದಿ ದಂಡೆಯಲ್ಲಿ ಮೃತದೇಹಗಳ ಅಂತ್ಯಸAಸ್ಕಾರ ಮಾಡಲಾಗುತ್ತದೆ. ನದಿ ಉಕ್ಕಿ ಹರಿದು ನದಿ ದಂಡೆ ಆಕ್ರಮಿಸಿಕೊಂಡ ಕಾರಣ ಶವಸಂಸ್ಕಾರಕ್ಕೆ ಜಾಗವಿಲ್ಲದೆ ಕುಟುಂಬಸ್ಥರು ಪರದಾಡಿದರು. ಶಾಸಕ ಮಂಥರ್ ಗೌಡ ಅವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಸೇರಿದ ಸಸ್ಯಕ್ಷೇತ್ರ ಸಮೀಪ ಅಂತ್ಯಕ್ರಿಯೆಗೆ ವ್ಯವಸ್ಥೆ ಕಲ್ಪಿಸಲಾಯಿತು.

ಗ್ರಾಮ ವ್ಯಾಪ್ತಿಯಲ್ಲಿ ಸ್ಮಶಾನ ಒದಗಿಸುವ ಮೂಲಕ ಗ್ರಾಮಸ್ಥರಿಗೆ ಅನುಕೂಲ ಒದಗಿಸಿಕೊಡುವಂತೆ ಮೃತರ ಸಂಬAಧಿಕರಾದ ಚಂದ್ರಕುಮಾರ್, ಸಂತೋಷ್, ಸುಖೇಶ್, ಗ್ರಾಮಸ್ಥರಾದ ಸಣ್ಣಯ್ಯ, ಹನುಮಯ್ಯ, ಪುಟ್ಟಯ್ಯ, ಚಂದನ್, ಸುರೇಶ್, ನಟರಾಜ್, ಪುನೀತ್ ಆಗ್ರಹಿಸಿದ್ದಾರೆ.

ಚೆಟ್ಟಳ್ಳಿ : ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಬಟ್ಟೀರ ಗಿರೀಶ್ ಬಿದ್ದಪ್ಪ ಅವರಿಗೆ ಸೇರಿದ ಮನೆ ಮೇಲೆ ಮರ ಬಿದ್ದ ಪರಿಣಾಮ ಹಾನಿಗೊಳಗಾಗಿದೆ.

ಬೆಳಿಗೆ ೧೦.೩೦ ಗಂಟೆಗೆ ಮಳೆ ಗಾಳಿಯ ರಭಸಕ್ಕೆ ಮನೆಯ ಹಿಂದಿರುವ ಹುಣಸೆ ಮರ ಒಂದು ಮನೆಯ ಮೇಲ್ಚಾವಣಿಯ ಮೇಲೆ ಬಿದ್ದ ರಭಸಕ್ಕೆ ಮನೆಗೆ ಹಾನಿಯಾಗಿದಲ್ಲದೆ ಕೋಣೆಯೊಳಗಿನ ಗಾಡ್ರೇಜ್ ಜಖಂಗೊAಡಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಕಂದಾಯ ಪರಿವೀಕ್ಷಕ ಪ್ರಶಾಂತ್, ಗ್ರಾಮಲೆಕ್ಕಿಗ ನಾಗೇಶ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಮುಳ್ಳಂಡ ಅಂಜನ್ ಮುತ್ತಪ್ಪ, ಸುರೇಶ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.

ಕರಿಕೆ: ಕೆಲ ದಿನಗಳಿಂದ ಗ್ರಾಮದಲ್ಲಿ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಬರೂಕ ಜಲವಿದ್ಯುತ್ ಉತ್ಪಾದನಾ ಘಟಕದ ನೀರಿನ ನಾಲೆಗೆ ಗುಡ್ಡ ಕುಸಿತವಾಗಿದೆ. ಪಟ್ಟಿಘಾಟ್ ಮೀಸಲು ಅರಣ್ಯದಂಚಿನ ಹದಿಮೂರನೇ ಮೈಲು ಎಂಬಲ್ಲಿ ಗುಡ್ಡ ಕುಸಿತವಾಗಿ ಮರ ಕಲ್ಲುಬಂಡೆಗಳು ನಾಲೆಗೆ ಬಿದ್ದಿದ್ದು ನಾಲೆ ಸಂಪೂರ್ಣ ಬಂದ್ ಆದಲ್ಲಿ ಪಕ್ಕದ ಖಾಸಗಿಯವರ ಅಡಿಕೆ ತೋಟಕ್ಕೆ ಹಾನಿಯಾಗುವ ಸಾಧ್ಯತೆ ಇದೆ.

ಮುಳ್ಳೂರು: ಶನಿವಾರಸಂತೆ ವ್ಯಾಪ್ತಿಯಲ್ಲಿ ಕಳೆದ ೪ ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಕೆಲವು ಕಡೆಗಳಲ್ಲಿ ಮಳೆಗಿಂತ ಗಾಳಿ ರಭಸವಾಗಿ ಬೀಸುತ್ತಿರುವುದರಿಂದ ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಸಮೀಪದ ನಿಡ್ತ, ಆಲೂರುಸಿದ್ದಾಪುರ ವ್ಯಾಪ್ತಿಯಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಧರಾಶಾಯಿ ಆಗಿರುವ ಹಿನ್ನೆಲೆಯಲ್ಲಿ ೨ ದಿನಗಳಿಂದ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ ಸೆಸ್ಕ್ ಸಿಬ್ಬಂದಿ ವಿದ್ಯುತ್ ದುರಸ್ಥಿ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಭಾರೀ ಮಳೆ ಗಾಳಿಗೆ ಆಲೂರುಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯ ಚಿಕ್ಕ ಕಣಗಾಲು ಗ್ರಾಮದ ನಿವೃತ್ತ ಪೊಲೀಸ್ ಸಿಬ್ಬಂದಿ ಬೆಳ್ಯಪ್ಪ ಎಂಬವರಿಗೆ ಸೇರಿದ ವಾಸದ ಮನೆ ಮೇಲೆ ಮರದ ಕೊಂಬೆಯೊAದು ಮುರಿದು ಬಿದ್ದಿದೆ. ಆಲೂರುಸಿದ್ದಾಪುರ, ಮಾಲಂಬಿ ವ್ಯಾಪ್ತಿಯಲ್ಲಿ ಕಳೆದ ೨ ದಿನದಲ್ಲಿ ೪.೩೫ ಇಂಚು ಮಳೆ ದಾಖಲಾಗಿದೆ.

ಮರ ತೆರವಿಗೆ ಒತ್ತಾಯ

ಮಡಿಕೇರಿ : ಮಡಿಕೇರಿಯ ಹಳೆ ಸಿದ್ದಾಪುರ ರಸ್ತೆಯಲ್ಲಿರುವ ನಗರಸಭಾ ಉದ್ಯಾನವನದಲ್ಲಿನ ಮರವು ಗಾಳಿ - ಮಳೆಗೆ ರಸ್ತೆಯತ್ತ ಭಾಗಿದೆ. ಜಿಲ್ಲೆಯಲ್ಲಿ ಮಳೆಯ ರಭಸ ಹೆಚ್ಚಿದ್ದು, ಈ ಮರವು ಬೀಳುವ ಅಪಾಯದಲ್ಲಿವೆ. ಇದು ಬಿದ್ದರೆ ನೇರವಾಗಿ ವಿದ್ಯುತ್ ಕಂಬ - ತಂತಿಗಳ ಮೇಲೆಯೇ ಬೀಳುವ ಅಪಾಯವಿದೆ. ತಕ್ಷಣವೇ ಮರ ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಈ ಸಂಬAಧ ನಗರಸಭೆ, ಅರಣ್ಯ ಇಲಾಖೆಗೆ ಸ್ಥಳೀಯರಾದ ಸಿ.ಕೆ. ಮೇದಪ್ಪ ಅವರು ಮನವಿ ಪತ್ರ ಸಲ್ಲಿಸಿದ್ದಾರೆ.ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಹುಲುಗುಂದ ಗ್ರಾಮದಲ್ಲಿ ಧಾರಾಕಾರ ಮಳೆಯಿಂದಾಗಿ ಧರ್ಮಲಿಂಗA ಎಂಬವರ ಮನೆ ಕುಸಿದು ಭಾರೀ ನಷ್ಟವಾಗಿದೆ. ಮನೆಯಲ್ಲಿದ್ದವರು ಹೊರ ಹೋಗಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್ ನಾಯಕ್ ಮತ್ತು ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಭೇಟಿ ನೀಡಿ ಪರಿಶೀಲನೆ ಮಾಡಿದರು ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಮಣಿಕಂಠ ಮತ್ತು ಲಕ್ಷಿö್ಮ ಉಪಸ್ಥಿತರಿದ್ದರು.

ಕರಿಕೆ: ಇಲ್ಲಿಗೆ ಸಮೀಪದ ಹನ್ನೊಂದನೇ ಮೈಲು ಎಂಬಲ್ಲಿ ರಸ್ತೆಗೆ ಮರ ಉರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ನಂತರ ಖಾಸಗಿ ಬಸ್‌ನ ಸಿಬ್ಬಂದಿ, ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದಿಂದ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಖಾಸಗಿ ಬಸ್ ಹಾಗೂ ಇತರೆ ವಾಹನಗಳು ಸ್ಥಳದಲ್ಲಿ ಜಮಾವಣೆಗೊಂಡಿದ್ದವು. ಈ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಲೋಕೋಪಯೋಗಿ ಇಲಾಖೆ ರಸ್ತೆ ಸಂಚಾರ ಸುಗಮವಾಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ತಂಡವನ್ನು ವಾಹನ ಸಹಿತ ನಿಯೋಜಿಸಬೇಕಿದೆ. -ಸುಧೀರ್ ಹೊದ್ದೆಟ್ಟಿಸುಂಟಿಕೊಪ್ಪ: ಸುಂಟಿಕೊಪ್ಪ ಸುತ್ತಮುತ್ತಲ ವ್ಯಾಪ್ತಿಯಲ್ಲಿ ವಿಪರೀತ ಮಳೆ ಗಾಳಿಯ ಹಿನ್ನೆಲೆಯಲ್ಲಿ ಮನೆಯ ಗೋಡೆ, ರಸ್ತೆ, ಮರಗಳು ವಿದ್ಯುತ್ ಕಂಬಗಳು ಧರಾಶಾಯಿಗೊಂಡಿವೆ. ಕಳೆದ ೩ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಗಾಳಿ ಮಳೆಯ ಹಿನ್ನೆಲೆಯಲ್ಲಿ ಸ್ವಸ್ಥಶಾಲೆ ಸಮೀಪದಲ್ಲಿ ಟಿಸಿಎಲ್ ತೋಟದ ಮರ ಮುತ್ತ ಎಂಬವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಮನೆಗೋಡೆ ಸೇರಿದಂತೆ ಇನ್ನಿತರ ಭಾಗಗಳು ಜಖಂಗೊAಡಿದ್ದು, ಇದರಿಂದ ಸಾವಿರಾರು ರೂಪಾಯಿ ನಷ್ಟವುಂಟಾಗಿದೆ. ಅದೃಷ್ಟವಶಾತ್ ಮನೆಯ ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಪಂಚಾಯಿತಿ ಉಪಾಧ್ಯಕ್ಷ ಕೆ.ಕೆ.ಪ್ರಸಾದ್ ಕುಟ್ಟಪ್ಪ, ಸದಸ್ಯ ಆಲಿಕುಟ್ಟಿ, ಗ್ರಾಮಲೆಕ್ಕಿಗರಾದ ನಾಗೇಂದ್ರ ಭೇಟಿ ನೀಡಿ ಪರಿಶೀಲಿಸಿ ಬಿದ್ದ ಮರವನ್ನು ತೆರವುಗೊಳಿಸಿದರು. ಸುಂಟಿಕೊಪ್ಪ ಪಂಪ್‌ಹೌಸ್ ಬಡಾವಣೆಯ ನಿವಾಸಿ ಜಯಮ್ಮ ಎಂಬವರ ಮನೆಯ ಗೋಡೆಯು ಕುಸಿದು ಬಿದ್ದಿದೆ ಪ್ರಾಣಹಾನಿ ಸಂಭವಿಸಿಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಪಂಚಾಯಿತಿ ಅಧ್ಯಕ್ಷೆ ಸದಸ್ಯರುಗಳು, ಗ್ರಾಮಲೆಕ್ಕಿಗರಾದ ನಾಗೇಂದ್ರ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸೋಮವಾರದಂದು ಬೆಳಿಗ್ಗಿನ ಸಮಯದಲ್ಲಿ ಅಲ್ಪಪ್ರಮಾಣದಲ್ಲಿ ಬಿಡುವು ನೀಡಿದ ಮಳೆ ಮಧ್ಯಾಹ್ನದ ನಂತರ ಭಾರೀ ಪ್ರಮಾಣದಲ್ಲಿ ಸುರಿಯಿತು. ಸಣ್ಣಪುಟ್ಟ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಕೆಲವು ಗ್ರಾಮಗಳಲ್ಲಿ ಭೂಕುಸಿತ, ಮನೆಗಳ ಕುಸಿತ ಸೇರಿದಂತೆ ಭಾರೀ ಗಾತ್ರದ ಮರಗಳು ವಿದ್ಯುತ್ ಕಂಬಗಳು ಧರೆಗುರುಳಿದೆ. ಕೆಲವು ಕಡೆಗಳಲ್ಲಿ ಮರಗಳು ಭೂಕುಸಿತ ಉಂಟಾದ ರಸ್ತೆ ಸಂಪರ್ಕಗಳು ಕಡಿತಗೊಂಡಿರುವ ಬಗ್ಗೆ ವರದಿಯಾಗಿವೆ.

ಸಿದ್ದಾಪುರ : ಭಾರೀ ಮಳೆಗೆ ಅಮ್ಮತ್ತಿ ಹೋಬಳಿ ಬಾಡಗ ಬಾಣಂಗಾಲ ಗ್ರಾಮದ ಮಾಲತಿ ಎಂಬವರ ಮನೆ ಹಾನಿಯಾಗಿದ್ದು, ಸ್ಥಳಕ್ಕೆ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ಕರಿಕೆ: ಇಲ್ಲಿಗೆ ಸಮೀಪದ ಹನ್ನೊಂದನೇ ಮೈಲು ಎಂಬಲ್ಲಿ ರಸ್ತೆಗೆ ಮರ ಉರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ನಂತರ ಖಾಸಗಿ ಬಸ್‌ನ ಸಿಬ್ಬಂದಿ, ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದಿಂದ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಖಾಸಗಿ ಬಸ್ ಹಾಗೂ ಇತರೆ ವಾಹನಗಳು ಸ್ಥಳದಲ್ಲಿ ಜಮಾವಣೆಗೊಂಡಿದ್ದವು. ಈ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಲೋಕೋಪಯೋಗಿ ಇಲಾಖೆ ರಸ್ತೆ ಸಂಚಾರ ಸುಗಮವಾಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ತಂಡವನ್ನು ವಾಹನ ಸಹಿತ ನಿಯೋಜಿಸಬೇಕಿದೆ. -ಸುಧೀರ್ ಹೊದ್ದೆಟ್ಟಿಗೋಣಿಕೊಪ್ಪಲು: ಎಡೆಬಿಡದೆ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ದ.ಕೊಡಗಿನ ಬಾಳೆಲೆ ಹೋಬಳಿಯ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿರಿಜನ ಆಶ್ರಮ ಶಾಲೆಯ ಕಾಂಪೌAಡ್ ಕುಸಿದು ಬಿದ್ದಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ವಿದ್ಯುತ್ ಪೂರೈಕೆಯಲ್ಲಿ ಕೊರತೆ ಎದುರಾಗಿದೆ.

ಸಿದ್ದಾಪುರ: ಗಾಳಿಯ ರಭಸಕ್ಕೆ ವೀರಾಜಪೇಟೆ ಹೋಬಳಿ ನಾಲ್ಕೇರಿ ಗ್ರಾಮದ ನಿವಾಸಿ ಎಂ. ದಿವ್ಯ ಅವರ ವಾಸದ ಮನೆಯ ಮೇಲ್ಛಾವಣಿ (ಶೀಟ್) ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.