ಕೂಡಿಗೆ, ಜು. ೨೩: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿ ಈಗಾಗಲೇ ೨೦ ಎಕರೆಗಳಷ್ಟು ಪ್ರದೇಶದಲ್ಲಿ ಭತ್ತದ ಬೀಜೋತ್ಪನ್ನ ಮಾಡುವ ಉದ್ದೇಶದಿಂದ ಈಗಾಗಲೇ ಕೃಷಿ ಕ್ಷೇತ್ರದ ವ್ಯಾಪ್ತಿಯ ಗದ್ದೆಗಳಿಗೆ ನಾಟಿ ಮಾಡಲು ಸಿದ್ಧಪಡಿಸಿರುವ ಭತ್ತದ ಸಸಿ ಮಡಿಗಳನ್ನು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ. ಶಬಾನ್ ಎಂ. ಶೇಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಜಿಲ್ಲಾ ಕೃಷಿ ಕೇಂದ್ರ ಅಧಿಕಾರಿ ಟಿ.ಎಸ್. ಬೋಪಯ್ಯ ಕೃಷಿ ತಾಂತ್ರಿಕ ಅಧಿಕಾರಿ ನಾರಾಯಣ ರೆಡ್ಡಿ ಹಾಜರಿದ್ದರು.