ಮಡಿಕೇರಿ, ಜು. ೨೨: ಕರ್ನಾಟಕ ಲೇಖಕಿಯರ ಸಂಘವು ಕೊಡಮಾಡುವ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಜಿಲ್ಲೆಯ ಲೇಖಕಿ ಸಹನಾ ಕಾಂತಬೈಲು ಪ್ರಶಸ್ತಿಗೆ ಭಾಜನರಾಗಿದ್ದಾರೆ. ೨೦೨೧ ಮತ್ತು ೨೦೨೨ನೇ ಸಾಲಿನ ದತ್ತಿ ಪ್ರಶಸ್ತಿಗಳಿಗೆ ನಾಡಿನ ಲೇಖಕಿಯರ ಕೃತಿಗಳನ್ನು ಆಯ್ಕೆ ಮಾಡಲಾಗಿದ್ದು, ೨೦೨೧ನೇ ಸಾಲಿಗೆ ನಾಗರತ್ನ ಚಂದ್ರಶೇಖರ್ ಲಲಿತ ಪ್ರಬಂಧ ದತ್ತಿ ಪ್ರಶಸ್ತಿಗೆ ಸಹನಾ ಕಾಂತಬೈಲು ಅವರ ‘ಇದು ಬರಿ ಮಣ್ಣಲ್ಲ’ ಕೃತಿ ಆಯ್ಕೆಯಾಗಿದೆ.

ಕೊಡಗಿನ ಗಡಿ ಚೆಂಬು ಗ್ರಾಮದ ಬಾಲಂಬಿ ನಿವಾಸಿಯಾಗಿರುವ ಸಹನಾ ಅವರ ಇದೇ ಕೃತಿಗೆ ಬಸವ ಪುರಸ್ಕಾರ, ಶ್ರೇಷ್ಠ ಕೃತಿ ರತ್ನ ಪ್ರಶಸ್ತಿ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರಮ್ಮ ದತ್ತಿನಿಧಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.