ಗೋಣಿಕೊಪ್ಪಲು, ಜು. ೨೩: ಜಿಟಿ ಜಿಟಿ ಮಳೆಯ ನಡುವೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂಬದಿಯಿAದ ಘೀಳಿಡುತ್ತಾ ಬಂದ ಕಾಡಾನೆಗೆ ಬೆದರಿದ ಕಾರ್ಮಿಕ ವಿನೋದ್ (೩೬) ಅಲಿಯಾಸ್ ಚಂದನ್ ಎಂಬಾತ ಕಾಡಾನೆಯಿಂದ ತಪ್ಪಿಸಿಕೊಳ್ಳುವ ಸಂದರ್ಭ ಕೈ ಹಾಗೂ ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗೊಂಡು ಆಸ್ಪತ್ರೆಗೆ ಸೇರಿದ ಘಟನೆ ಅಮ್ಮತ್ತಿ ಸಮೀಪದ ಕಣ್ಣಂಗಾಲ ಬಳಿ ನಡೆದಿದೆ.
ತೀವ್ರ ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿನೋದ್ ಶನಿವಾರ ರಾತ್ರಿ ೯.೩೦ ಸಮಯದಲ್ಲಿ ಕಣ್ಣಂಗಾಲ ಗ್ರಾಮ ಪಂಚಾಯಿತಿ ಮುಂಭಾಗದ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ತನ್ನ ಮನೆಯತ್ತ ತೆರಳುತ್ತಿದ್ದ. ಈ ಸಂದರ್ಭ ಸಮೀಪದ ಕಾಫಿ ತೋಟದಿಂದ ರಸ್ತೆಗೆ ಆಗಮಿಸಿದ ಕಾಡಾನೆ ವಿನೋದ್ನತ್ತ ಘೀಳಿಡುತ್ತಾ ಓಡಿದ ಆನೆಯ ಸದ್ದಿಗೆ ಬೆದರಿದ ವಿನೋದ್ ಜೋರಾಗಿ ಕಿರುಚಿಕೊಂಡು ಆನೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ರಸ್ತೆ ಬದಿಗೆ ಬಿದ್ದಿದ್ದು ಆತನ ಕೈ ಕಾಲುಗಳಿಗೆ ಗಾಯವಾಗಿದೆ.
ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ನಾಗರಿಕರು ವಿನೋದ್ನನ್ನು ಕಂಡು ಅಮ್ಮತ್ತಿಯ ಆಸ್ಪತ್ರೆಗೆ ಸೇರಿಸಿದ್ದಾರೆ. ಸುದ್ದಿ ತಿಳಿದ ಕೆಪಿಸಿಸಿ ರಾಜ್ಯ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ತಡ ರಾತ್ರಿ ಅಮ್ಮತ್ತಿ ಆಸ್ಪತ್ರೆಗೆ ತೆರಳಿ ವಿನೋದ್ನ ಯೋಗ ಕ್ಷೇಮ ವಿಚಾರಿಸಿದರು. ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸ್ಥಳದಿಂದ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಬೆಂಗಳೂರಿನಲ್ಲಿದ್ದ ಶಾಸಕರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಕಾಡಾನೆ ಉಪಟಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.ಆಸ್ಪತ್ರೆಯಲ್ಲಿರುವ ವಿನೋದ್ಗೆ ಚಿಕಿತ್ಸೆ ಮುಂದುವರಿದಿದೆ. - ಹೆಚ್.ಕೆ. ಜಗದೀಶ್ / ವಾಸು