ಸೋಮವಾರಪೇಟೆ, ಜು. ೨೩: ಸಮೀಪದ ಬೇಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಮಹಾ ಪೋಷಕರಾಗಿರುವ ಹಳೆಯ ವಿದ್ಯಾರ್ಥಿ, ಅಮೇರಿಕಾದಲ್ಲಿ ನೆಲೆಸಿರುವ ಡಾ. ಚಂದ್ರಮೌಳಿ ಹಾಗೂ ಪಾರ್ವತಿ ದಂಪತಿ ಮತ್ತು ಇದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸೋಮಶೇಖರÀ ಆಚಾರ್ ಅವರನ್ನು ಶಾಲಾಡಳಿತ ಮಂಡಳಿ ಮತ್ತು ಶಿಕ್ಷಕರು, ವಿದ್ಯಾರ್ಥಿಗಳು ಸನ್ಮಾನಿಸಿದರು.

ಶಾಲೆಯ ಹಳೆ ವಿದ್ಯಾರ್ಥಿ ಚಂದ್ರಮೌಳಿ ಅವರು ಕಳೆದೆರಡು ವರ್ಷಗಳಿಂದ ಪ್ರತಿ ತಿಂಗಳು ಈ ಶಾಲೆಗೆ ೫೦ ಸಾವಿರ ರೂಪಾಯಿ ಗಳನ್ನು ಕಂಪ್ಯೂಟರ್ ಶಿಕ್ಷಣ ಮತ್ತು ಮಕ್ಕಳ ಸಾಗಾಣಿಕೆ ವೆಚ್ಚವಾಗಿ ನೀಡುತ್ತಾ ಬಂದಿದ್ದಾರೆ. ಇದ ರೊಂದಿಗೆ ಗ್ರಂಥಾಲಯ, ಶೌಚಾಲಯ ಮತ್ತು ವಿದ್ಯಾರ್ಥಿಗಳಿಗೆ ಉತ್ತೇಜನವಾಗಿ ಬಹುಮಾನಗಳನ್ನು ನೀಡುತ್ತಾ ಶಾಲೆಗೆ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕ ಸಿ.ಕೆ. ಶಿವಕುಮಾರ್ ಸ್ಮರಿಸಿದರು.

ಈ ಸಂದರ್ಭ ಇವರ ಸೇವೆಯನ್ನು ಸ್ಮರಿಸುವ ಫಲಕವನ್ನು ವರ್ಷಗಳಿಂದ ಪ್ರತಿ ತಿಂಗಳು ಈ ಶಾಲೆಗೆ ೫೦ ಸಾವಿರ ರೂಪಾಯಿ ಗಳನ್ನು ಕಂಪ್ಯೂಟರ್ ಶಿಕ್ಷಣ ಮತ್ತು ಮಕ್ಕಳ ಸಾಗಾಣಿಕೆ ವೆಚ್ಚವಾಗಿ ನೀಡುತ್ತಾ ಬಂದಿದ್ದಾರೆ. ಇದ ರೊಂದಿಗೆ ಗ್ರಂಥಾಲಯ, ಶೌಚಾಲಯ ಮತ್ತು ವಿದ್ಯಾರ್ಥಿಗಳಿಗೆ ಉತ್ತೇಜನವಾಗಿ ಬಹುಮಾನಗಳನ್ನು ನೀಡುತ್ತಾ ಶಾಲೆಗೆ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕ ಸಿ.ಕೆ. ಶಿವಕುಮಾರ್ ಸ್ಮರಿಸಿದರು.

ಈ ಸಂದರ್ಭ ಇವರ ಸೇವೆಯನ್ನು ಸ್ಮರಿಸುವ ಫಲಕವನ್ನು ಅನಾವರಣ ಮಾಡಲಾಯಿತು. ಈ ಸಂದರ್ಭ ಕ್ಷೇತ್ರ ಸಮನ್ವಯ ಅಧಿಕಾರಿ ಹೇಮಂತ್, ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ಬಸವರಾಜ್, ದಾನಿಗಳಾದ ರವಿಶಂಕರ್, ಗುರುಪ್ರಸಾದ್, ಗುರು ಮಲ್ಲೇಶ್, ಪ್ರಭುದೇವ್, ಶಿಕ್ಷಕರಾದ ಯೋಗೇಶ್, ಪಂಚಾಯಿತಿ ಅಧ್ಯಕ್ಷ ಪ್ರಶಾಂತ್, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಸುದರ್ಶನ್ ಪ್ರಮುಖ ರಾದ ಉಲ್ಲಾಸ್, ಶಾಲಾಡಳಿತ ಮಂಡಳಿ ಅಧ್ಯಕ್ಷ ಬಸವರಾಜ್, ಶಿಕ್ಷಕಿ ನಿರ್ಮಲ, ರಂಗಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.