(ವಿಶೇಷ ವರದಿ : ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಜು. ೨೪: ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಕಳೆದ ೭ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿರುವ ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಅಂಚಿನಲ್ಲಿರುವ ಕೆ.ಬಾಡಗ ಗ್ರಾಮ ಪಂಚಾಯಿತಿಯು ಇದೀಗ ಆಡಳಿತ ಮಂಡಳಿಯ ವಿಶೇಷ ಪ್ರಯತ್ನದಿಂದ ಕಸಮುಕ್ತ ಪಂಚಾಯಿತಿಯನ್ನಾಗಿ ಮಾಡಲು ಸರ್ವಸನ್ನದ್ಧವಾಗಿದೆ.
ಈ ನಿಟ್ಟಿನಲ್ಲಿ ಗ್ರಾಮದ ೪೦ ಮಂದಿ ಸ್ವಚ್ಛತಾ ಸ್ವಯಂ ಸೇವಕರನ್ನು ನೇಮಕಗೊಳಿಸಲು ಪಂಚಾಯಿತಿಯು ಒಮ್ಮತದ ನಿರ್ಧಾರವನ್ನು ಕೈಗೊಂಡಿದೆ.
ಪAಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಘನತ್ಯಾಜ್ಯ ಮತ್ತು ದ್ರವತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು ತ್ಯಾಜ್ಯ ನಿರ್ವಹಣೆಯನ್ನು ಕ್ರಮಬದ್ಧವಾಗಿ ನಿರ್ವಹಿಸುವ ಯೋಜನೆ ರೂಪಿಸಿದೆ. ತ್ಯಾಜ್ಯ ನಿರ್ವಹಣೆಯಲ್ಲಿ ಕೆ. ಬಾಡಗ ಗ್ರಾಮ ಪಂಚಾಯಿತಿಯು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಈ ಬಗ್ಗೆ ಸ್ವಚ್ಛ ಭಾರತ್ ಮಿಷನ್ ಈ ಪಂಚಾಯಿತಿಗೆ ಆಗಮಿಸಲಿದೆ.
ಇಲ್ಲಿನ ಕಸ ನಿರ್ವಹಣೆ ಬಗ್ಗೆ ವೀಡಿಯೋ ಚಿತ್ರೀಕರಣವನ್ನು ಮಾಡಲಿದ್ದು, ರಾಜ್ಯದ ಪ್ರತಿ ಪಂಚಾಯಿತಿಯಲ್ಲಿ ಈ ರೀತಿಯ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಕಸ ಮುಕ್ತ ಮಾಡಲು ಯೋಜನೆ ಕೈಗೆತ್ತಿಕೊಂಡಿದೆ. ಇದರಿಂದ ಕೊಡಗಿನ ಪೊನ್ನಂಪೇಟೆ ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ಪಂಚಾಯಿತಿಯು ಆಯ್ಕೆ ಆಗಿರುವುದು ಗಮನಾರ್ಹವಾಗಿದೆ.
೩೫೦೦ಕ್ಕೂ ಅಧಿಕ ಜನಸಂಖ್ಯೆಯುಳ್ಳ ಈ ಪಂಚಾಯಿತಿಯಲ್ಲಿ ೨೫೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ವಾಸವಾಗಿದ್ದಾರೆ. ೨೨೮೮ ಹೆಕ್ಟೇರ್ ವಿಸ್ತೀರ್ಣವುಳ್ಳ ಕೆ.ಬಾಡಗ ಗ್ರಾಮ ಪಂಚಾಯಿತಿಯಲ್ಲಿ ನಾಣಚ್ಚಿ ಗದ್ದೆ ಹಾಡಿ, ಚಂದನಕೆರೆ, ಬಾಳೆಕೋವು, ತಿರುನಾಡ ಪೈಸಾರಿ, ಚೂರಿಕಾಡು, ಮುಚ್ಚನಕೊಲ್ಲಿ, ಬೊಳ್ಳೆರ ಗೇಟ್, ಪೂಕಂಡಿ, ತಾಯಿಭೂಮಿ ಪೈಸಾರಿ, ಕೋದಮೂಲೆ, ಹಾಡಿಗಳನ್ನು ಹೊಂದಿರುವ ಜನವಸತಿ ಪ್ರದೇಶಗಳಾಗಿವೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕ್ಷರತೆ ಕಡಿಮೆಯಿದ್ದರೂ ಜ್ಞಾನಕ್ಕೆ ಇಲ್ಲಿ ಕೊರತೆಯಿಲ್ಲ.
ನಾಗರಹೊಳೆ ರಾಷ್ಟಿçÃಯ ಉದ್ಯಾನವನದಲ್ಲಿ ಸಾಕಷ್ಟು ಆದಿವಾಸಿಗಳು ನೆಲೆ ನಿಂತಿದ್ದಾರೆ. ಆದರೆ ಇಲ್ಲಿನ ಹಾಡಿಗಳಲ್ಲಿ ಕಸದ ಸಮಸ್ಯೆ ಕಂಡು ಬರುತ್ತಿಲ್ಲ. ಅಷ್ಟಾಗಿ ಅಕ್ಷರ ಅಭ್ಯಾಸವಿಲ್ಲದಿದ್ದರೂ ಇಲ್ಲಿಯ ವಾಸಿಗಳು ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ನಾಗರಹೊಳೆ ರಾಷ್ಟಿçÃಯ ಉದ್ಯಾನವನಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ವೇಳೆ ಕೆ.ಬಾಡಗ ಗ್ರಾಮ ಪಂಚಾಯಿತಿಯ ಮೂಲಕವೇ ತೆರಳಬೇಕಾಗಿದೆ. ಈ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ರೆಸಾರ್ಟ್ಗಳು, ಹೊಂಸ್ಟೇಗಳು ಹಾಗೂ ಅಂಗಡಿ ಹೊಟೇಲ್ಗಳು ಕಾರ್ಯನಿರ್ವಹಿಸುತ್ತಿವೆ. ಇವರಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ತಮ್ಮಲ್ಲಿಯೇ ವಿಲೇವಾರಿ ಮಾಡಲು ಪಂಚಾಯಿತಿ ನಿರ್ದೇಶನ ನೀಡಿದೆ. ಆಗಿಂದ್ದಾಗಿಯೇ ಸಭೆಗಳನ್ನು ಕರೆದು ಈ ಬಗ್ಗೆ ಜಾಗೃತಿಯನ್ನು ಸಂಬAಧಿಸಿದವರಿಗೆ ನೀಡಲಾಗುತ್ತಿದೆ. ಇದರಿಂದ ಕಸ ನಿರ್ವಹಣೆಯಲ್ಲಿ ಪಂಚಾಯಿತಿ ಪ್ರಮುಖ ಪಾತ್ರ ವಹಿಸಿದೆ.