ಮಡಿಕೇರಿ, ಜು. ೨೩: ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಪೊಲೀಸ್ ಇಲಾಖೆ ಮಾದಕ ವಸ್ತುಗಳ ವಿರುದ್ಧ ಸಮರಸಾರಿ ಆರೋಪಿಗಳನ್ನು ಬಂಧಿ ಸುತ್ತಿದೆ. ಕಳೆದ ಒಂದು ತಿಂಗಳಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ಮಾಡಿರುವ ೫೦ಕ್ಕೂ ಹೆಚ್ಚು ಆರೋಪಿಗಳು ಬಂಧನ ಕ್ಕೊಳಗಾಗಿದ್ದಾರೆ.
ಇದೀಗ ಸುನ್ನಿ ಮುಸ್ಲಿಂ ಜಮಾಅತ್ ಕಮಿಟಿಯಲ್ಲಿ ಒಂದಾದ ಕೊಂಡAಗೇರಿ ಸುನ್ನಿ ಮುಸ್ಲಿಂ ಜಮಾಅತ್, ತನ್ನ ಜಮಾಅತ್ ವ್ಯಾಪ್ತಿಯ ಸದಸ್ಯರು ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ಮಾಡುವುದು ಕಂಡುಬAದಲ್ಲಿ ನಿರ್ದಾಕ್ಷಿಣ್ಯ ಕ್ರಮವಹಿಸಿ ಜಮಾಅತ್‌ನಿಂದ ನೀಡಲಾಗುವ ಧೃಢೀಕರಣ ಪತ್ರದಲ್ಲಿ ನಮೂದಿಸ ಲಾಗುವುದು ಎಂದು ಮಸೀದಿಯ ಮುಂಭಾಗ ಪ್ರಕಟಣೆ ಮಾಡುವ ಮೂಲಕ ಕೊಡಗಿನ ಇತರೆ ಮುಸ್ಲಿಂ ಜಮಾಅತ್‌ಗಳಿಗೆ ಮಾದರಿಯಾಗಿದೆ.
ವಿಚಿತ್ರ ಕೇಶ ವಿನ್ಯಾಸ ಮಾಡುವಂತಿಲ್ಲ!
ಕೊAಡAಗೇರಿ ಮುಸ್ಲಿಂ ಜಮಾಅತ್ ಇತ್ತೀಚಿಗೆ ಪ್ರಕಟಿಸಿರುವ ಪ್ರಕಟಣೆಯಲ್ಲಿ ಜಮಾಅತ್ ಸದಸ್ಯರು ವಿಚಿತ್ರ ಕೇಶ ವಿನ್ಯಾಸ ಹಾಗೂ ಕೇಶ ಪ್ರದರ್ಶನ ಮಾಡುವಂತಿಲ್ಲ.
ವಿಚಿತ್ರ ವಸ್ತç ಶೈಲಿ, ಹರಿದ ಉಡುಪು ಧರಿಸಿ ಮಸೀದಿಯ ಒಳಗೆ ಪ್ರವೇಶಿಸುವಂತಿಲ್ಲ. ಮದುವೆ ಹಾಗೂ ಇತರೆ ಕಾರ್ಯಕ್ರಮಗಳ ಹೆಸರಿನಲ್ಲಿ ಅನಾಚಾರ, ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅನಾಗರಿಕ ವರ್ತನೆಗಳಿಗೆ ಅವಕಾಶವಿಲ್ಲ. ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ನೀಡುವಂತಿಲ್ಲ. ಜಮಾಅತ್‌ಗೆ ಊರಿಗೆ, ಸಮಾಜಕ್ಕೆ ಹಾಗೂ ಇತರೆ ಸಮುದಾಯಕ್ಕೆ ಕಳಂಕ ತರುವುದು ಕಂಡುಬAದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಮಸೀದಿ, ಶಾಲಾ ಆವರಣದಲ್ಲಿ ಧೂಮಪಾನ ನಿಷೇಧಿಸಲಾಗಿದೆ ಎಂದು ಸೂಚಿಸಲಾಗಿದೆ.
ಕೊಂಡAಗೇರಿ ಸುನ್ನಿ ಮುಸ್ಲಿಂ ಜಮಾಅತ್ ಕೈಗೊಂಡಿರುವ ಕ್ರಮವನ್ನು ಇತರೆ ಜಮಾಅತ್‌ಗಳು ಕೂಡ ಕೈಗೊಳ್ಳುವಂತೆ ಇದೀಗ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮಾದಕವಸ್ತುಗಳ ಸೇವನೆ ಹಾಗೂ ಮಾರಾಟ ಮಾಡುವ ಜಮಾಅತ್ ವ್ಯಾಪ್ತಿಯ ಸದಸ್ಯರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು, ಒಳ್ಳೆಯ ಕಾರ್ಯವಾಗಿದೆ.
ಎಲ್ಲರಿಗೂ ಮಾದರಿಯಾಗುವಂತೆ ಕೊಂಡAಗೇರಿ ಸುನ್ನಿ ಮುಸ್ಲಿಂ ಜಮಾಅತ್ ನೂತನ ಕಮಿಟಿ ಕಾರ್ಯನಿರ್ವಹಿಸುತ್ತಿದೆ.
ಜಿಲ್ಲೆಯಲ್ಲಿ ಮಾದಕವಸ್ತುಗಳ ದೊಡ್ಡ ಜಾಲ ಪತ್ತೆಯಾಗುತ್ತಿದೆ. ಇದರ ವಿರುದ್ಧ ಪೊಲೀಸ್ ಇಲಾಖೆ ನಡೆಸುವ ಕಾರ್ಯಾಚರಣೆಗಳು ಶ್ಲಾಘನೀಯವಾಗಿದ್ದು, ಗ್ರಾಮೀಣ ಮಟ್ಟದಿಂದಲೇ ಮಾದಕವಸ್ತುಗಳನ್ನು ಮುಕ್ತ ಮಾಡಲು ಕೊಡಗಿನ ಎಲ್ಲಾ ಜಮಾಅತ್‌ಗಳು ಪಣತೊಡಬೇಕಾಗಿದೆ ಎಂದು ಹಾಲುಗುಂದ ಗ್ರಾ.ಪಂ. ಸದಸ್ಯ ಕೊಂಡAಗೇರಿಯ ಅಬ್ದುರಹಮಾನ್ (ಅಂದಾಯಿ) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ಮಾಡುವವರಿಗೆ ಜಮಾಅತ್ ತಪ್ಪುದಾರಿಯತ್ತ ಸಾಗದಂತೆ ಮೋಟಿವೇಶನ್ ತರಗತಿಗಳ ಮಾದರಿಯಲ್ಲಿ ಮನದಟ್ಟು ಮಾಡಬೇಕು.
ಮೊದಲು ಮುನ್ನೆಚ್ಚರಿಕೆ ನೀಡಬೇಕು. ನಂತರವೂ ಕೂಡ ಮಾದಕವಸ್ತುಗಳ ಸೇವನೆ ಹಾಗೂ ಮಾರಾಟ ಮಾಡುತ್ತಿದ್ದರೆ ಕ್ರಮ ಕೈಗೊಳ್ಳಬೇಕು. ಮದುವೆ ಸಮಾರಂಭಗಳಲ್ಲಿ ಅನಾಚರ ನಡೆಸುವುದು ಹಾಗೂ ವಿಚಿತ್ರ ಕೇಶವಿನ್ಯಾಸಗಳ ಬಗ್ಗೆ ಕೊಂಡAಗೇರಿ ಸುನ್ನಿ ಮುಸ್ಲಿಂ ಜಮಾಅತ್ ತೆಗೆದುಕೊಂಡಿರುವ ಕ್ರಮಗಳು ಎಲ್ಲರಿಗೂ ಮಾದರಿಯಾಗಿದೆ ಎಂದು ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ತಮ್ಲಿಕ್ ದಾರಿಮಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
-ಕೆ.ಎಂ ಇಸ್ಮಾಯಿಲ್ ಕಂಡಕರೆ