ಮಡಿಕೇರಿ, ಜು. ೨೩: ತಾಲೂಕಿನ ಅರ್ವತೋಕ್ಲು ಗ್ರಾಮದಲ್ಲಿ ಬೇಕೋಟ್ ಮಕ್ಕ ಕ್ಲಬ್ ವತಿಯಿಂದ ಆಯೋಜಿಸಿದ್ದ ಮೂರನೇ ವರ್ಷದ ಹಿಂದೂ ಕೆಸರುಗದ್ದೆ ಕ್ರೀಡಾಕೂಟ ಸಂಭ್ರಮದಿAದ ನಡೆಯಿತು.

ಮಳೆಯ ನಡುವೆ ಕ್ರಿಕೆಟ್, ಹಗ್ಗಜಗ್ಗಾಟ, ಗೂಟದ ಓಟ, ದಂಪತಿಗೆ ಡಿಕೆ ಹಾಳೆಯಲ್ಲಿ ಎಳೆಯುವ ಸ್ಪರ್ಧೆ ಸೇರಿದಂತೆ ವಿವಿಧ ವಿಭಾಗದಲ್ಲಿ ಓಟದ ಸ್ಪರ್ಧೆ ಹಾಗೂ ಮನರಂಜನಾ ಕ್ರೀಡೆಗಳು ತಳೂರು ಎಂ. ಚಂಗಪ್ಪ ಹಾಗೂ ಕುಶಾಲಪ್ಪ ಗದ್ದೆಯಲ್ಲಿ ನಡೆದವು.

ಕ್ರಿಕೆಟ್ ಪಂದ್ಯಾಟ, ಹಗ್ಗ ಜಗ್ಗಾಟ, ಓಟದ ಸ್ಪರ್ಧೆ ನೋಡುಗರ ಮೈನವಿರೇಳಿಸಿತು. ಕೆಸರಿನೋಕುಳಿಯಲ್ಲಿ ತಾ ಮುಂದು, ನಾ ಮುಂದು ಎಂದು ಓಡುತ್ತಾ ಆಟಗಾರರು ಸಂಭ್ರಮಿಸಿದರು.

ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗದ್ದೆಯ ಮಾಲೀಕರಾದ ತಳೂರು ಕುಶಾಲಪ್ಪ, ಚಂಗಪ್ಪ, ದೇವರಾಜು, ಕೃಷಿಕರಾದ ಪಟ್ಟಾಂದಿರ ಪೂವಯ್ಯ, ಕಡ್ಲೇರ ಎಂ. ಗಣೇಶ್, ಕೋಳುಮಾಡನ ಉತ್ತಪ್ಪ, ಮುಂಜಾAದೀರ ಸುಬ್ಬಯ್ಯ, ರಮೇಶ್, ಮಾಜಿ ಸೈನಿಕ ತಳೂರು ಕೇಶವ, ಜಬ್ಬಂಡ ಕುಟ್ಟಪ್ಪ, ಕ್ಲಬ್ ಅಧ್ಯಕ್ಷ ತಳೂರು ವಿವೇಕ್, ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಗಿರಿ ಅಯ್ಯಪ್ಪ, ಜಂಟಿ ಕಾರ್ಯದರ್ಶಿ ಮನೋಜ್ ಆಚಾರ್ಯ, ಸಲಹೆಗಾರ ಕಡ್ಲೇರ ಕೀರ್ತನ್ ಸೇರಿದಂತೆ ಇನ್ನಿತರರು ಹಾಜರಿದ್ದರು.