ಗೋಣಿಕೊಪ್ಪಲು, ಜು. ೨೨: ದ. ಕೊಡಗಿನಲ್ಲಿ ಮಳೆರಾಯನ ಅಬ್ಬರ ಹೆಚ್ಚಾಗಿದೆ. ೨ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಭತ್ತದ ಗದ್ದೆಗಳಲ್ಲಿ ಕಾರ್ಮಿಕರು ಹಾಗೂ ರೈತರು ಕೃಷಿ ಚಟುವಟಿಕೆಯನ್ನು ಚುರುಕುಗೊಳಿಸಿದ್ದಾರೆ. ಗದ್ದೆಗಳಲ್ಲಿ ಪೈರು ನೆಡುವ ಕಾರ್ಯದಲ್ಲಿ ಮುಂಜಾನೆಯಿAದಲೇ ತೊಡಗಿಸಿಕೊಂಡಿದ್ದಾರೆ.
ಮಳೆ ಹಾಗೂ ಗಾಳಿಯ ರಭಸಕ್ಕೆ ಪೊನ್ನಂಪೇಟೆ ತಾಲೂಕಿನ ಹುದಿಕೇರಿ, ಬಾಳೆಲೆ, ಶ್ರೀಮಂಗಲ ಹೋಬಳಿಯ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ರಸ್ತೆ ಬದಿಯ ಮರಗಳು ಗಾಳಿಯ ರಭಸಕ್ಕೆ ವಿದ್ಯುತ್ ಲೈನ್ನ ಮೇಲೆ ಉರುಳಿ ಬೀಳುತ್ತಿರುವುದರಿಂದ ವಿದ್ಯುತ್ ಕಂಬಗಳು ನೆಲಕಚ್ಚುತ್ತಿವೆ. ತೀವ್ರ ಗಾಳಿಯಿಂದಾಗಿ ಬಿರುನಾಣಿ-ಹುದಿಕೇರಿ ಪೊರಾಡು, ಹೈಸೊಡ್ಲೂರು ಸಂಪರ್ಕ ರಸ್ತೆಯ ಕಕ್ಕಟ್ಟ್ ಹೊಳೆ ನದಿ ಸೇತುವೆ ಸಮೀಪ ರಸ್ತೆಗೆ ಅಡ್ಡಲಾಗಿ ಮರವೊಂದು ಬಿದ್ದಿದ್ದು, ಇದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ತೆರವುಗೊಳಿಸಿದರು.
ಕೊಂಗಣ ಗ್ರಾಮದ ಕೆ.ಸುಭಾಶ್ ಎಂಬುವರಿಗೆ ಸೇರಿದ ಲೈನ್ ಮನೆಯ ಮೇಲೆ ಮರ ಬಿದ್ದಿದ್ದು ಮೂರು ಶೀಟ್ಗಳಿಗೆ ಹಾನಿಯಾಗಿದೆ. ಇದನ್ನು ಹೊರತುಪಡಿಸಿದರೆ ಪೊನ್ನಂಪೇಟೆ ತಾಲೂಕಿನ ಯಾವುದೇ ಭಾಗದಲ್ಲಿ ಮಳೆ ಗಾಳಿಗೆ ಮನೆಗಳಿಗೆ ಹಾನಿ ಉಂಟಾಗಿಲ್ಲ ಎಂದು ಪೊನ್ನಂಪೇಟೆ ತಹಶೀಲ್ದಾರ್ ಪ್ರಶಾಂತ್ ಮಾಹಿತಿ ನೀಡಿದ್ದಾರೆ. (ಹೆಚ್.ಕೆ.ಜಗದೀಶ್)