ಸೋಮವಾರಪೇಟೆ, ಜು. ೨೨: ಇನ್ನರ್ ವೀಲ್ ಆಫ್ ಸೋಮವಾರಪೇಟೆ ಗೋಲ್ಡ್ನ ನೂತನ ಸಾಲಿನ ಆಡಳಿತ ಮಂಡಳಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ತಾ. ೨೩ ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ಸಾಕ್ಷಿ ಕನ್ವೆನ್‌ಷನ್ ಸಭಾಂಗಣದಲ್ಲಿ ನಡೆಯಲಿದೆ.
ನೂತನ ಸಾಲಿನ ಅಧ್ಯಕ್ಷೆ ಸಂಧ್ಯಾ ಕೃಷ್ಣಪ್ಪ ಹಾಗೂ ಕಾರ್ಯದರ್ಶಿ ತನ್ಮಯಿ ಪ್ರವೀಣ್ ಅವರುಗಳಿಗೆ ನಿಕಟಪೂರ್ವ ಜಿಲ್ಲಾ ಗವರ್ನರ್ ಡಾ. ಸಾರಿಕ ಪ್ರಸಾದ್ ಪದಗ್ರಹಣ ನೆರವೇರಿಸಲಿದ್ದಾರೆ ಎಂದು ಅಧ್ಯಕ್ಷೆ ಪ್ರೇಮ ಹೃಷಿಕೇಶ್ ತಿಳಿಸಿದ್ದಾರೆ.