ಶ್ರೀಮಂಗಲ, ಜು. ೨೪: ಪೊನ್ನಂಪೇಟೆ ತಾಲೂಕು ನಾಲ್ಕೇರಿ ಗ್ರಾಮದ ರೈತ ಮುಕ್ಕಾಟಿರ ವಿನಯ್ ಬೋಪಯ್ಯ ಅವರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ಮಾಡಿದ್ದು, ಹಸುವಿನ ಸ್ಥಿತಿ ಗಂಭೀರವಾಗಿದೆ.
ಮುಂಜಾನೆ ವೇಳೆ ೩.೩೦ ಗಂಟೆಗೆ ಘಟನೆ ನಡೆದಿದ್ದು, ಸ್ಥಳಕ್ಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಿರಿಯಪಂಡ ಸಚಿನ್ ಪೆಮ್ಮಯ್ಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಲ್ಲುಮಾಡ ಪ್ರಚನ್ ಮುತ್ತಪ್ಪ ಭೇಟಿ ನೀಡಿ ಅರಣ್ಯ ಇಲಾಖೆಯವರೊಂದಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾತುಕತೆ ನಡೆಸಿದರು. ಈ ಸಂದರ್ಭ ಸ್ಥಳೀಯರಾದ ಕಚ್ಚಪನೆರ ರಾಜು, ತೀತಿರ ಕಟ್ಟಿ ಕಾರ್ಯಪ್ಪ, ಮುಕ್ಕಾಟಿರ ರಘು ತಿಮ್ಮಯ್ಯ, ದೇಯಂಡ ಡಾಲು ಮುದ್ದಪ್ಪ, ಕೊಕ್ಕಲೆಮಾಡ ವೀಟು ಕುಶಾಲಪ್ಪ, ಅರಣ್ಯ ಇಲಾಖೆಯವರು, ಪಶು ಸಂಗೋಪನಾ ಇಲಾಖೆಯವರು ಹಾಜರಿದ್ದರು.