ಶ್ರೀಮಂಗಲ, ಜು. ೨೪ : ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿರುವುದು ಪುಸ್ತಕ ಓದುವುದು ಮತ್ತು ಸಾಹಿತ್ಯಾಭಿಮಾನ ಕುಂಠಿತಗೊಳ್ಳಲು ಕಾರಣವಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಪುಸ್ತಕ ಓದುವ ಅಭಿರುಚಿ ಬೆಳೆಸಬೇಕು. ವಯಸ್ಸಿಗೆ ತಕ್ಕಂತೆ ನೀತಿಕತೆ, ಚಿತ್ರಕತೆ ಓದಲು ಪೋಷಕರು ಪ್ರೇರೇಪಿಸಬೇಕು, ಬಹಳಷ್ಟು ಮಕ್ಕಳಿಗೆ ಕನ್ನಡ ಬರುವುದಿಲ್ಲ. ಇದು ಕೊಡವ ಭಾಷೆ ಬೆಳವಣಿಗೆ, ಸಾಹಿತ್ಯ ಕೃಷಿಗೆ ಹಿನ್ನಡೆಯಾಗಬಹುದು. ಸಾಹಿತ್ಯ ಹಿರಿಯರಿಗೆ ಮಾತ್ರ ಸೀಮಿತ ಎಂಬ ಭಾವನೆ ತೊರೆದು, ಮೊಬೈಲ್ ಬಳಕೆಯಿಂದ ಹೊರಬಂದು ಮಕ್ಕಳು, ಯುವಕರು ಕೊಡವ ಭಾಷೆ, ಸಾಹಿತ್ಯದ ಅಭಿವೃದ್ಧಿಗೆ ಆಸಕ್ತಿ ತೋರಿಸಬೇಕೆಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅಭಿಪ್ರಾಯಪಟ್ಟರು.
ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಬೆಳ್ಳಿ ಹಬ್ಬದ ಪ್ರಯುಕ್ತ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕವಾಗಿ ತಪ್ಪಡ್ಕವನ್ನು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ಕಟ್ಟುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೊಡವ ಭಾಷೆ, ಸಾಹಿತ್ಯ ಕಲೆ, ಸಂಸ್ಕೃತಿಯ ಪ್ರತಿಭೆಗಳನ್ನು ಹೊರತರಲು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಪರಿಗಣಿಸಿ ಮಡಿಕೇರಿ ಆಕಾಶವಾಣಿ ಉದ್ಘೋಷಕಿ ಕೂಪದಿರ ಶಾರದಾ ನಂಜಪ್ಪ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಕಲೆ, ಸಾಹಿತ್ಯದಲ್ಲಿನ ಪ್ರತಿಭೆಗಳನ್ನು ಬೆಳಕಿಗೆ ತರಲು ಆಕಾಶವಾಣಿ, ಮಾಧ್ಯಮಗಳು, ಎಳ್ತ್ಕಾರಡ ಕೂಟದಂತಹ ಸಂಘಗಳು ವೇದಿಕೆಯಾಗುವ ಮೂಲಕ ಪ್ರೋತ್ಸಾಹ ನೀಡುತ್ತಾ ಬಂದಿವೆ. ಕೊಡವರು ಹಿರಿಯರು ಬರೆದ ಸಾಹಿತ್ಯದ ಸಮಗ್ರ ಅಧ್ಯಯನವಾಗಬೇಕು.
ಇಂಗ್ಲಿಷ್ ಭಾಷೆ ಮಕ್ಕಳು ಶಾಲೆಯಲ್ಲಿ ಕಲಿಯುತ್ತಾರೆ, ಆದರೆ ಕೊಡವ ಭಾಷೆ ಮನೆಯಲ್ಲಿ ತಂದೆ-ತಾಯಿ ಕಲಿಸಬೇಕು, ಕೊಡವರು-ಕೊಡವರೊಂದಿಗೆ ಮಾತನಾಡುವಾಗ ಕೊಡವ ಭಾಷೆ ಬಳಸದೇ ಹೋದಾಗ ಭಾಷೆಯ ಬೆಳವಣಿಗೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
(ಮೊದಲ ಪುಟದಿಂದ) ವಿವಿಧ ಕೊಡವ ಸಂಘ ಸಂಸ್ಥೆಗಳು ತಮ್ಮದೇ ಬೇಡಿಕೆ ಮತ್ತು ಕೆಲಸ ಮಾಡುತ್ತಿವೆ, ಇದಕ್ಕೆ ಒಂದಕೊAದು ಪ್ರೋತ್ಸಾಹ ನೀಡಬೇಕು ಹೊರತು ಟೀಕಿಸುವ ಪ್ರವೃತ್ತಿ ಸರಿಯಲ್ಲ ಎಂದರು. ಕೊಡವ ಭಾಷೆ, ಭೂಮಿ, ಸಂಸ್ಕೃತಿಯ ಮೇಲೆ ಅಭಿಮಾನ ಕುಂಠಿತವಾದರೆ ಕೊಡವತನವನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ ಎಂದು ಎಚ್ಚರಿಸಿದ ಅವರು ಎಲ್ಲಾ ಜನಾಂಗಗಳನ್ನು ಪ್ರೀತಿಸಿ, ಗೌರವಿಸಿ ಕೊಡವತನವನ್ನು ಉಳಿಸಿ ಬೆಳೆಸಲು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅವರು, ಕೊಡವ ಭಾಷೆ, ಸಂಸ್ಕೃತಿ, ಸಾಹಿತ್ಯ ಕಲೆಗೆ ಉತ್ತೇಜನ ನೀಡಲು ೧೯೯೪ರಲ್ಲಿ ಕೊಡವ ತಕ್ಕ್ ಎಳ್ತ್ಕಾರಡ ಸ್ಥಾಪನೆ ಮಾಡಲಾಯಿತು. ಇದುವರೆಗೆ ೪೫೦ಕ್ಕೂ ಅಧಿಕ ನಾಟಕ ಕಲಾವಿದರು, ೮೦೦ ಹಾಡುಗಾರರನ್ನು ಬೆಳಕಿಗೆ ತಂದಿದೆ. ೧೯೮೦ರಲ್ಲಿ ಬೆರಳೆಣಿಕೆಯ ಕೊಡವ ಭಾಷೆಯ ಪುಸ್ತಕ ಬರೆಯುವ ಸಾಹಿತಿಗಳು ಇದ್ದರು. ಕೂಟ ಸ್ಥಾಪನೆಯಾದ ಮೇಲೆ ಗ್ರಾಮೀಣ ಭಾಗ, ಜಿಲ್ಲೆಯಾದ್ಯಂತ, ಹೊರ ಜಿಲ್ಲೆ, ರಾಜ್ಯಗಳಲ್ಲಿ ಅಭಿಯಾನ ಕೈಗೊಂಡ ಪ್ರತಿಫಲವಾಗಿ ವಿವಿಧ ಬರಹಗಾರರಿಂದ ೧೫೯ ಪುಸ್ತಕಗಳನ್ನು ನಮ್ಮ ಕೂಟ ಹೊರ ತಂದಿದೆ. ಇದೀಗ ಒಂದೇ ವೇದಿಕೆಯಲ್ಲಿ ಏಕಕಾಲದಲ್ಲಿ ೨೫ ಪುಸ್ತಕ ಲೋಕಾರ್ಪಣೆ ಮಾಡುತ್ತಿದೆ. ಇದುವರೆಗೆ ೧೮೪ ಪುಸ್ತಕಗಳನ್ನು ಕೂಟ ಹೊರ ತಂದಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಚೆಟ್ಟಂಗಡ ಕುಟುಂಬದ ಮಹಿಳಾ ಸಂಘದಿAದ ಸ್ವಾಗತ ನೃತ್ಯ, ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಸಂಸ್ಥೆ, ನಿನಾದ ವಿದ್ಯಾಸಂಸ್ಥೆ, ಸಾಯಿ ಶಂಕರ ವಿದ್ಯಾಸಂಸ್ಥೆ, ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ, ಟಿ.ಶೆಟ್ಟಿಗೇರಿಯ ರೂಟ್ಸ್ ವಿದ್ಯಾಸಂಸ್ಥೆಯಿAದ ಸಾಂಸ್ಕöÈತಿಕ ಕಾರ್ಯಕ್ರಮ, ಉಳುವಂಗಡ ಮೋಹಿತ್ ಅಪ್ಪಯ್ಯ, ಕಬ್ಬಚ್ಚಿರ ರಶ್ಮಿ ಅವರಿಂದ ಹಾಡು, ಚೆಟ್ಟಂಗಡ ಲೇಖನ ಅಕ್ಕಮ್ಮ ಅವರಿಂದ ಭರತನಾಟ್ಯ ಕಾರ್ಯಕ್ರಮಕ್ಕೆ ಮೆರಗು ನೀಡಿತು.
ವೇದಿಕೆಯಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಜಂಟಿ ಕಾರ್ಯದರ್ಶಿ ಆಲೇಮಾಡ ಸುಧೀರ್, ಖಜಾಂಚಿ ಕಳ್ಳಿಚಂಡ ಕಟ್ಟಿ ಪೂಣಚ್ಚ, ನಿರ್ದೇಶಕ ಚೆಪುö್ಪಡೀರ ರಾಕೇಶ್ ದೇವಯ್ಯ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಖಾಯಂ ಆಹ್ವಾನಿತ ನಿರ್ದೇಶಕ ಚೆಪುö್ಪಡೀರ ಕಿಟ್ಟು ಅಯ್ಯಪ್ಪ, ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮಂಡೇಚAಡ ದಿನೇಶ್ ಚಿಟ್ಟಿಯಪ್ಪ ಹಾಜರಿದ್ದರು. ಕೂಟದ ಸಂಘಟನಾ ಕಾರ್ಯದರ್ಶಿ ಚೊಟ್ಟಂಗಡ ಲೋಕೇಶ್ ಗಣಪತಿ, ಖಜಾಂಜಿ ಬೋಡಂಗಡ ಜಗದೀಶ್ ತಿಮ್ಮಯ್ಯ ಮತ್ತು ತೇಲಪಂಡ ಕವನ್ ಕಾರ್ಯಪ್ಪ ಕಾರ್ಯಕ್ರಮ ನಿರ್ವಹಿಸಿದರು.
ಕೂಟದ ಉಪಾಧ್ಯಕ್ಷ ಚೆಂಬAಡ ಶಿವಿ ಭೀಮಯ್ಯ, ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಸಹಕಾರ್ಯದರ್ಶಿ ಬೊಜ್ಜಂಗಡ ನಿತಿನ್ ನಂಜಪ್ಪ, ನಿದೇಶಕರಾದ ಕರ್ತಮಾಡ ಗಿರೀಶ್ ಸುಬ್ಬಯ್ಯ, ಮಾದೇಟಿರ ಪ್ರಮೀಳಾ ಜೀವನ್ ಹಾಜರಿದ್ದರು.