ನಾಪೋಕ್ಲು, ಜು. ೨೪: ಸಮೀಪದ ಬೇತು ಗ್ರಾಮದ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ವಿದ್ಯಾ ಸಮಸ್ಥೆಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು. ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಕುಟ್ಟಂಚೆಟ್ಟೀರ ಮಾದಪ್ಪ ಕಾರ್ಯಕ್ರಮದವನ್ನು ಉದ್ಘಾಟಿಸಿ ನಂತರ ಸಭೆಯ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು. ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಚೋಕಿರ ರತೀಶ್ ತಮ್ಮಯ್ಯ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಬೋಧಿಸಿ ತಮ್ಮ ತಮ್ಮ ಕಾರ್ಯಾಧಕ್ಷತೆಯ ಬಗ್ಗೆ ಮಾರ್ಗದರ್ಶನವನ್ನು ನೀಡಿದರು . ಈ ಸಂದರ್ಭ ವಿದ್ಯಾ ಸಂಸ್ಥೆಯಲ್ಲ ೧೦ ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆಸಲ್ಲಿಸಿದ ಬಿದ್ದಾಟಂಡ ರಹನಾ ಸಂಪತ್ ಅವರನ್ನು ಶಾಲಾ ಆಡಳಿತ ಮಂಡಳಿ ಪರವಾಗಿ ಸನ್ಮಾನಿಸ ಲಾಯಿತು. ವಿದ್ಯಾರ್ಥಿ ನಾಯಕಿ ಯಾಗಿ ಆಫಿಯ ಕೆ.ಎಚ್, ಉಪನಾಯಕನಾಗಿ ಬಿಶನ್ ಬಿದ್ದಪ್ಪ, ಕ್ರೀಡಾ ಮಂತ್ರಿ ಆಗಿ ಪಿ.ಆರ್. ಅಸ್ಲಾಂ, ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಬೋಧಿಸಿ ತಮ್ಮ ತಮ್ಮ ಕಾರ್ಯಾಧಕ್ಷತೆಯ ಬಗ್ಗೆ ಮಾರ್ಗದರ್ಶನವನ್ನು ನೀಡಿದರು . ಈ ಸಂದರ್ಭ ವಿದ್ಯಾ ಸಂಸ್ಥೆಯಲ್ಲ ೧೦ ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆಸಲ್ಲಿಸಿದ ಬಿದ್ದಾಟಂಡ ರಹನಾ ಸಂಪತ್ ಅವರನ್ನು ಶಾಲಾ ಆಡಳಿತ ಮಂಡಳಿ ಪರವಾಗಿ ಸನ್ಮಾನಿಸ ಲಾಯಿತು. ವಿದ್ಯಾರ್ಥಿ ನಾಯಕಿ ಯಾಗಿ ಆಫಿಯ ಕೆ.ಎಚ್, ಉಪನಾಯಕನಾಗಿ ಬಿಶನ್ ಬಿದ್ದಪ್ಪ, ಕ್ರೀಡಾ ಮಂತ್ರಿ ಆಗಿ ಪಿ.ಆರ್. ಅಸ್ಲಾಂ, ಉಪ ಕ್ರೀಡಾಮಂತ್ರಿಯಾಗಿ ಕೈಲಾಶ್, ಸಾಂಸ್ಕೃತಿಕ ಮಂತ್ರಿಯಾಗಿ ದರ್ಷ ದೇಚಮ್ಮ, ಉಪಸಾಂಸ್ಕೃತಿಕ ಮಂತ್ರಿಯಾಗಿ ದುಂದುಭಿ, ಸ್ವಚ್ಛತಾ ಮಂತ್ರಿಯಾಗಿ ಶರಣ್ಯ, ಉಪ ಸ್ವಚ್ಛತಾ ಮಂತ್ರಿಯಾಗಿ ಅಶ್ರೀಫಾ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಯ ನಿರ್ದೇಶಕಿ ವಿದ್ಯಾ ಸುರೇಶ್ ,ಶಾಲಾ ಬೋಧಕ ವೃಂದ ಹಾಗೂ ಸಿಬ್ಬಂದಿ ವರ್ಗ ಹಾಜರಿ ದ್ದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಯಿತು.