ಪೊನ್ನAಪೇಟೆ, ಜು. ೨೪: ಇತ್ತೀಚೆಗೆ ಪೊನ್ನಂಪೇಟೆ ತಾಲೂಕಿನಾದ್ಯಂತ ಸಿಕ್ಕ ಸಿಕ್ಕಲ್ಲಿ ಕಳ್ಳತನ ಮಾಡುತ್ತಾ ಸಾರ್ವಜನಿಕರ ನೆಮ್ಮದಿ ಕೆಡಿಸಿ, ಪೊಲೀಸರಿಗೆ ತಲೆನೋವಾಗಿದ್ದ ಸುಬ್ರಮಣಿ ಅಲಿಯಾಸ್ ಚುಬ್ರು ್ರ(೩೦) ಎಂಬಾತನನ್ನು ಪೊನ್ನಂಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ಪೊನ್ನಂಪೇಟೆ ತಾಲೂಕಿನ ನಲ್ಲೂರು ಶಾಲೆಯ ಹೆಂಚು ತೆಗೆದು, ಒಳಗೆ ನುಗ್ಗಿದ್ದ ಚುಬ್ರು, ಶಾಲೆಯ ಬೀರು ಹಾಗೂ ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಶಾಲೆಯ ಅಡಿಗೆ ಮನೆಯಲ್ಲಿ ಅಡಿಗೆ ಮಾಡಿಕೊಂಡು ಊಟ ಮಾಡಿ, ಟೇಬಲ್ ಹೊದಿಕೆಯನ್ನು ಹಾಸಿಕೊಂಡು ಅಲ್ಲೇ ಮಲಗಿ ತೆರಳಿದ್ದ, ಈ ಘಟನೆಯ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು ಇಂದು ಮತ್ತೂರು ಗ್ರಾಮದ ಬಸ್ ಶೆಲ್ಟರ್ ಸಮೀಪ ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಚುಬ್ರು ಪೊನ್ನಂಪೇಟೆ ತಾಲೂಕಿನ ನಲ್ಲೂರು, ಬೆಸಗೂರು, ಬಾಳೆಲೆ, ಕಿರುಗೂರು, ಕಾನೂರು, ಬಲ್ಯಮಂಡೂರು, ಮತ್ತೂರು, ಮುಗುಟಗೇರಿ, ಮಾಯಮುಡಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಹಲವು ದೇವಸ್ಥಾನ ಹಾಗೂ ಶಾಲೆಗಳಿಗೆ ನುಗ್ಗಿ ಕೈಗೆ ಸಿಕ್ಕ ವಸ್ತುಗಳನ್ನು ಕದಿಯುತ್ತಿದ್ದ.
ಈ ಹಿಂದೆ ಈತ ಎರಡು ಬಾರಿ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಹೊರಗೆ ಬಂದು ಮತ್ತೆ ಕಳ್ಳತನವನ್ನು ಕಾಯಕ ಮಾಡಿಕೊಂಡಿದ್ದ.
ಕತ್ತಿಯನ್ನು ಹಿಡಿದುಕೊಂಡು ಓಡಾಡುತ್ತಿದ್ದ ಚುಬ್ರು ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡು ಗ್ರಾಮಸ್ಥರಲ್ಲಿ ಭಯ ಹುಟ್ಟಿಸುತ್ತಾ, ಪೊಲೀಸರ ಕೈಗೆ ಸಿಗದೇ ಓಡಾಡುತ್ತಿದ್ದ. ಈತನ ಕೈಯಲ್ಲಿ ಯಾವಾಗಲು ಕತ್ತಿ ಇರುತ್ತಿದ್ದರಿಂದ ಗ್ರಾಮಸ್ಥರು ಭಯಗೊಂಡಿದ್ದರು. ವೃದ್ಧೆಯೊಬ್ಬರನ್ನು ಕೊಲೆ ಮಾಡಿದ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಈತನ ಉಪಟಳದಿಂದ ಗ್ರಾಮಸ್ಥರು ಬೇಸತ್ತಿದ್ದರು. ಚುಬ್ರುವಿನ ಬಂಧನವಾಗಿರುವುದರಿAದ ಗ್ರಾಮಸ್ಥರು ಈಗ ನಿಟ್ಟುಸಿರುಬಿಟ್ಟಿದ್ದಾರೆ.
ಕೊಡಗು ಎಸ್.ಪಿ ರಾಮರಾಜನ್ ಮತ್ತು ಹೆಚ್ಚುವರಿ ವರಿಷ್ಠಾಧಿಕಾರಿ ಸುಂದರ್ ರಾಜ್ ಅವರ ನಿರ್ದೇಶನದ ಮೇರೆಗೆ, ವೀರಾಜಪೇಟೆ ಡಿವೈಎಸ್‌ಪಿ ಮೋಹನ್ ಕುಮಾರ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ಗೋವಿಂದರಾಜು, ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿ ಲಕ್ಷö್ಮಣ್ ಕಾಮಣ್ಣವರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕ್ರೆöÊಂ ಸಬ್ ಇನ್ಸ್ಪೆಕ್ಟರ್ ಸುಬ್ರಮಣ್ಯ, ಸಿಬ್ಬಂದಿಗಳಾದ ಮಹದೇಶ್ವರ ಸ್ವಾಮಿ, ನಟರಾಜ, ದಯಾನಂದ ಕಂಬಳಿ, ವೇಣುಗೋಪಾಲ್ ಪ್ರವೀಣ್ ಭಾಗವಹಿಸಿದ್ದರು.
-ಚನ್ನನಾಯಕ