ಸೋಮವಾರಪೇಟೆ, ಜು. ೨೪: ಕೆಸರು ಗದ್ದೆ ಕ್ರೀಡಾಕೂಟಗಳು ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದ್ದು, ಪರಸ್ಪರ ಬಾಂಧವ್ಯ ವೃದ್ಧಿಯೊಂದಿಗೆ ಸಾಮರಸ್ಯಕ್ಕೂ ಉತ್ತಮ ವೇದಿಕೆಯಾ ಗಿದೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ಸಮೀಪದ ಅಬ್ಬೂರುಕಟ್ಟೆ ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಹೊಸಳ್ಳಿಯ ಕುಶಾಲಪ್ಪ ಅವರಿಗೆ ಸೇರಿದ ಗದ್ದೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಹಾಗೂ ಸ್ಥಳೀಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಕ್ಕಲುತನವೇ ಪ್ರಮುಖವಾಗಿ ರುವ ಒಕ್ಕಲಿಗ ಸಮುದಾಯ ನಾಡಿಗೆ ಅನ್ನ ನೀಡುವ ಅನ್ನದಾತನಿದ್ದಂತೆ. ಸಮುದಾಯ ಬಾಂಧವರು ಕೇವಲ ಕೃಷಿಯಲ್ಲಿ ಮಾತ್ರ ತೊಡಗಿಸಿಕೊಳ್ಳದೇ ಇತರ ಕ್ಷೇತ್ರಗಳತ್ತಲೂ ಗಮನಹರಿಸುತ್ತಿ ದ್ದಾರೆ. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಮುದಾಯ ಮುಂದೆ ಬರಬೇಕಿದೆ ಎಂದರು.

ಕೆಸರು ಗದ್ದೆ ಕ್ರೀಡಾಕೂಟಗಳು ಪರಸ್ಪರ ಸಾಮರಸ್ಯ ವೃದ್ಧಿಗೆ ಸಹಕಾರಿಯಾಗಿವೆ. ಮಕ್ಕಳು ಮಹಿಳೆಯರು, ವೃದ್ದರಾದಿಯಾಗಿ ಎಲ್ಲಾ ವಯೋಮಾನದ ಮಂದಿ ಕೆಸರು ಗದ್ದೆಯ ಕ್ರೀಡಾಕೂಟದಲ್ಲಿ ಒಂದುಗೂಡುವುದರಿAದ ನವ ಚೈತನ್ಯದೊಂದಿಗೆ ದೈಹಿಕ ಕ್ಷಮತೆಯನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಿಸಿದರು.

ಸಮುದಾಯದ ಮಕ್ಕಳು ಶೈಕ್ಷಣಿಕ ವಾಗಿ ಮುಂದೆ ಬರಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕು. ಮಕ್ಕಳಿಗೆ ಶಿಕ್ಷಣವೇ ನಿಜವಾದ ಆಸ್ತಿಯಾಗಿದ್ದು, ಪೋಷಕರು ಈ ನಿಟ್ಟಿನಲ್ಲಿ ನಿರ್ಲಕ್ಷö್ಯ ವಹಿಸದೇ ಉತ್ತಮ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣ ನೀಡಲು ಮುಂದಾಗಬೇಕೆAದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ, ಹುಣಸೂರು ಕ್ಷೇತ್ರದ ಶಾಸಕ ಹರೀಶ್ ಗೌಡ ಅವರುಗಳು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆಯೋಜನೆಗೊಳ್ಳುವ ಇಂತಹ ಕ್ರೀಡಾಕೂಟಗಳು ಪರಸ್ಪರ ಬಾಂಧವ್ಯ ವೃದ್ಧಿಸಿಕೊಳ್ಳಲು ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಅಬ್ಬೂರುಕಟ್ಟೆ ಒಕ್ಕಲಿಗರ ಸಮಾಜ ಉತ್ತಮ ಕ್ರೀಡಾಕೂಟ ಆಯೋಜಿಸಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎ.ಹೆಚ್. ತಿಮ್ಮಯ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಹರಪಳ್ಳಿ ರವೀಂದ್ರ, ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಉದ್ಯಮಿ ಅರುಣ್ ಕೊತ್ನಳ್ಳಿ, ಅಬ್ಬೂರುಕಟ್ಟೆ ಒಕ್ಕಲಿಗರ ಸಂಘದ ಸ್ಥಾಪಕ ಅಧ್ಯಕ್ಷ ವಿನೋದ್‌ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್, ನೇರುಗಳಲೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪ, ಹೊಸಳ್ಳಿ ಗ್ರಾಮಾಧ್ಯಕ್ಷ ಧರ್ಮಪ್ಪ, ವಿಎಸ್‌ಎಸ್‌ಎನ್ ಅಧ್ಯಕ್ಷ ಅರೆಯೂರು ಜಯಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಅಬ್ಬೂರುಕಟ್ಟೆ ಒಕ್ಕಲಿಗರ ಸಂಘದ ಕಟ್ಟಡ ನಿರ್ಮಾಣಕ್ಕೆ ಸ್ಥಳ ದಾನ ನೀಡಿದ ಲಲಿತ ಚಂದ್ರಪ್ಪ, ಕ್ರೀಡಾಕೂಟಕ್ಕೆ ಗದ್ದೆ ಒದಗಿಸಿದ ಕುಶಾಲಪ್ಪ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ವಾಲಿಬಾಲ್ ಪಂದ್ಯಾಟದಲ್ಲಿ ಕೂಗೂರು ಪಂಚಲಿAಗೇಶ್ವರ ಯುವಕ ಸಂಘ ಪ್ರಥಮ, ಮದಲಾಪುರ ಕಲ್ಪವೃಕ್ಷ ಯುವಕ ಸಂಘ ದ್ವಿತೀಯ, ಥ್ರೋಬಾಲ್‌ನಲ್ಲಿ ಶಾಂತಳ್ಳಿಯಲ್ಲಿ ಭಾಗ್ಯ ಫ್ರೆಂಡ್ಸ್ ಪ್ರಥಮ, ನೇಗಳ್ಳೆಯ ವೀರಭದ್ರೇಶ್ವರ ಯುವತಿ ಮಂಡಳಿ ದ್ವಿತೀಯ ಸ್ಥಾನ ಪಡೆಯಿತು.

ಪುರುಷರ ವಿಭಾಗದ ಹಗ್ಗಜಗ್ಗಾಟದಲ್ಲಿ ನೇಗಳ್ಳೆ ತಂಡ ಪ್ರಥಮ, ನೇರಳೆ ತಂಡ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ನೇಗಳ್ಳೆ ಪ್ರಥಮ ಹಾಗೂ ಆಡಿನಾಡೂರು ದ್ವಿತೀಯ ಸ್ಥಾನ ಪಡೆಯಿತು. ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ರವೀಶ್ ಪ್ರಥಮ, ಅರೆಯೂರು ರಘು ದ್ವಿತೀಯ, ದಂಪತಿ ಓಟದಲ್ಲಿ ಅಬ್ಬೂರುಕಟ್ಟೆ ಸಂಭ್ರಮ್-ಭಾರ್ಗವಿ ಪ್ರಥಮ, ಮೋರಿಕಲ್ಲು ದೀಕ್ಷಿತ್-ನಿಶಾ ದ್ವಿತೀಯ, ಪಾಸಿಂಗ್‌ದ ಬಾಲ್‌ನಲ್ಲಿ ಚಿಕ್ಕಬ್ಬೂರು ವಾಣಿ ಪ್ರಥಮ, ಮೋರಿಕಲ್ಲಿ ಜ್ಯೋತಿ ದ್ವಿತೀಯ, ಪಾಸಿಂಗ್ ದ ಬಾಟಲ್‌ನಲ್ಲಿ ಪವನ್ ನೇಗಳ್ಳೆ ಪ್ರಥಮ ಸ್ಥಾನ ಪಡೆದರು.

ಇದರೊಂದಿಗೆ ಒಂದರಿAದ ೧೦ ನೇ ತರಗತಿ ವಿದ್ಯಾರ್ಥಿಗಳಿಗೆ, ಪಿಯುಸಿ ಯಿಂದ ಪದವಿವರೆಗಿನ ವಿದ್ಯಾರ್ಥಿ ಗಳಿಗೆ ಪ್ರತ್ಯೇಕ ವಿಭಾಗದಲ್ಲಿ ಗದ್ದೆ ಓಟ ಆಯೋಜಿಸಿ ಬಹುಮಾನ ವಿತರಿಸಲಾಯಿತು. ಸಂಘದ ಅಧ್ಯಕ್ಷ ಎ.ಹೆಚ್. ತಿಮ್ಮಯ್ಯ, ಉಪಾಧ್ಯಕ್ಷರಾದ ಜೋಯಪ್ಪ, ಲೋಕೇಶ್, ಕಾರ್ಯ ದರ್ಶಿ ಹೆಚ್.ಎ. ರಾಜೇಶ್, ಖಜಾಂಚಿ ಚಂದ್ರಪ್ರಸಾದ್, ನಿರ್ದೇಶಕ ಪ್ರಮೋದ್ ಸೇರಿದಂತೆ ಇತರರು ಕ್ರೀಡಾಕೂಟದ ಉಸ್ತುವಾರಿ ವಹಿಸಿದ್ದರು.