ವೀರಾಜಪೇಟೆ, ಜು. ೨೨: ಬಿಳುಗುಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸಿ ವರ್ಗಾವಣೆಯಾದ ಶಿಕ್ಷಕರಾದ ಪವಿತ್ರ ಪಿ.ಕೆ. ಹಾಗೂ ಕಿರಣ್‌ಕುಮಾರ್ ಅವರಿಗೆ ಬೀಳ್ಕೊಡುಗೆ ನೀಡಲಾಯಿತು. ಬಿಳುಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಐನಂಡ ಪ್ರತಾಪ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಅರುಣ್ ಆನ್ಸಿ ಡಿಸೋಜ ಶಿಕ್ಷಕರ ಸೇವೆಯ ಬಗ್ಗೆ ಮಾತನಾಡಿದರು. ಪಿ.ಡಿ.ಓ. ಚಂದ್ರಶೇಖರ್ ಮಾತನಾಡಿದರು.

ವರ್ಗಾವಣೆಗೊಂಡ ಶಿಕ್ಷಕರು ಮಕ್ಕಳ ಬಿಸಿ ಊಟಕ್ಕೆ ತಟ್ಟೆಗಳನ್ನು ಕೊಡುಗೆಯಾಗಿ ನೀಡಿದರು. ಇವರಿಗೆ ಶಾಲಾ ಮಕ್ಕಳು, ಶಾಲಾ ಸಿಬ್ಬಂದಿಗಳು, ಅಡುಗೆ ಸಹಾಯಕರು, ಪ್ರಾಥಮಿಕ ಶಾಲಾ ಶಿಕ್ಷಕರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಅಮ್ಮತ್ತಿ ಕ್ಲಸ್ಟರ್ ಸಿ.ಆರ್.ಪಿ. ಪ್ರವೀಣ್, ಶಿಕ್ಷಕರಾದ ಜ್ಞಾನಮಣಿ, ಲೀಲಾವತಿ, ಲಿನ್ನಿ, ಸಾವಿತ್ರಿ, ಆಶಾರಾಣಿ ಸೇರಿದಂತೆ ಅಡುಗೆ ಸಹಾಯಕರು, ವಿದ್ಯಾರ್ಥಿಗಳು ಹಾಜರಿದ್ದರು.