ಕರಿಕೆ, ಜು. ೨೧: ಕೆಲದಿನಗಳಿಂದ ಗ್ರಾಮದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಗಾಳಿಗೆ ಅಡಿಕೆ, ಗೇರು, ರಬ್ಬರ್ ಮರಗಳು ಮುರಿದು ಬಿದ್ದ ಪರಿಣಾಮ ವಿಪರೀತ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಚೆತ್ತುಕಾಯ ಹದಿಮೂರನೇ ಮೈಲು ಜಾನಕಿ ಅವರ ಅಡಿಕೆ ಮರಗಳು ನೆಲಕಚ್ಚಿದ್ದು, ಪಚ್ಚೆ ಪಿಲಾವು ಜನಾರ್ದನ ಎಂಬವರಿಗೆ ಸೇರಿದ ಗೇರು ಮರಗಳು ಮುರಿದು ಬಿದ್ದಿವೆ.