ಕೋವರ್ ಕೊಲ್ಲಿ ಇಂದ್ರೇಶ್

ಬೆAಗಳೂರು, ಜು. ೨೪ : ಕಾಳು ಮೆಣಸಿನ ದರ ದೇಶೀ ಮಾರುಕಟ್ಟೆಯಲ್ಲಿ ಸೋಮವಾರ ಪ್ರತೀ ಕೆಜಿಯೊಂದಕ್ಕೆ ೫೮೫ ರೂಪಾಯಿಗಳಿಗೆ ಏರಿಕೆ ಆಗಿದೆ. ಚಿಕ್ಕಮಗಳೂರು ಹಾಗೂ ಮಡಿಕೇರಿಯಲ್ಲಿ ವರ್ತಕರು ಇದೇ ದರದಲ್ಲಿ ರೈತರಿಂದ ಕಾಳುಮೆಣಸನ್ನು ಖರೀದಿಸಿದ್ದಾರೆ. ಕೆಲ ವರ್ಷಗಳಿಂದ ದರ ಕುಸಿತದಿಂದಾಗಿ ಚಿಂತಾಕ್ರಾAತರಾಗಿದ್ದ ಬೆಳೆಗಾರರ ಮೊಗದಲ್ಲಿ ಈಗ ಮಂದಹಾಸ ಮೂಡಲಾರಂಭಿಸಿದೆ. ನಾಲ್ಕೆöÊದು ವರ್ಷಗಳ ಹಿಂದೆ ಇದೇ ಕಾಳುಮೆಣಸು ಕಿಲೋಗ್ರಾಂಗೆ ೭೦೦ ರೂಪಾಯಿಗಳವರೆಗೂ ತಲುಪಿತ್ತು. ನಂತರ ವಿಯೆಟ್ನಾಂ ನಿಂದ ಶ್ರೀಲಂಕಾ ಮೂಲಕ ಆಮದಾದ ಕಾಳುಮೆಣಸು ಭಾರತದ ಮಾರುಕಟ್ಟೆಗೆ ಪ್ರವೇಶಿಸಿದ ನಂತರ ದರ ಪ್ರತೀ ಕಿಲೋಗ್ರಾಂಗೆ ೩೦೦ ರೂಪಾಯಿಗಳಿಗೆ ಕುಸಿತ ದಾಖಲಿಸಿತು. ಆದರೆ ಭಾರತದ ಕಾಳುಮೆಣಸು ಉತ್ತಮ ಗುಣಮಟ್ಟದ್ದಾಗಿದ್ದು ವಿಯೆಟ್ನಾಂನ ಕಾಳು ಮೆಣಸು ಕಳಪೆ ದರ್ಜೆಯದಾಗಿದ್ದು ಅಂತರಾಷ್ಟಿçÃಯ ಮಾರುಕಟ್ಟೆಯಲ್ಲಿ ದೇಶದ ಮೆಣಸಿಗೆ ಉತ್ತಮ ಬೇಡಿಕೆ ಇದೆ.

ವಿಯೆಟ್ನಾಂ ಕಾಳುಮೆಣಸಿನ ವಾಮ ಮಾರ್ಗದ ಆಮದಿನ ನಂತರ ಎರಡು ವರ್ಷಗಳಲ್ಲಿ ೩೩೦-೩೫೦ ರೂಪಾಯಿಗಳ ಆಸುಪಾಸಿನಲ್ಲೇ ಇದ್ದ ದರ ನಿಧಾನಕ್ಕೆ ಏರಿಕೆ ದಾಖಲಿಸಿ ಈ ವರ್ಷದ ಆರಂಭದಲ್ಲೇ ೫೦೦ ರೂಪಾಯಿಗಳ ಗಡಿ ದಾಟಿತು. ಇದೀಗ ಕಿಲೋಗೆ ೬೦೦ ರೂಪಾಯಿಗಳತ್ತ ಮುನ್ನುಗ್ಗುತ್ತಿದೆ.

ದೇಶದಲ್ಲಿ ಮುಖ್ಯವಾಗಿ ಮಸಾಲೆಗಳನ್ನು ತಯಾರಿಸುವ ಕೈಗಾರಿಕೆಗಳಲ್ಲಿ ಕಾಳುಮೆಣಸಿಗೆ ಬೇಡಿಕೆ ಹೆಚ್ಚಾಗಿರುವುದೇ ದರ ಏರಿಕೆಗೆ ಮೂಲ ಕಾರಣ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಇದೇ ಬೇಡಿಕೆ ಕೆಲ ತಿಂಗಳ ಕಾಲ ಮುಂದುವರಿಯಲಿದ್ದು ಕಾಳುಮೆಣಸಿನ ದರ ಕಿಲೋಗೆ ೭೦೦ ತಲುಪುವ ಸಾಧ್ಯತೆ ಹೆಚ್ಚಾಗಿದೆ ಎಂದು ಬೆಂಗಳೂರಿನ ರಫ್ತುದಾರರೊಬ್ಬರು ಹೇಳಿದರು. ಈ ವರ್ಷ ರೋಗ ಬಾಧೆಯಿಂದಾಗಿ ಕಾಳು ಮೆಣಸಿನ ಬಳ್ಳಿಗಳು ನಾಶವಾಗಿದ್ದರಿಂದಾಗಿ ಕೇರಳದ ವೈನಾಡ್ ಜಿಲ್ಲೆಯಲ್ಲಿ ಅತೀ ಹೆಚ್ಚು ಬೆಳೆ ನಾಶ ಸಂಭವಿಸಿದೆ.

ದೇಶದ ಒಟ್ಟು ಕಾಳು ಮೆಣಸು ಉತ್ಪಾದನೆ ಸುಮಾರು ೭೦ ಸಾವಿರ ಟನ್‌ಗಳಷ್ಟಿದ್ದು ಇದರಲ್ಲಿ ಕರ್ನಾಟಕ ರಾಜ್ಯ ಮೊದಲನೇ ಸ್ಥಾನದಲ್ಲಿದೆ. ಈ ಹಿಂದೆ ಕೇರಳವು ಕಾಳು ಮೆಣಸು ಉತ್ಪಾದನೆಯಲ್ಲಿ ಮೊದಲ ಸ್ಥಾನ ಹೊಂದಿತ್ತು. ಆದರೆ ಪ್ರತೀ ವರ್ಷ ಕರ್ನಾಟಕ ರಾಜ್ಯದಲ್ಲಿ ಕಾಳು ಮೆಣಸಿನ ಬೆಳೆ ವಿಸ್ತೀರ್ಣ ಹೆಚ್ಚುತ್ತಾ ಸಾಗಿ ೨೦೧೭ ರಲ್ಲಿ ಕರ್ನಾಟಕವು ಕೇರಳವನ್ನು ಹಿಂದಿಕ್ಕಿ ಕಾಳುಮೆಣಸು ಬೆಳೆಯ ದೊಡ್ಡ ಉತ್ಪಾದಕನಾಗಿ ಹೊರಹೊಮ್ಮಿದೆ. ಆದರೆ ಇದೇ ಅವಧಿಯಲ್ಲಿ ಕೇರಳದಲ್ಲಿ ಕಾಳುಮೆಣಸಿನ ದರ ಉತ್ಪಾದನೆ ರೋಗ ಬಾಧೆಯಿಂದಾಗಿ ಕುಂಠಿತಗೊAಡಿದೆ.

ದೇಶದ ಕಾಳು ಮೆಣಸಿನ ಉತ್ಪಾದನೆ ಕಳೆದ ವರ್ಷ ೭೦ ಸಾವಿರ ಟನ್ ಇದ್ದುದು ಈ ವರ್ಷ ೬೪ ಸಾವಿರ ಟನ್‌ಗಳಿಗೆ ಕುಸಿತ ದಾಖಲಿಸಿದೆ ಎಂದು ಸಂಬಾರ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು. ರಾಜ್ಯದಲ್ಲಿ ಸುಮಾರು ೧.೮ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಳು ಮೆಣಸು ಬೆಳೆಯಲಾಗುತ್ತಿದ್ದು ಈ ವರ್ಷದ ಉತ್ಪಾದನೆ ೩೬ ಸಾವಿರ ಟನ್ ಗಳಾಗಿವೆ.

(ಮೊದಲ ಪುಟದಿಂದ) ಕಳೆದ ವರ್ಷ ರಾಜ್ಯದಲ್ಲಿ ೩೯ ಸಾವಿರ ಟನ್ ಕಾಳುಮೆಣಸು ಉತ್ಪಾದನೆ ಆಗಿತ್ತು. ಕೇರಳವು ಒಟ್ಟು ೮೨ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು ಬೆಳೆ ಬೆಳೆಯುತ್ತಿದ್ದು ಒಟ್ಟು ಉತ್ಪಾದನೆ ೨೧ ಸಾವಿರ ಟನ್‌ಗಳಾಗಿದ್ದು ಕಳೆದ ವರ್ಷವೂ ಇಷ್ಟೇ ಉತ್ಪಾದನೆ ಆಗಿತ್ತು. ತಮಿಳುನಾಡು ವಾರ್ಷಿಕ ೨ ಸಾವಿರ ಟನ್ ಕಾಳು ಮೆಣಸು ಉತ್ಪಾದಿಸುತ್ತಿದೆ.

ದೇಶದ ಕಾಫಿ ಉತ್ಪಾದನೆಯಲ್ಲಿ ಪುಟ್ಟ ಜಿಲ್ಲೆ ಕೊಡಗಿನ ಪಾಲು ಶೇ. ೩೦ ರಷ್ಟು ಆಗಿದ್ದರೆ ಕಾಳು ಮೆಣಸಿನ ಉತ್ಪಾದನೆಯಲ್ಲಿ ಕೊಡಗು ಶೇ. ೨೫ ರಷ್ಟು ಪಾಲು ಹೊಂದಿದೆ. ಕೊಡಗಿನ ಹವಾಮಾನ ಮತ್ತು ಮಣ್ಣು ಕಾಳು ಮೆಣಸಿನ ಬೆಳೆಗೆ ಸೂಕ್ತ ಮತ್ತು ಪೂರಕ ಆಗಿದ್ದು ಮುಂದಿನ ವರ್ಷಗಳಲ್ಲಿ ಕೊಡಗಿನ ಕಾಳು ಮೆಣಸಿನ ಉತ್ಪಾದನೆ ಗಣನೀಯವಾಗಿ ಏರಿಕೆ ದಾಖಲಿಸಲಿದೆ.