ಚೆಯ್ಯಂಡಾಣೆ, ಜು ೨೩. ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೆಶನ್ ಕತ್ತರ್ ಸಮಿತಿಯ ವಾರ್ಷಿಕ ಮಹಾ ಸಭೆಯು ಕತ್ತರ್ ಮದೀನಾ ಖಲೀಫಾ ಹಾಲ್ನಲ್ಲಿ ನಡೆಯಿತು.
ಕಾರ್ಯಕ್ರಮವು ಹಾಫಿಲ್ ಉಮರುಲ್ ಫಾರೂಖ್ ಸಖಾಫಿ ಎಮ್ಮೆಮಾಡು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಉದ್ಘಾಟನೆಯನ್ನು ಶಾಫಿ ಅನ್ವಾರಿ ಕೊಡಗರಹಳ್ಳಿ ನೆರವೇರಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಶಫೀಕ್ ತಾವೂರು ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ನಂತರ ೨೦೨೩-೨೪ನೇ ಸಾಲಿನ ಹೊಸ ಅಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹಾಫಿಲ್ ಉಮರುಲ್ ಫಾರೂಖ್ ಸಖಾಫಿ, ಉಪಾಧ್ಯಕ್ಷರಾಗಿ ಉಸ್ಮಾನ್ ಕತ್ತಣಿ, ಕೋಶಾಧಿಕಾರಿ ಹಾರಿಸ್ ಕಿಕ್ಕರೆ, ಪ್ರಧಾನ ಕಾರ್ಯದರ್ಶಿಯಾಗಿ ಅಝರುದ್ದೀನ್ ಕೊಂಡAಗೇರಿ, ಕಾರ್ಯದಶಿಯಾಗಿ ಜಬ್ಬಾರ್ ಕೊಳಕೇರಿ, ಸಲಹಾ ಸಮಿತಿಯ ಸದಸ್ಯರಾಗಿ ಅಬ್ಬಾಸ್ ಸಖಾಫಿ ಬಲಮುರಿ, ಯಹ್ಯಾ ಸಅದಿ ಕಡಂಗ, ಯೂಸುಫ್ ಸಖಾಫಿ ಅಯ್ಯಂಗೇರಿ, ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿ ಶಾಫಿ ಅನ್ವಾರಿ ಕೊಡಗರಹಳ್ಳಿ, ಶಫೀಕ್ ತಾವೂರ್ ಸಮಿತಿ ಸಂಚಾಲಕರಾಗಿ ನಝೀರ್ ಮೂರ್ನಾಡು, ಆಸಿಫ್ ಅಹ್ಸನಿ ಕಂಡಕ್ಕರ, ಸೈಫುದ್ದೀನ್ ಎಡಪಾಲ, ಬಶೀರ್ ಎಮ್ಮೆಮಾಡು, ಝುಬೈರ್ ಕೊಳಕೇರಿ, ಮಜೀದ್ ಕೊಂಡAಗೇರಿ, ಅಶ್ರಫ್ ಕೊಡ್ಲಿಪೇಟೆ ಇವರುಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಝೀರ್ ಮೂರ್ನಾಡು ಸ್ವಾಗತಿಸಿ ವಂದಿಸಿದರು.